“ನನ್ನ ತವರು ನೆಲದಲ್ಲಿ ನನ್ನನ್ನು ಸಮ್ಮೇಳನದ ಅಧ್ಯಕ್ಷೆಯಾಗಿ ಮಾಡುವ ಮೂಲಕ ಮತ್ತಷ್ಟು ಜವಾದ್ಭಾರಿಯನ್ನು ಉಡಿಯಲ್ಲಿ ತುಂಬಿದ್ದಾರೆ. ನನಗೆ ಕಲಿಸಿದ ಶಿಕ್ಷಕರು ಸ್ಪಷ್ಟವಾಗಿ ಕನ್ನಡವನ್ನು ಕಲಿಸಿದ ಕಾರಣದಿಂದ ಸಾಹಿತ್ಯ ಲೋಕದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಪ್ರತಿಯೊಂದು ಮಗುವನ್ನು ಉನ್ನತಮಟ್ಟದಲ್ಲಿ ಬೆಳಸುವ ಜವಾದ್ಭಾರಿ ಶಿಕ್ಷಕರ ಮೇಲಿದೆ” ಎಂದು ಸಮ್ಮೇಳನದ ಸರ್ವಾಧ್ಯಕ್ಷೆ ವಿಜಯಲಕ್ಷ್ಮಿ ತಿರ್ಲಾಪುರ ಹೇಳಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ವಿರಕ್ತಮಠ ಸಭಾ ಭವನದಲ್ಲಿ ನಡೆದ ೫ನೇ ಶಿಗ್ಗಾವಿ ತಾಲೂಕಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಈ ಭಾಗದ ಮಠ ಮಾನ್ಯಗಳು ಜನರ ಬದುಕಿಗೆ ಧಾರ್ಮಿಕ ಚೌಕಟನ್ನು ಕಟ್ಟಿಕೊಡುವ ಮೂಲಕ ಈ ನೆಲದ ಸಂಸ್ಕೃತಿ, ಜಾನಪದ ಕಲೆ, ಆಚಾರ ವಿಚಾರ, ಆಚರಣೆಗಳನ್ನು ಪೋಷಿಸಿಕೊಂಡು ಬರುತ್ತಿವೆ” ಎಂದರು.
“ವೇದಿಕೆಗಳ ಮೇಲೆ ರೈತರ ಕುರಿತು ಮಾತನಾಡುವುದು, ರೈತಗೀತೆಯನ್ನು ಹಾಡಿಸಿವುದರಿಂದ ಅವರ ಬದುಕು ಹಸನಾಗುವುದಿಲ್ಲಾ. ರೈತರಿಂದ ಫಲವತ್ತಾದ ಭೂಮಿಯನ್ನು ಕಸೆದುಕೊಂಡು ಉಧ್ಯಮಗಳನ್ನು ಪ್ರಾರಂಭಿಸುವುದನ್ನು ಬಿಟ್ಟು, ಅವರು ಬೆಳೆದ ಬೆಳೆಗೆ ಉತ್ತಮ ಬೆಲೆಯನ್ನು ನೀಡಿದಾಗ ಮಾತ್ರ ಅವರ ಬದುಕನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಶಾಸಕ ಯಾಸೀರಖಾನ ಪಠಾಣ ಮಾತನಾಡಿ, “ಈ ತಾಲೂಕಿನಲ್ಲಿ ಬಹಳಷ್ಟು ಸಾಹಿತ್ಯಾಸಕ್ತರು ಇದ್ದು, ಸಮ್ಮೇಳನಗಳು ಇಷ್ಟು ವರ್ಷಗಳ ಕಾಲ ನಡೆಯದಿರುವುದು ಖೇದದ ಸಂಗತಿ. ಮುಂದಿನ ವರ್ಷ ಇನ್ನಷ್ಟು ಅದ್ಧೂರಿಯಾಗಿ ಸಾಹಿತ್ಯ ಸಮ್ಮೇಳನವನ್ನು ಆಚರಿಸಲಾಗುತ್ತದೆ. ಸಾಹಿತಿಗಳಿಂದ ಬಹಳಷ್ಟು ಪುಸ್ತಕಗಳು ಬಿಡುಗಡೆಯಾಗಬೇಕು. ಕನ್ನಡ ಓದುಗರ ಸಂಖ್ಯೆ ಹೆಚ್ಚಾಗಬೇಕು. ಕನ್ನಡ ಭಾಷೆಯನ್ನು ಬಿಟ್ಟು ಬೇರೆ ಭಾಷೆಯ ವ್ಯಾಮೋಹವನ್ನು ಬೆಳಸಿಕೊಂಡರೆ ಪರರ ಮನೆಯಲ್ಲಿ ಇದ್ದಂತೆ ಅನಿಸುತ್ತದೆ” ಎಂದು ಹೇಳಿದರು.
