ಶಿಗ್ಗಾವಿ ತಾಲ್ಲೂಕಿನ ಜೇಕಿನಕಟ್ಟಿ ಗ್ರಾಮದಲ್ಲಿ ೬೫೦ ಲಕ್ಷ ವೆಚ್ಚದಲ್ಲಿ ಸರಕಾರಿ ಮೇಟ್ರಿಕ್ ನಂತರ ಹಾಗೂ ವೃತ್ತಿಪರ ಬಾಲಕರ ವಿಧ್ಯಾರ್ಥಿ ನಿಲಯ ಭೂಮಿ ಪೂಜೆ ಪ್ರೋಟೊ ಕಾಲ್ ಮಾಡದೆ ಕಾರ್ಯಕ್ರಮವನ್ನು ಮಾಡುತ್ತಿರುವುದನ್ನು ವಿರೋಧಿಸಿ ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ ನೇತೃತ್ವದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮುಖಂಡ ನರಹರಿ ಕಟ್ಟಿ
ಮಾತನಾಡಿದ “ಸರಕಾರದ ಯೋಜನೆಯನ್ನು ಅನುಷ್ಠಾನ ಮಾಡುವಾಗ ಗುದ್ದಲಿ ಪೂಜೆ ಸಲ್ಲಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು ಹಾಗೂ ಸಂಸದರಾದ ಪ್ರಲ್ಹಾದ ಜೋಷಿ, ಹಾಗೂ ವಿ.ಪ.ಸದಸ್ಯರಾದ ಪ್ರದೀಪ ಶೆಟ್ಟರ, ಸಂಕನೂರವರನ್ನು ಅವ್ಹಾನ ನೀಡದೆ, ತಾಲೂಕಾ ಆಡಳಿತ ಪ್ರೋಟೊ ಕಾಲ್ ಮಾಡದೆ ಬೇಕಾ ಬಿಟ್ಟಿ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಈ ಕುರಿತು ಹಿಂದೋಮ್ಮೆ ಪ್ರತಿಭಟನೆಯನ್ನು ಮಾಡಿದಾಗಲೂ ಕೂಡಾ ಪ್ರೋಟೊ ಕಾಲ್ ಮಾಡಿಯೇ ಕಾರ್ಯಕ್ರಮವನ್ನು ಮಾಡುವದಾಗಿ ಅಧಿಕಾರಿಗಳು ಲಿಖಿತ ಹೇಳಿಕೆಯನ್ನು ನೀಡಿದ್ದರು. ಮತ್ತೆ ಅದೇ ಮಾರ್ಗವನ್ನು ಅನುಸರಿಸುತ್ತಿರುವುದು ಖಂಡನೀಯ” ಎಂದು ಹೇಳಿದರು.
“ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, “ಪ್ರೋಟೊ ಕಾಲ್ ನಿಯಮವನ್ನು ಪಾಲನೆ ಮಾಡದಿರುವದು ಅಕ್ಷಮ್ಯ ಅಪರಾಆಗಿದ್ದು, ಸಂಬಂದಿಸಿದ ಅಧಿಕಾರಿಗಳ ಮೇಲೆ ಕ್ರಮವನ್ನು ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ನೀಡಿ ಬಲಪಡಿಸಬೇಕು: ಎಸ್ ಎಫ್ ಐ ಒತ್ತಾಯ
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ರೇಣುಕಗೌಡ ಪಾಟೀಲ, ಮಂಜುನಾಥ ಬ್ಯಾಹಟ್ಟಿ, ಅನೀಲ ಸಾತಣ್ಣನವರ, ಸಂತೋಷ ದೊಡ್ಡಮನಿ, ಪ್ರತೀಕ ಕೋಳೇಕರ, ಸಚೀನ ಮಡಿವಾಳರ, ಮಂಜು ನಂಜಪ್ಪನವರ, ಅರೂಣ ಬನ್ನಿಕೊಪ್ಪ, ಕೃಷ್ಣಾ ದೊಡ್ಡಮನಿ, ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು.