ಪತಿ ಅಂತ್ಯಕ್ರಿಯೆ ವೇಳೆ ಪತ್ನಿಯೂ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. 45 ವರ್ಷ ಅನ್ಯೂನ್ಯವಾಗಿದ್ದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
ವೀರಬಸಪ್ಪ ಗೋಣಗೇರ (70) ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದರು. ಪತಿ ಅಂತ್ಯಕ್ರಿಯೆಗೆ ಹೋದ ಪತ್ನಿ ಬಸಮ್ಮ ವೀರಬಸಪ್ಪ ಗೋಣಗೇರ (60) ಅವರಿಗೆ ಲೋ ಬಿಪಿಯಾಗಿ ಮೃತಪಟ್ಟಿದ್ದಾರೆ.
ಪತಿ, ಪತಿಯನ್ನು ಇಬ್ಬರನ್ನು ಅಂತ್ಯಕ್ರಿಯೆಯನ್ನು ಒಂದೇ ಚಿತೆಯಲ್ಲಿ ನಡೆಸಿದ್ದಾರೆ. ಸಾವಿನಲ್ಲೂ ಒಂದಾದ ಆದರ್ಶ ದಂಪತಿಯ ಅಂತ್ಯಸಂಸ್ಕಾರವನ್ನು ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಖಾ ಮಂಜುನಾಥ್ ಪುಟ್ಟಕಳ್ಳವರ, ಹಿರಿಯ ಮುಖಂಡರು, ಗ್ರಾಪಂ ಕಾರ್ಯದರ್ಶಿ, ಪಿಡಿಒ ನೆರೆವೇರಿಸಿದ್ದಾರೆ.