“ದೇಶದ ಪಾಲ 210 ಲಕ್ಷ ಕೋಟಿ ತಲುಪಿದೆ ಈಚೆಗೆ ಅಮೆರಿಕ ತಳೆದ ನಿಲುವಿನಿಂದ ದೇಶದ ಆರ್ಥಿಕತೆಗೆ ದೊಡ್ಡ ಪಟ್ಟು ಬಿದ್ದಿದ, ಇಂತಹ ಸಂದಿಗ್ಧ ಸಂದರ್ಭದಲ್ಲಿ ಯುವಕರು ವಾಸ್ತವ ಅರಿತು ಅಂತರಾಷ್ಟ್ರೀಯ ಷಡ್ಯಂತ್ರಕ್ಕೆ ಬಲಿಯಾಗದೇ ಭವ್ಯ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಬೇಕಿದೆ” ಎಂದು ಶಾಸಕ ಶ್ರೀನಿವಾಸ ಮಾನೆ ಯುವಕರಿಗೆ ಕರೆ ನೀಡಿದರು
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಸುರಳೇಶ್ವರ ಗ್ರಾಮದಲ್ಲಿ ಹಾನಗಲ್ಲಿನ ಕುಮಾರೇಶ್ವರ ಕಲಾ ಮತ್ತು ಪಾಣಿಜ್ಯ ಮಹಾವಿದ್ಯಾಲಯದ ಎನ್. ಎಸ್. ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
“ಯುವಕರು ಸಾಮಾಜಿಕ ಜವಾಬ್ದಾರಿ ಹೊತ್ತು, ಜನಜಾಗೃತಿ ಮೂಡಿಸಬೇಕಿದೆ. ಭಾರತೀಯರಲ್ಲಿ ಶಕ್ತಿ, ಸಾಮರ್ಥ್ಯ, ನೈಪುಣ್ಯತೆ ಹೆಚ್ಚಿದೆ. ಆದರೆ ಧರ್ಮ ಜಾತಿ ಇನ್ನಿತರ ವಿಷಯಗಳ ಕಡೆಗೆ ಗಮನ ಸೆಳೆಯಲಾಗುತ್ತಿದೆ. ಇದರಿಂದ ಆರ್ಥಿಕತೆ ಸುಧಾರಣೆ ಕಡೆಗೆ ಗಮನ ಕಡಿಮೆಯಾಗುತ್ತಿದೆ. ನಮ್ಮ ದೇಶ ವಿಶಿಷ್ಟವಾದುದು. ಸಾಮರಸ್ಯ ಸೌಹಾರ್ದತೆಯಿಂದ ಜನ ಬದುಕುತ್ತಿರುವ ಜಗತ್ತಿನಲ್ಲಿಯೇ ಏಕೈಕ ರಾಷ್ಟ್ರ” ಎಂದು ಶಿಬಿರಾರ್ಥಿಗಳಿಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಫ್ಯಾಸಿಸ್ಟ್ ದಾಳಿಯಿಂದ ದೇಶದ ಒಕ್ಕೂಟ ವ್ಯವಸ್ಥೆ ರಕ್ಷಿಸಿ: ಸಿಪಿಐಎಂಎಲ್ ಆಗ್ರಹ
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಯಂಕಮ್ಮ ಬಂಡಿವಡ್ಡರ, ಸದಸ್ಯ ರಹಮತ್ ನಲ್ಲಿಕೊಪ್ಪ, ಜಿ.ಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ತಾ.ಪಂ ಮಾಜಿ ಸದಸ್ಯ ಮಹಬೂಬ ಬ್ಯಾಡಗಿ, ಪ್ರಾಚಾರ್ಯ ಡಾ.ಎಂ.ಎಚ್ ಹೊಳೆಣ್ಣನವರ, ಉಪನ್ಯಾಸಕ ಡಾ.ಪ್ರಕಾಶ ಹೊಳೇರ, ಯೋಜನಾಧಿಕಾರಿ ಡಾ.ಸತ್ಯನಾವಿಸಿ ವಿ.ಬಿ. ಸಹ ಯೋಜನಾಧಿಕಾರಿ ಡಾ. ಬಸನಗೌಡ ಲಕ್ಷ್ಮೀಶ್ವರ, ಡಾ. ಸಿ. ಎಸ್ ಕುಮ್ಮೂರ, ಕೆ. ಎಸ್. ಪಂಚಾಳ. ಗುಡ್ಡಪ್ಪ ಎಸ್. ದಾನಪ್ಪ, ಸಿಂಧೂರ ಪರಸಪ್ಪ ನಾಯಕ, ಬಿ. ಎಂ.bಮೈಳಾರದ, ಮಹಾದೇವಪ್ಪ ಬಂಡಿವಡ್ಡರ, ಹನುಮಂತಪ್ಪ ಹಾನಗಲ್, ಶಿವಪುತ್ರಪ್ಪ ಬಾರ್ಕಿ, ಆನಂದ ಸಮ್ಮಣ್ಣನವರ, ದೇವೇಂದ್ರಪ್ಪ ನಾಯಕ ಅಬ್ದಲಖಾದರ ಶಿರಗೋಡ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
