ಸಾರಿಗೆ ಸಂಸ್ಥೆಯ ಬಸ್ಸು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾಣೇಬೆನ್ನೂರ್ ಪಟ್ಟಣದ ಹೊರವಲಯದ ಜಾನುವಾರು ಮಾರುಕಟ್ಟೆ ಬಳಿ ನಡೆದಿದೆ.
ಹಾವೇರಿ ತಾಲೂಕಿನ ಅಕ್ಕೂರ ಗ್ರಾಮದ ಜಗದೀಶ ವಿರುಪಾಕ್ಷಪ್ಪ ತೋಟಗೇರ (45) ಮೃತ ಬೈಕ್ ಸವಾರ. ಈತ ಜಾನುವಾರ ಮಾರುಕಟ್ಟೆಯಿಂದ ವಾಪಸ್ ಊರಿಗೆ ತೆರಳುತ್ತಿದ್ದ ಸಮಯದಲ್ಲಿ ಬಸ್ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸ್ವಾತಂತ್ರ್ಯ, ಸಮಾನತೆಯನ್ನು ತಪ್ಪಾಗಿ ಅರ್ಥೈಸುವುದು ಸಲ್ಲದು: ಲೇಖಕಿ ವಿನಯಾ ಒಕ್ಕುಂದ
ಡಿಕ್ಕಿ ಹೊಡೆದ ಪರಿಣಾಮ ಬೈಕ್ ಬಸ್‌ನ ಚಕ್ರದ ಅಡಿಗೆ ಹೋಗಿ ಸಿಲುಕಿಕೊಂಡಿದ್ದು ಸವಾರ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
