ಹಾವೇರಿ | ಅಂಧ ಶಿಕ್ಷಕ ಮಂಜುನಾಥ ಕಮ್ಮಾರಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Date:

ಹಾವನೂರು ಪ್ರತಿಷ್ಠಾನವು ಪ್ರತಿ ವರ್ಷದಂತೆ ಶಿಕ್ಷಕರ ದಿನಾಚರಣೆಗೆ ನೀಡುವ ಅತ್ಯುತ್ತಮ ಶಿಕ್ಷಕ ಪ್ರಶ್ತಸ್ತಿಯನ್ನು ಅಂಧ ಶಿಕ್ಷಕ ಮಂಜುನಾಥ ಕಮ್ಮಾರಗೆ ಲಭಿಸಿದೆ.

- Advertisement -

ಹಾವೇರಿ ಪಟ್ಟಣದ ವಿನಾಯಕ ನಗರದಲ್ಲಿರುವ ಜ್ಞಾನ ಜ್ಯೋತಿ ಅಂಧರ ಶಾಲೆಯಲ್ಲಿ ಅಂಧ ಮಕ್ಕಳ ವಸತಿಯುತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಅಂಧ ಸಂಗೀತ ಶಿಕ್ಷಕ ಮಂಜುನಾಥ ಎಸ್. ಕಮ್ಮಾರ ಅವರಿಗೆ ಪಟ್ಟಣದ ಇಜಾರಿಲಕಮಾಪುರದ ಜ್ಞಾನ ಪ್ರಜ್ಞಾ ಶಿಕ್ಷಣ ಸಂಸ್ಥೆಯಲ್ಲಿ ಹಾವನೂರು ಪ್ರತಿಷ್ಠಾನವು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ನಂತರ ಹಿರಿಯ ಸಾಹಿತಿ ಹನಮಂತ ಗೊಲ್ಲರ ಮಾತನಾಡಿ, “ದೈಹಿಕವಾಗಿ ಎಲ್ಲವನ್ನೂ ಪಡೆದವರಿಗಿಂತ ವಿಕಲಾಂಗರಿಗೆ ಪ್ರಶಸ್ತಿ ನೀಡುವುದು ಸಮಾಜಪರವಾದ ಒಳ್ಳೆ ಕೆಲಸ. ಅಂಧರಾದ ಮಂಜುನಾಥ ಸಂಗೀತ ಶಿಕ್ಷಕರಾಗಿ ನೂರಾರು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಧಾರೆ ಎರೆದವರು. ಇಂಥವರನ್ನು ಹಾವನೂರು ಪ್ರತಿಷ್ಠಾನು ಗುರುತಿಸಿ ಸನ್ಮಾನಿಸುತ್ತಿರುವುದು ಮಾದರಿಯ ಕೆಲಸ” ಎಂದು ನುಡಿದರು. 

ಮುಖ್ಯ ಅತಿಥಯಾಗಿದ್ದ ಹಾವೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ವಾಯ್.ಬಿ.ಆಲದಕಟ್ಟಿ – “ಅಲಕ್ಷಿತ ಮತ್ತು ಉಪೇಕ್ಷೆಗೊಳಗಾದವರನ್ನು ಸಮಾಜ ಗುರುತಿಸಬೇಕು. ಅಂತಹ ಕೆಲಸವನ್ನು ಹಾವನೂರು ಪ್ರತಿಷ್ಠಾ ಮೂರು ದಶಕಗಳಿಂದ ಮಾಡುತ್ತಿರುವುದು ಪ್ರಶಂಸನೀಯ” ಎಂದರು.

