“ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಸರ್ಕಾರ ಪೌರ ನೌಕರರ ನ್ಯಾಯಯುತ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕು” ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಒತ್ತಾಯಿಸಿದರು.
ಇಲ್ಲಿನ ನಗರಸಭೆ ಆವರಣದಲ್ಲಿ ಪೌರ ನೌಕರರ ಅನಿರ್ದಿಷ್ಟ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯಿಂದ ಬೆಂಬಲ ಸೂಚಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಮಾತನಾಡಿದರು.
“ರಾಜ್ಯದಲ್ಲಿರುವ ಎಲ್ಲಾ ಮಹಾನಗರ ಪಾಲಿಕೆ, ನಗರ- ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಪೌರ ನೌಕರರು ಹಂತ ಹಂತವಾಗಿ ಹೋರಾಟ ಮಾಡುತ್ತಿದ್ದಾರೆ. ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಿಸುವುದು ಹಾಗೂ ಕೆ.ಜಿ ಆಯ್.ಡಿ ಜಿ.ಪಿ.ಎಫ್, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯವನ್ನು ಪೌರ ನೌಕರರಿಗೂ ಜಾರಿ ಮಾಡಬೇಕು. ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ಸಿಬ್ಬಂದಿಗಳು, ಲೋಡರ್ಸ್ ಕ್ಲಿರ್ನ, ಪೌರ ಕಾರ್ಮಿಕರು , ಸೂಪರ್ವೈಸರ್, ವಾಹನ ಚಾಲಕರು, ಕಂಪ್ಯೂಟರ್ ಆಪರೇಟರ್, ಜೂನಿಯರ್ ಪ್ರೋಗ್ರಾಮರ್, ಇನ್ನಿತರ ಗುತ್ತಿಗೆ ಹೊರಗುತ್ತಿಗೆ ಮೂಲಕ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನೇರ ಪಾವತಿ ವೇತನ ಮಾಡಬೇಕು. ಈ ಎಲ್ಲ ಕಾರ್ಮಿಕರನ್ನು ಕಾಯಂ ಮಾಡುವುದು. ಇತರೆ 19 ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದು, ಎಲ್ಲಾ ಬೇಡಿಕೆಗಳು ನ್ಯಾಯಯುತಗಳಾಗಿದ್ದು, ಸರ್ಕಾರ ಶೀಘ್ರವಾಗಿ ಪೌರ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಉಡಚಪ್ಪ ಮಾಳಗಿ ಒತ್ತಾಯಿಸಿದರು.
ಈ ಸಂರ್ಭದಲ್ಲಿ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರಪ್ಪ ಬೀದರಿ ಮುಖಂಡರಾದ ರಂಗಪ್ಪ ಹೆರಕಲ್,ನಾಗರಾಜ ಮರಡಿಮನಿ.ಶ್ರೀಮತಿ ಶೋಭಾ ಉದಗಟ್ಟಿ.ಬೀಷ್ಟಣ್ಣ ಕೊರವರ. ನೀಲೇಶ ದೇವಿಹೊಸೂರ, ಶೇಖಣ್ಣ ಮಾಳಗಿ,ರಾಜು ಹೊಸಮನಿ,ನಿಂಗಪ್ಪ ಗಡ್ಡಿ.ಹನುಮಂತಪ್ಪ ಸಿ,ಡಿ.ಗಿರೇಶ ಹರವಿ.ರಮೇಶ ಮುಂಜೋಜಿ,ಮಾಲತೇಶ ತಿಗಳೇಣ್ಣನವರ.ರಾಕೇಶ ದೊಡ್ಡಮನಿ, ಈರಣ್ಣ ಮಾಳಗಿ, ವಿನಯ ಬಸೇಗಣ್ಣಿ.ಮಂಜು ದೇವಗಿರಿ, ಸಿದ್ದಪ್ಪ ಯತ್ನಳ್ಳಿ, ನೀಲೇಶ ಗಡ್ಡಿ,ರಾಜು ಮಾಳಗಿ. ಮಂಜುನಾಥ ದೊಡ್ಡಮನಿ. ರಾಧಾ ಕೃಷ್ಣಪ್ಪ ಮರಿಯಣ್ಣನವರ, ದುರಗೇಶ ಮಾಳಗಿ ಅನೇಕ ಮುಖಂಡರು ಹಾಗೂ ಪೌರ ನೌಕರರು ಭಾಗಿಯಾಗಿದ್ದರು.
