ಹಾವೇರಿ | ಸೋಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಆಗಸ್ಟ್ 25ರಿಂದ ಸೆಪ್ಟೆಂಬರ್ 15ರವರೆಗೆ ಜಾಗೃತಿ ಅಭಿಯಾನ: ಜೇಬ್ರಿನ್ ಖಾನ್

Date:

Advertisements

“ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನವನ್ನು ಆಗಸ್ಟ್ 25ರಿಂದ ಸೆಪ್ಟೆಂಬರ್ 15ರವರೆಗೆ ಹಮ್ಮಿಕೊಳ್ಳಲಾಗಿದೆ” ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಜಿಲ್ಲಾ ಯುವ ಕಾರ್ಯದರ್ಶಿ ಜೇಬ್ರಿನ್ ಖಾನ್ ತಿಳಿಸಿದರು.

ಹಾವೇರಿ ಜಿಲ್ಲೆಯ ರಾಣಿಬೆನ್ನೂರ ಪಟ್ಟಣದಲ್ಲಿ ಪತ್ರಿಕಾ ಹೇಳಿಯಲ್ಲಿ ಅವರು ಮಾತನಾಡಿ, “ಡಿಜಿಟಲ್ ಸ್ವಾತಂತ್ರ್ಯ– ಸೈಬರ್ ವಂಚನೆ, ಜೂಜಾಟ ಮತ್ತು ಗೇಮಿಂಗ್ ವ್ಯಸನದಿಂದ ಯುವಕರನ್ನು ರಕ್ಷಿಸುವುದು”ಹೇಗೆ ಎಂಬಿತ್ಯಾದಿ ವಿಷಯಗಳ ಕುರಿತು ಯುವಕರಿಗೆ ಉಪನ್ಯಾಸ ನೀಡಲಾಗುವುದು ಎಂದರು.

“ನಮ್ಮ ಯುವಕರು ಮತ್ತು ಕುಟುಂಬಗಳು ಸೈಬರ್ ವಂಚನೆ, ಸೈಬರ್ ದಾಳಿಗಳು, ಆನ್‌ಲೈನ್ ಜೂಜಾಟ, ಬೆಟ್ಟಿಂಗ್ ಮತ್ತು ಗೇಮಿಂಗ್ ವ್ಯಸನದಿಂದ ಹೆಚ್ಚುತ್ತಿರುವ ಅಪಾಯಗಳನ್ನು ಎದುರಿಸುತ್ತಿದ್ದಾರೆ. ಇವು ಜೀವನವನ್ನು ಹಾಳುಮಾಡುವುದು, ಉಳಿತಾಯವನ್ನು ನಾಶಮಾಡುವುದು, ಜನರನ್ನು ಸಾಲಕ್ಕೆ ತಳ್ಳುವುದು ಮತ್ತು ಆತ್ಮಹತ್ಯೆಗಳಿಗೆ ಕಾರಣವಾಗುತ್ತಿರುವುದರಿಂದ ಈ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ” ಎಂದು ತಿಳಿಸಿದರು.

Advertisements

ಅಭಿಯಾನದ ಉದ್ದೇಶಗಳು: ಜಾಗೃತಿ ಯುವಕರು, ಪೋಷಕರು ಮತ್ತು ಸಾರ್ವಜನಿಕರಿಗೆ ಡಿಜಿಟಲ್ ಅಪಾಯಗಳ ಬಗ್ಗೆ ತಿಳಿಸುವುದು. ಬೆಂಬಲ: ಬಲಿಪಶುಗಳು ಮತ್ತು ಕುಟುಂಬಗಳ ಕಥೆಗಳನ್ನು ಹಂಚಿಕೊಳ್ಳಲು ಹಾಗೂ ಸಹಾಯ ಪಡೆಯಲು ಪ್ರೋತ್ಸಾಹಿಸುವುದು. ವಕಾಲತ್ತು: ಸರ್ಕಾರದ ಬಳಿ ಕಠಿಣ ಕಾನೂನುಗಳು ಹಾಗೂ ವ್ಯಸನಮುಕ್ತ ಸೇವೆಗಳಿಗಾಗಿ ಒತ್ತಾಯಿಸುವುದು.

ಪ್ರಮುಖ ಸಂದೇಶಗಳು: ಸೈಬರ್ ವಂಚನೆ ನಮ್ಮ ಸಂಪತ್ತನ್ನು ಕದಿಯುತ್ತಿದೆ. ಜೂಜು, ತ್ವರಿತ ಸಾಲ ಮತ್ತು ಬೆಟ್ಟಿಂಗ್ ಕುಟುಂಬಗಳನ್ನು ನಾಶಪಡಿಸುತ್ತಿವೆ. ಆನ್ಲೈನ್ ಗೇಮಿಂಗ್ ವ್ಯಸನ ಯುವಕರ ಅಧ್ಯಯನ, ಆರೋಗ್ಯ ಮತ್ತು ಸಂಬಂಧಗಳನ್ನು ಹಾಳುಮಾಡುತ್ತಿದೆ.