ಹಾವನೂರು ಪ್ರತಿಷ್ಠನದ ಅಧ್ಯಕ್ಷ ವಿರೂಪಾಕ್ಷ ಹಾವನೂರು ಮಾತನಾಡಿ, “ಶಿಕ್ಷಕರ ದಿನಾಚರಣೆಯ ನಿಮಿತ್ತ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗೆ ಶಿಕ್ಷಕ ಮಂಜುನಾಥ ಕಮ್ಮಾರ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ಅವಿರತವಾಗಿ ಸಂಗೀತ ಸೇವೆಯಲ್ಲಿಯೇ ತೊಡಗಿಸಿಕೊಂಡಿದ್ದು, ಅವರ ಸಂಗೀತ ಸೇವೆ ಹಾಗೂ ಪ್ರತಿಭೆಯನ್ನು ಗುರುತಿಸಿ ಗೌರವಿಸಲಾಗಿದೆ” ಎಂದು ಹೇಳಿದರು. 

ಈ ಸಂರ್ಭದಲ್ಲಿ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಕಮ್ಮಾರ ಮತ್ತು ಪತ್ನಿ ಶ್ರೀಮತಿ ಕವಿತಾ ಅವರನ್ನು ಪ್ರತಿಷ್ಠಾನದ ಅಧ್ಯಕ್ಷರಾದ ವಿರೂಪಾಕ್ಷ ಹಾವನೂರ ಹಾಗೂ ವೇದಿಕೆ ಗಣ್ಯರು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು.

ಸಮಾರಂಭವನ್ನು ಉದ್ದೇಶಿಸಿ ಹಿರಿಯ ನ್ಯಾಯವಾದಿ ಕೆ.ಸಿ. ಪಾವಲಿ, ಮುಖ್ಯೋಪಾಧ್ಯಾಯರಾದ ವಸಂತ ಮಾಗಣಿನವರ, ಗುರುಪಾದಗೌಡ ಪಾಟೀಲ, ಸುಭಾಸ ಹುಲ್ಯಾಳದ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮುಂತಾದವರು ಮಾತನಾಡಿದರು. ಗಣ್ಯರಾದ ಸರ್ವಶ್ರೀ ಈರಣ್ಣ ಬೆಳವಡಿ, ಮನೋಹರ ಅರ್ಕಸಾಲಿ, ಜಗದೀಶ ಚೌಟಗಿ, ಶಿಕ್ಷಕಿ ಲಿಂಗಾಮಣಿ ಮುಂತಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಚಂದ್ರಶೇಖರ ಮಾಳಗಿ ಸ್ವಾಗತಿಸಿದರು. ಎಸ್.ಆರ್. ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀದೇವಿ ಹಾವನೂರು ನಡೆಸಿಕೊಟ್ಟರೆ, ಎನ್.ಬಿ.ಕಾಳೆ ಎಲ್ಲರನ್ನು ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಡೀಪುರ ಅರಣ್ಯದಲ್ಲಿ ಹೆಣ್ಣಾನೆ ಕಳೇಬರ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮಾರಿಕಟ್ಟೆ ಕೆರೆ ಸಮೀಪದ...

ಬಂಡೀಪುರದಲ್ಲಿ ಉರುಳು ಹಾಕಿ ಹುಲಿ ಕೊಂದ ಆರೋಪ: ವ್ಯಕ್ತಿ ಬಂಧನ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉರುಳು ಹಾಕಿ ಹುಲಿಯನ್ನು ಕೊಂದ ಪ್ರಕರಣಕ್ಕೆ...

ವಿಚಾರವಾದಿಗಳು ಕಂಡ ಗಾಂಧೀ-ಟಿಪ್ಪು ಮತ್ತು ಕೋಮುವಾದಿಗಳ ತಿರುಚುವಿಕೆ!

ಇತಿಹಾಸದ ಕುರಿತು ಪ್ರಶ್ನೆಗಳನ್ನು ಎತ್ತುವುದು ಪ್ರಜಾಪ್ರಭುತ್ವದ ಲಕ್ಷಣ. ಆದರೆ ಪ್ರಶ್ನೆಗಳನ್ನು ಎತ್ತುವ...

ವಿಜಯಪುರ | ಸಾಧಕ ಗಣ್ಯರಿಗೆ ರಾಜ್ಯೋತ್ಸವ ಸನ್ಮಾನದ ಗೌರವ; ಅರ್ಜಿ ಆಹ್ವಾನ

2026 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನ. 1ರಂದು ವಿಜಯಪುರ...