ಐತಿಹಾಸಿಕ ದೇವರಗುಡ್ಡದ ಮಾಲತೇಶ ಸ್ವಾಮಿ ಕಾರ್ಣಿಕ ನಡೆದಿದ್ದು, ʼಆಕಾಶದತ್ತ ಚಿಗರಿತಲೇ ಬೇರು, ಮುತ್ತಾಯಿತಲೇ ಪರಾಕ್ʼ ಎಂದು ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ದೇವರಗುಡ್ಡದಲ್ಲಿ ದಸರಾ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಶುಕ್ರವಾರ ಸಂಜೆ ನಡೆದ ಕಾರ್ಣಿಕೋತ್ಸವದಲ್ಲಿ ಕಾರ್ಣಿಕ ನುಡಿದಿದ್ದಾರೆ.
ಪ್ರತಿ ವರ್ಷ ನವರಾತ್ರಿ ವೇಳೆ ಭವಿಷ್ಯವಾಣಿ ನುಡಿಯುವ ಗೊರವಯ್ಯ 9 ದಿನ ಉಪವಾಸವಿದ್ದು ಸಾವಿರಾರು ಭಕ್ತರ ಸಮ್ಮುಖದಲ್ಲಿ 18 ಅಡಿ ಬಿಲ್ಲನ್ನೇರಿ ಕಾರ್ಣಿಕ ನುಡಿದಿಯುತ್ತಾರೆ. ಕಾರ್ಣಿಕ ನುಡಿ ಕುರಿತು ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ ಹೇಳಿಕೆ ನೀಡಿದ್ದು, ʼಆಕಾಶದತ್ತ ಚಿಗುರಿತಲೇ, ಬೇರು ಮುತ್ತಾಯಿತಲೇ ಪರಾಕ್ʼ ಎಂದು ನುಡಿದಿದ್ದಾರೆ.
ಆಕಾಶದತ್ತ ಚಿಗುರಿತಲೇ ಅಂದರೆ ʼಒಳ್ಳೆ ಮಳೆ ಆಗುತ್ತೆʼ, ಬೇರೆಲ್ಲಾ ಮುತ್ತಾಯಿತಲೇ ಅಂದರೆ ರೈತರಿಗೆ ಒಳ್ಳೆ ಬೆಳೆ ಬರುತ್ತೆ, ಅದನ್ನು ತೆಗೆದುಕೊಳ್ಳುವ ಫಲಾನುಭವಿಗಳಿಗೂ ಒಳ್ಳೆಯದಾಗುತ್ತದೆʼ ಎಂದರ್ಥ.
ಈ ಸುದ್ದಿ ಓದಿದ್ದೀರಾ? ಉಡುಪಿ | ಅಂಬೇಡ್ಕರ್, ದಲಿತರಿಗೆ ಅವಮಾನಿಸಿದ ಸಂಘಪರಿವಾರದ ಮುಖಂಡ ಉಮೇಶ್ ನಾಯ್ಕ: ಬಂಧನಕ್ಕೆ ಆಗ್ರಹ
“ರಾಜಕೀಯವಾಗಿ ಹೇಳುವುದಾದರೆ ಆಕಾಶದತ್ತ ಚಿಗುರೀತಲೇ, ಅಂದರೆ ʼಈಗಿರುವ ನಾಯಕತ್ವ ಆಕಾಶದತ್ತ ಚಿಗುರಿಬಿಟ್ಟಿದೆʼ, ಬೇರೆಲ್ಲಾ ಮುತ್ತಾಯಿತಲೇ ಅಂದರೆ ʼಅವರಿಗೆಲ್ಲಾ ಬೆನ್ನೆಲುಬಾಗಿ ನಿಂತಿರುವುದುʼ ಪ್ರಸ್ತುತ ದಿನಗಳಲ್ಲಿ ತಾವೆಲ್ಲ ನೋಡಿರಬಹುದು ಕಾನೂನು ವ್ಯವಸ್ಥೆಯಲ್ಲಿ ಏನೇ ಬದಲಾವಣೆ ಆದರೂ ಕೂಡಾ ಈಗಿರುವ ನಾಯಕತ್ವ ಹೇಳಿದಂಗೆ ಅವರು ಒಪ್ಪಿಕೊಳ್ತಾರೆ ಅಂತ. ಬೇರುಗಳೆಲ್ಲಾ ಮುತ್ತಾಯಿತಲೇ ಅಂದರೆ ʼಆಕಾಶತ್ತ ಚಿಗುರಿರೋ ಗಿಡ ಹೇಳಿದಂಗೆ ಬೇರುಗಳು ಒಪ್ಪಿಕೊಳ್ಳುತ್ತಾವೆʼ ಎಂದರ್ಥ” ಎಂದು ಕಾರ್ಣಿಕವನ್ನು ವ್ಯಾಖ್ಯಾನಿಸಿದ್ದಾರೆ.