ಹಾವೇರಿ | ನಾವೆಲ್ಲರೂ ಸಂವಿಧಾನ ಉಳಿಸಲು ಮುಂದಾಗಬೇಕು: ನಟ ಚೇತನ್

Date:

Advertisements

“ಎಲ್ಲಾ ಭಾಷೆ,ಧರ್ಮ ಹಾಗೂ ಸಂಸ್ಕೃತಿಯ ಪ್ರತೀಕವಾಗಿ ನಾವು ಬದುಕಬೇಕಿದೆ. ಇದು ಸಾಧ್ಯವಾಗಬೇಕಾದರೆ ನಾವೆಲ್ಲರೂ ಸಂವಿಧಾನ ಉಳಿಸಲು ಮುಂದಾಗಬೇಕು” ಎಂದು ನಟ ಚೇತನ್ ಹೇಳಿದರು.

ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ) ಹಾಗೂ ಜಿಲ್ಲೆಯ ಪ್ರಗತಿಪರರ ಸಂಯೋಗದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

“ಭಾರತ ವೈವಿಧ್ಯಮಯ ಸಂಸ್ಕೃತಿಯ ನಾಡು. ಈ ದೇಶದಲ್ಲಿ ಎಲ್ಲಾ ಜನಾಂಗದವರು ನೆಲಿಸಿರುವ ವಿಶೇಷವಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಆಶಯದಂತೆ ಸಮಾನತೆ, ಭಾತೃತ್ವದಿಂದ ಬದುಕಲು ಸಂವಿಧಾನ ಅವಕಾಶ ನೀಡಿದೆ. ಇದಕ್ಕೆ ನಾವು ಯಾವುದೇ ಹೋರಾಟಕ್ಕೂ ಸಿದ್ದರಾಗಬೇಕು” ಎಂದು ಹೇಳಿದರು.

Advertisements

ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಮಾತನಾಡಿ, “ನಮ್ಮೆಲ್ಲರ ಬದುಕಿಗೆ ನಮ್ಮ ಸಂವಿಧಾನವೇ ನಮಗೆ ಭದ್ರ ಬೂನಾದಿಯಾಗಿದೆ. ಡಾ.ಬಿ. ಆರ್ ಅಂಬೇಡ್ಕರ್ ಅವರು ಭಾರತೀಯರೆಲ್ಲರ ಹಿತದೃಷ್ಟಿಯನ್ನು ಇಟ್ಟುಕೊಂಡು ಸಂವಿಧಾನ ರಚನೆಗೆ ಮುಂದಾಗಿದ್ದರು. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ತಿಳಿಸುವ ಹಾಗೂ ಸಂವಿಧಾನ ಆಶಯಗಳನ್ನು ಸುಭದ್ರಪಡಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಚಿಂತಕ ಚೇತನಕುಮಾರ ಅವರು ಇಲ್ಲಿಗೆ ಬಂದು ಸಂವಿಧಾನದ ಮಹತ್ವದ ಕುರಿತು ತಿಳಿಸುವ ಕಾರ್ಯ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಪೋಕ್ಸೋ ಕೇಸ್ ದಾಖಲಾಗಿದ್ದ ಸ್ವಾಮಿಜಿ ಮಠ ದ್ವಂಸ

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ, ಮುಖಂಡರು ಡಾ. ಸಂಜಯ ಡಾಂಗೆ. ಹೊನ್ನಪ್ಪ ತಗಡಿಮನಿ, ಅಶೋಕ ಮರಿಯಣ್ಣನವರ, ವಾಯ್,ಎನ್ ಮಾಸೂರ, ವಿಭೂತಿ ಶೆಟ್ಟಿ, ಮಾರುತಿ ಕಿಳ್ಳಿಕ್ಯಾತರ, ಜಗದೀಶ ಹರಿಜನ, ಮಲ್ಲೇಶಪ್ಪ ಮದ್ಲೇರ, ಹನುಮಂತಪ್ಪ ಹೌಸಿ, ರೇಣುಕಾ ಬಡಕಣ್ಣನವರ, ನೀಲಮ್ಮ ಬಡಪನಹಳ್ಳಿ, ಜಗದೀಶ ಹರಿಜನ, ಹನುಮಂತಪ್ಪ ಸಿ,ಡಿ, ಮಹೇಶಪ್ಪ ಶಾಕರ, ಬಸವಣ್ಣಪ್ಪ ಹಳ್ಳಳ್ಳಿ, ಹನುಮಂತಪ್ಪ ಬ್ಯಾಡಗಿ, ದೇವರಾಜ ಮಡಿವಾಳರ, ಚಂದ್ರಪ್ಪ ಕಚವಿ,ಶಿವರಾಜ ಸಂಗಪ್ಪನವರ, ಅಜೀತ ಚೌಡಮ್ಮನವರ, ಮಹೇಶ ಖಾರದ, ಮಾಲತೇಶ ಮೈಲಾರ, ಮೈಲಪ್ಪ ಡೊಳ್ಳಿನ, ಲಲಿತಾ ಬಡಕಣ್ಣನವರ, ಗೀತಾ ಹಳೆಶಿಡೇನೂರ, ನಾಗಮ್ಮ ಮದ್ದೂರ, ಯಲ್ಲಮ್ಮ ಕೊಪ್ಪದ, ಗೀತಾ ಬಳಗುಂದಿ, ಯಶೋಧಾ ಸಣ್ಣಮನಿ, ಲಕ್ಷ್ಮಿ ಸಣ್ಣಮನಿ, ಗೀತಾ ಕಡೆಮನಿ, ಸುಮಂಗಲಾ ಕೃಷ್ಣಾಪುರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X