ಅಪರಿಚಿತ ವ್ಯಕ್ತಿಯೊಬ್ಬನ ಕರೆ ಸ್ವೀಕರಿಸಿ 26 ಸೆಕೆಂಡ್ ಮಾತನಾಡಿದ್ದಕ್ಕೆ ಬ್ಯಾಂಕ್ ಖಾತೆಯಿಂದ ₹2.30 ಲಕ್ಷ ಬೇರೆ ಖಾತೆಗೆ ವರ್ಗಾವಣೆಯಾದ ಘಟನೆ ಕುರಿತು ರಾಣೆಬೆನ್ನೂರ ತಾಲೂಕಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೊನ್ನತ್ತಿ ಗ್ರಾಮ ಪಂಚಾಯತಿಯ ಡೇಟಾ ಆಪರೇಟರ್ ರಮೇಶ್ ಭರಮಪ್ಪ ತಂಬೂರಿ(38) ಎಂಬುವವರ ಹಣ ಬೇರೆ ಬೇರೆ ಖಾತೆಗೆ ಹೋಗಿದೆ.
ಈ ಸುದ್ದಿ ಓದಿದ್ದೀರಾ? 2025ರ ಫೆಬ್ರವರಿ ಅಂತ್ಯದೊಳಗೆ ಪ್ರೌಢಶಾಲಾ ಸಹ ಶಿಕ್ಷಕರಿಗೆ ಬಡ್ತಿ ಪೂರ್ಣ: ಸಚಿವ ಮಧು ಬಂಗಾರಪ್ಪ
ರಮೇಶ್ ತಂಬೂರಿ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಫೋನ್ ಮಾಡಿ 26 ಸೆಕೆಂಡ್ ಮಾತನಾಡಿದ್ದಾನೆ. ಅಷ್ಟರಲ್ಲಿ ಇವರ ಮೊಬೈಲ್‌ಗೆ ₹500 ಕಟ್ ಆಗಿರುವ ಮೇಸೆಜ್ ಬಂದಿದೆ. ಕೂಡಲೇ ಅವರು ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ₹2.30 ಲಕ್ಷ ಬೇರೆ ಖಾತೆಗೆ ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
