ಬುಡ್ಗ ಜಂಗಮ ಜಾತಿಯ ಇಬ್ಬರು ಬಾಲಕಿಯರ ಶವ ಪತ್ತೆಯಾಗಿದ್ದು, ಈ ಇಬ್ಬರೂ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಅನುಮಾನ ಮೂಡಿದೆ ಕೂಡಲೇ ಈ ಬಗ್ಗೆ ತನಿಖೆ ನಡೆಸುವಂತೆ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗಳ ಮೂಲಕ ಸಿಎಂಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಡಿ ವೈ ಎಫ್ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಪೂಜಾರ್ ಮಾತನಾಡಿ, “ಶ್ಯಾಮಮ್ಮ ಗಂ/ಹುಸೇನಪ್ಪ ಸಿರಿಗಿರಿ. 19 ವರ್ಷ ಸಾಯಮ್ಮ ತಂ/ ಭೀಮಪ್ಪ ಸಿರಿಗಿರಿ ವಯಸ್ಸು 15 ವರ್ಷ ಇಬ್ಬರ ಶವವು ಫೆ: 12-2-25 ರಂದು ಗುರುಮಠಕಲ್ ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹೊಟ್ಟೆ ಪಾಡಿಗಾಗಿ ಚಿಂದಿ ಆಯಲು ಹೋಗಿದ್ದ ಇವರ ಮೇಲೆ ಅತ್ಯಾಚಾರ ಎಸಗಿ, ಕೆರೆಗೆ ಎಸೆದು ಕೊಲೆ ಮಾಡಿರುವುದಾಗಿ ಸ್ಥಳೀಯ ಅಲೆಮಾರಿ ಬಂಧುಗಳು ಆರೋಪಿಸಿದ್ದಾರೆ” ಎಂದರು.
“ಈ ಇಬ್ಬರು ಮಹಿಳೆಯರ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ, ಸತ್ಯ ಬಯಲಿಗೆ ತರಬೇಕು. ಒಂದು ವೇಳೆ ತಪ್ಪಿತಸ್ತರಿಗೆ ಶಿಕ್ಷೆಗೆ ಒಳಗಾಗದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು. ಎಂದು ಬಸವರಾಜ್ ಪೂಜಾರ್ ಎಚ್ಚರಿಕೆ ನೀರಿದರು.
ಅಲೆಮಾರಿ ಸಮುದಾಯ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ಮಾತನಾಡಿ, “ಈಗಾಗಲೇ ಸೈದಾಪೂರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ಆಗಿದ್ದು, ಪೊಲೀಸರು ತನಿಖೆಯ ಮೇಲೆ ಅನುಮಾನ ಇದ್ದು, ಆದ ಕಾರಣ ಇಬ್ಬರು ಬಾಲಕಿಯರ ಸಾವಿನ ಬಗ್ಗೆ ಸಮಗ್ರವಾದ ತನಿಖೆ ನಡೆಸಿ, ಇವರ ಸಾವಿಗೆ ಕಾರಣ ಏನೆಂಬುದನ್ನು ಪತಿ ಹಚ್ಚಿ, ಇವರ ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸಿ, ಬಡ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ತುಕ್ಕು ಹಿಡಿಯುತ್ತಿವೆ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪಿಸಿದ ಶುದ್ಧ ನೀರಿನ ಘಟಕ!
ಮನವಿ ಸಂದರ್ಭದಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ ಹಾವೇರಿ ಜಿಲ್ಲಾಧ್ಯಕ್ಷ ಉಡಚಪ್ಪ ಮಾಳಗಿ, ಮುಖಂಡ ಮಾರೇಪ್ಪ ಮೊತಿ, ಲಕ್ಷ್ಮಣ ಸಿರಿಶಾಲ ಜಗದೀಶ್ ಹರಿಜನ, ಮತ್ತಿತರರು ಇದ್ದರು.
