ಹಾವೇರಿ | ವ್ಯಕ್ತಿತ್ವ ನಿರ್ಮಾಣ ಹೊಂದಲು ಪರಸ್ಪರ ಸಂವಹನ ಕಲೆ ಬಹು ಮುಖ್ಯವಾಗಿದೆ: ಕುಮಾರ ಬೆಣ್ಣಿ

Date:

Advertisements

“ಸಮಾಜದಲ್ಲಿ ಪರಿಪೂರ್ಣತೆಯಿಂದ ಶಿಕ್ಷಣ ಪಡೆದು ವ್ಯಕ್ತಿತ್ವ ನಿರ್ಮಾಣ ಹೊಂದಲು ಪರಸ್ಪರ ಸಂವಹನ ಕಲೆ ಬಹು ಮುಖ್ಯವಾಗಿದೆ” ಎಂದು ಜೆಸಿಐ ನೂತನ ಅಧ್ಯಕ್ಷ ಕುಮಾರ ಬೆಣ್ಣಿ ಅವರು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದ ಕೆ. ಎಲ್. ಇ ಶಿಕ್ಷಣ ಸಂಸ್ಥೆಯ ರಾಜ ರಾಜೇಶ್ವರಿ ವಾಣಿಜ್ಯ  ಮಹಿಳಾ ಮಹಾವಿದ್ಯಾಲಯದಲ್ಲಿ ಜೆಸಿಐ ಸಂಸ್ಥೆ ಆಯೋಜಿಸಿದ್ದ ವ್ಯಕ್ತಿತ್ವ ಹಾಗೂ ವಿಕಾಸತೆ ವಿಷಯ ಕುರಿತು ಮಾತನಾಡಿದರು.

“ಜೆಸಿಐ ಸಂಸ್ಥೆಯು, ತನ್ನದೇ ಆದ ಯೋಜನೆಯಲ್ಲಿ ವ್ಯಕ್ತಿತ್ವ ನಿರ್ಮಾಣ, ಪರಿಣಾಮ ಕಾರಿ ಭಾಷಣ ಕಲೆ, ಸೇರಿದಂತೆ ಮತ್ತಿತರ ಕ್ರಿಯಾ ಯೋಜನೆಗಳು ಅಳವಡಿಸಲಾಗಿದೆ.  ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯ ನಡೆಯುವ ಶಿಕ್ಷಣಕ್ಕಷ್ಟೇ ಸೀಮಿತವಾಗದೆ, ಸಮಾಜದ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ” ಎಂದರು.

Advertisements

ಜೋನ್ ಚೇರ್ಮನ್ ಪ್ರಭುಲಿಂಗಪ್ಪ  ಹಲಗೇರಿ ಅವರು ಮಾತನಾಡಿ, “ಶಿಕ್ಷಣ ಮತ್ತು ಸಂಸ್ಕೃತಿ  ವಿದ್ಯಾರ್ಥಿ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಪರಿಪೂರ್ಣತೆ ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಅಂಗವಾಗಬೇಕು ಅಂದಾಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧಿಸಿ, ದೇಶದ ಏಕತೆ ಮತ್ತು ಐಕ್ಯತೆ ಸಾಧಿಸಲು  ಸಾಧ್ಯವಾಗಲಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಒಕ್ಕಲಿಗರ ವಿಕಾಸ ವೇದಿಕೆಯಿಂದ ‘ಹತ್ತನೇ ಚಾಮರಾಜ ಒಡೆಯರ್ ಜಯಂತ್ಯುತ್ಸವ ‘

ಕಾಲೇಜು ಪ್ರಾಚಾರ್ಯ ನಾರಾಯಣ ನಾಯಕ ಎ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜೋನ್ ಟ್ರೈನರ್ ಪ್ರಮೋದ ಶಾಸ್ತ್ರಿ, ವಿದ್ಯಾರ್ಥಿ ಪ್ರತಿನಿಧಿ ರೇಖಾ ಶಿಡೇನೂರ,ಕಾರ್ಯದರ್ಶಿಇಮ್ರಾನ್ ನೀಲಗಾರ, ಉಪಾಧ್ಯಕ್ಷ ಅಶೋಕ ದುರ್ಗದಸೀಮಿ, ಕೋಶಾಧ್ಯಕ್ಷ   ವಿದ್ಯಾದರ ಹಲಗೇರಿ, ಕಾರ್ಯಕ್ರಮಾಧಿಕಾರಿ ಭೋಜರಾಜ ಗುಲಗಂಜಿ, ಮಾಜಿ ಅಧ್ಯಕ್ಷರಾದ ಶಿವಶಂಕರ ಕೆ, ಡಾ, ಶಿವಾನಂದ ಹಿತ್ತಲಮನಿ, ವೆಂಕಟೇಶ್ ಕಾಕಿ, ಶರತ ಕುಮಾರ್,  ವಿನಯ ಕುಮಾರ ಗುಲಗಂಜಿ, ವಿನಾಯಕ ಯಕನಹಳ್ಳಿ,  ಮಂಜುನಾಥ ಜಿ, ಜಯಣ್ಣ ಕರಡೇರ, ಪ್ರಕಾಶ್ ಗಚ್ಚಿನ ಮಠ, ಸೇರಿದಂತೆ ಮತ್ತಿತರೆ ಪದಾಧಿಕಾರಿಗಳು ಕಾಲೇಜಿನ ಉಪನ್ಯಾಸಕರು ಎನ್. ಎಸ್.ಎಸ್, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

ವಿಜಯನಗರ | ಅಲೆಮಾರಿ ಸಮುದಾಯಗಳ ಅಭಿವೃದ್ಧಿಯೇ ನಿಗಮದ ಮುಖ್ಯ ಧ್ಯೇಯ: ಪಲ್ಲವಿ

ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಮುಂಚೂಣಿಗೆ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

Download Eedina App Android / iOS

X