“ದುಷ್ಟ ಚಟಗಳಿಂದ ಬಹಳಷ್ಟು ಕುಟುಂಬಗಳು ಬೀದಿಗೆ ಬರುತ್ತಿವೆ. ಯುವಕರು ನಮ್ಮ ದೇಶದ ಭವಿಷ್ಯ. ಆದರೆ ಸಮಾಜದಲ್ಲಿರುವ ಕೆಲವು ಸಮಾಜಘಾತಕ ಶಕ್ತಿಗಳು ಇಸ್ಪೀಟ್ ಕ್ಲಬ್ ಗಳ ಪರವಾನಿಗಿ ಹೆಸರಿನಲ್ಲಿ ಯುವಕರಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದು, ಯುವಕರನ್ನು ಹಾಳು ಮಾಡುತ್ತಿದ್ದಾರೆ. ಇಂತಹ ಅಕ್ರಮ ಚಟುವಟಿಕೆಗಳ ಮೇಲೆ ಕಡಿವಾಣ ಹಾಕಬೇಕು” ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಜಪಡೆ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಒತ್ತಾಯಿಸಿದರು.
ಹಾವೇರಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಜಪಡೆ ವತಿಯಿಂದ ಜಿಲ್ಲೆಯಲ್ಲಿ ಗಾಂಜಾ, ಮಟ್ಕಾ, ಇಸ್ಪೀಟ್ ಕ್ಲಬ್ ಜೂಜಾಟದಿಂದ ಯುವಕರು ಬಲಿಪಶು ಆಗುತ್ತಿದ್ದು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಹಾವೇರಿ ಜಿಲ್ಲೆಯಲ್ಲಿ ಇಸ್ಪೀಟ್ ಕ್ಲಬ್ ಗಳು ಪರವಾನಿಗಿ ಹೆಸರಿನಲ್ಲಿ ಕ್ಲಬ್ ನಡೆಸುತ್ತಾರೆ. ಇದರ ನೆಪದಲ್ಲಿ ಬಹಳಷ್ಟು ಯುವಕರನ್ನು ಹಾಳು ಮಾಡುತ್ತಿದ್ದಾರೆ. ಮಟ್ಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು ಬಹಳಷ್ಟು ಕುಟುಂಬಗಳು ಬೀದಿಗೆ ಬರುವಂತಾಗಿದೆ. ಎಲ್ಲಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಸಮಾಜಘಾತುಕ ಶಕ್ತಿಗಳನ್ನು ಕೂಡಲೇ ಕಡಿವಾಣ ಹಾಕಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?
ಮನವಿ ಸಂದರ್ಭದಲ್ಲಿ ಕರವೇ ಗಜಪಡೆ ಜಿಲ್ಲಾ ಉಪಾಧ್ಯಕ್ಷ ಯೂಸುಫ್ ಸೈಕಲಗಾರ, ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾಬಾಯಿ ಲಮಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪರಪ್ಪಗೌಡ್ರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಿಯಾಜ್ ಲೋಹಾರ, ರಾಜೇಸಾಬ ಮಾನೇಗಾರ, ಶಂಕರ್ ಬಡಿಗೇರ, ಕಲಂದರ ಎಲೆದಹಳ್ಳಿ, ಈರಪ್ಪ ಅಂಗಡಿ, ರೇಶ್ಮಾ ಬೀರಬ್ಬಿ, ಸಾಧೀಕ ಮೂಲಮೂರಿ, ಜ್ಯೋತಿ ಅರಕಸಾಲಿ, ಪವೀತ್ರಾ, ಮಹಾವೀರ ಹಳ್ಳಿಯವರ, ಕರವೇ ಗಜಪಡೆ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.