“ಇಂತಹ ಅದ್ಭುತ ಕಾರ್ಯಕ್ರಮಗಳಾಗಲು ಸರ್ಕಾರದ ಅನುಧಾನದ ಅವಶ್ಯಕತೆಗಿಂತ ಪ್ರಭಲ ಇಚ್ಚಾಶಕ್ತಿ ಬೇಕಾಗುತ್ತದೆ. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು.
ತಾಲೂಕಾ ಕಸಾಪ ಅಧ್ಯಕ್ಷ ನಾಗಪ್ಪಾ ಬೆಂತೂರ ಮಾತನಾಡಿ, “ಸರ್ಕಾರದ ಅನುದಾನದ ಕೊರತೆ ಇದ್ದರೂ ಎಲ್ಲ ದಾನಿಗಳು, ಕನ್ನಡಾಭಿಮಾನಿಗಳ ಸಹಕಾರದಿಂದ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಶಿಗ್ಗಾವಿಯನ್ನು ಇತಿಹಾಸದ ಪುಟಗಳಲ್ಲಿ ನೋಡಿದರೆ ಜಗತ್ತಿಗೆ ಮಾದರಿಯಾಗುವ ಅನೇಕ ಸಂಗತಿಗಳು ಕಂಡುಬರುತ್ತವೆ. ಕನ್ನಡದ ಮೇಲಿನ ಪ್ರೀತಿ ಮತ್ತು ಅಭಿಮಾನ ಶಿಗ್ಗಾವಿ ಜನತೆಯಲ್ಲಿ ಹೀಗೆಯೇ ಇರಲಿ” ಎಂದು ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ
ಸಮ್ಮೇಳನದಲ್ಲಿ ಗಂಜಿಗಟ್ಟಿ ಮಠದ ಷ.ಬ್ರ. ಡಾ| ವೈಜಿನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು. ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಡಾ| ಎ.ಸಿ. ವಾಲಿ ಗುರುಗಳು ಸಾನಿಧ್ಯ ವಹಿಸಿದ್ದರು, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಲಿಂಗಯ್ಯಾ ಹಿರೇಮಠ, ಗುಡ್ಡಪ್ಪಾ ಜಲದಿ, ಎಸ್.ಎಪ್.ಮಣಕಟ್ಟಿ, ಸಿದ್ದಾರ್ಥ ಪಾಟೀಲ, ಮಮತಾ ಮಾಗಿ, ಶಾಂತಾಬಾಯಿ ಸುಭೆದಾರ, ಅನುರಾಧಾ ಮಾಳ್ವದೆ, ರೂಪಾ ಬನ್ನಿಕೊಪ್ಪಾ, ಸುಭಾಸ ಚೌವ್ಹಾಣ, ಶಶಿಕಾಂತ ರಾಠೋಡ, ಕಸಾಪ ಪದಾದೀಕಾರಿಗಳು, ಕನ್ನಡಪರ, ರೈತಪರ ಸಂಗಟನೆಗಳ ಮುಖಂಡರು, ಸಾಹಿತಿಗಳು, ಗಣ್ಯರು, ಕನ್ನಡಾಭಿಮಾನಿಗಳು ಇದ್ದರು.