“ವಿವಿಧ ಹಂತಗಳ ಚಟುವಟಿಕೆಗಳು ತಾಲ್ಲೂಕು, ಸ್ಥಳೀಯ ವಾಗಿ ಬೀದಿ ನಾಟಕಗಳು, ಜಾಗೃತಿ ಭಾಷಣ, ಪೋಸ್ಟರ್‌ಗಳು, ಸಾಮಾಜಿಕ ಮಾಧ್ಯಮ ಸವಾಲು” ವಿಷಯಗಳ ಕುರಿತು ಉಪನ್ಯಾಸ ನಡೆಸಲಾಗುವುದು. ಜಿಲ್ಲಾ ಮಟ್ಟ ದಲ್ಲಿ ಬೀದಿ ನಾಟಕಗಳು, ವಿಚಾರ ಸಂಕಿರಣಗಳು, ರ್ಯಾಲಿಗಳು, ಸಾಕ್ಷ್ಯಗಳು, ಜಿಲ್ಲಾಧಿಕಾರಿ/ತಹಶೀಲ್ದಾರರಿಗೆ ಮನವಿ ಪತ್ರ ನೀಡಲಾಗುವುದು. ರಾಜ್ಯ ಮಟ್ಟದಲ್ಲಿ ಬೀದಿ ನಾಟಕಗಳು, ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಇತ್ಯಾದಿಯಾಗಿ ಯುವಕರಲ್ಲಿ ಜಾಗೃತಿ ಮೂಡಿಸಲಾಗುವುದು.

“ಯುವಕರು ನಮ್ಮ ದೇಶದ ಭವಿಷ್ಯ. ಡಿಜಿಟಲ್ ಅಪಾಯಗಳಿಂದ ಅವರನ್ನು ರಕ್ಷಿಸುವುದು ಸಮಾಜದ ಜವಾಬ್ದಾರಿ. ಈ ಅಭಿಯಾನದ ಮೂಲಕ ನಾವು ಸರ್ಕಾರ, ಸಮಾಜ ಮತ್ತು ಕುಟುಂಬಗಳನ್ನು ಒಗ್ಗೂಡಿಸಿ ಭವಿಷ್ಯವನ್ನು ಸುರಕ್ಷಿತಗೊಳಿಸಲು ಪ್ರಯತ್ನಿಸುತ್ತೇವೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ₹5 ಲಕ್ಷ ಮೌಲ್ಯದ ಗಾಂಜಾ ಜಪ್ತಿ : ಇಬ್ಬರ ಬಂಧನ

“ಈ ಅಭಿಯಾನಕ್ಕೆ ಎಲ್ಲಾ ಸಮಾಜ ಸುಧಾರಕ ಮತ್ತು ಯುವ ಸಂಘಟನೆಗಳು ಸಹಕಾರ ನೀಡಲು ಮನವಿ. ಯುವ ಸಮುದಾಯದ ಭವಿಷ್ಯ ರೂಪಿಸುವಲ್ಲಿ ನಾವೆಲ್ಲರೂ ಒಗ್ಗೂಡಬೇಕು. ಈ ಮೂಲಕ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರೆ ನೀಡುತ್ತದೆ” ಎಂದು ಜೇಬ್ರಿನ್ ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗಣೇಶ ಚತುರ್ಥಿ: ಪ್ರಾಣಿ ವಧೆ ಹಾಗೂ ಮೀನು-ಮಾಂಸ ಮಾರಾಟ ನಿಷೇಧ

"ಗಣೇಶ ಚತುರ್ಥಿ ಪ್ರಯುಕ್ತ ಆಗಸ್ಟ್ 27 ರಂದು ಬುಧವಾರ ಪ್ರಾಣಿ ವಧೆ...

ಬೀದರ್ | ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ‌ : ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ಬೀದರ್ ವತಿಯಿಂದ...

ವಿಜಯಪುರ-ಬಬಲೇಶ್ವರ ಆ.27ರಿಂದ ಎರಡು ಬಸ್ಸುಗಳ ಸೇವೆ ಪ್ರಾರಂಭ

ವಿಜಯಪುರ-ಬಬಲೇಶ್ವರ ಮತ್ತು ಬಬಲೇಶ್ವರ-ವಿಜಯಪುರ ನಡುವೆ ಆಗಸ್ಟ್ 27 ರಿಂದ ಸಾಮಾನ್ಯ ಸಾರಿಗೆ...

ಬಾದಾಮಿ | ವಿದ್ಯಾರ್ಥಿಗಳು ಸಂವಿಧಾನವನ್ನು ಅರಿಯಬೇಕಾದ ಅಗತ್ಯವಿದೆ: ಪರಶುರಾಮ ಮಹಾರಾಜನವರ

ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಅರಿತಾಗ ಮಾತ್ರ ಸಂವಿಧಾನದ ತಿರುಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ....

Download Eedina App Android / iOS

X