“ಸಣ್ಣ ಆರ್ಥಿಕ ಬಂಡವಾಳ ಹೂಡಿಕೆ ಮಾಡಿಕೊಂಡು ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಈ ಮೂಲಕ ಉದ್ಯಮಿಯು ಮಾರುಕಟ್ಟೆಯಲ್ಲಿನ ಅವಕಾಶಗಳನ್ನು ಗುರುತಿಸಿಕೊಳ್ಳಬೇಕು” ಸಂಪನ್ಮೂಲಕ ವ್ಯಕ್ತಿ ಮಂಜುನಾಥ ಸಣ್ಣನಿಂಗಣ್ಣನವರ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ರೋಷನಿ ಟ್ರಸ್ಟ್ ನಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ ಹಾಗೂ ರೋಶನಿ ಟ್ರಸ್ಟ ಹಾನಗಲ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹತ್ತು ದಿನಗಳ ಉದ್ಯಮಶೀಲತಾ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
“ಅಗತ್ಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಮಸ್ಯೆಗಳನ್ನು ಸ್ವೀಕರಿಸಿಕೊಂಡು ಸೃಜನಶೀಲತೆ, ಆತ್ಮವಿಶ್ವಾಸ, ನಾಯಕತ್ವ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಕಠಿಣ ಪರಿಶ್ರಮ ಹಾಗೂ ನಾವಿನ್ಯತೆಯ ಮನೋಭಾವ ಯಶಸ್ವಿ ಉದ್ಯಮಿಯ ಗುಣಗಳಾಗಿವೆ” ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಜುನಾಥ ಸಣ್ಣನಿಂಗಣ್ಣವರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಶನಿ ಸಂಸ್ಥೆಯ ಕಾರ್ಯಕ್ರಮಗಳ ವ್ಯವಸ್ಥಾಪಕ ಕೆ.ಎಫ್ ನಾಯ್ಕರ ಮಾತನಾಡಿ, “ಉದ್ಯೋಗ ಹುಡುಕುವುದಕ್ಕಿಂತ ಉದ್ಯೋಗ ನೀಡುವವರಾಗಬೇಕು ಎಂಬ ಮನೋಭಾವ ಯುವಜನರಲ್ಲಿ ಬೆಳೆಸುವ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಬಹುದಾಗಿದೆ. ಉದ್ಯಮಶೀಲತೆಯನ್ನು ಉತ್ತೇಜಿಸುವುದು ವ್ಯಕ್ತಿಯ ಸ್ವಾವಲಂಬನೆಯ ಜೊತೆಗೆ ಕುಟುಂಬ, ಸಮಾಜ ಮತ್ತು ದೇಶದ ಪ್ರಗತಿಗೂ ಸಹಾಯಕಾರಿ ಆಗಲಿದೆ ಎಂದು ಹೇಳಿದರು.
“ಉದ್ಯವಶೀಲತೆಯ ಬೆಗಳವಣಿಗೆಗೆ ಕೌಶಲ್ಯ ತರಬೇತಿ, ಮಾರ್ಗದರ್ಶನ, ಹಣಕಾಸಿನ ನೆರವು ಮತ್ತು ಮಾರುಕಟ್ಟೆ ಸಂಪರ್ಕಗಳು ಅತಂತ ಅಗತ್ಯ. ಸರಕಾರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಕಾರ್ಯಾಗಾರಗಳ ಮೂಲಕ ಯುವಜನರಿಗೆ ತರಬೇತಿ ಮತ್ತು ಉದ್ಯಮ ಪ್ರಾರಂಭಿಸಲು ಅಗತ್ಯ ಬೆಂಬಲ ನೀಡುತ್ತಿದೆ ಇದರ ಸದ್ಬಳಕೆ ಆಗಲಿ” ಎಂದು ಹೇಳಿದರು.
“10 ದಿನಗಳ ತರಬೇತಿಯಲ್ಲಿ ಉದ್ಯಮ ಎಂದರೆನು, ಜಿ.ಎಸ್.ಟಿ ಪ್ರಾಮುಖ್ಯತೆ, ಬಂಡವಾಳ ಹೂಡಿಕೆ, ಮಾರುಕಟ್ಟೆ ಮತ್ತು ಸಮುದಾಯ, ಮೇಣದ ಬತ್ತಿ ತಯಾರಿಕೆ, ಗೋವಿನ ಜೋಳದಲ್ಲಿ ಮಾಲೆ ಮಾಡುವ ವಿಧಾನ ಹಾಗೂ ಒಂದು ದಿನ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಯಿತು.
ವ್ಯವಸಾಯದಲ್ಲಿ ಉತ್ತಮ ಸಾಧನೆ ಮಾಡಿದ ಕಾಮನಹಳ್ಳಿ ಗ್ರಾಮದ ಮುತ್ತಣ್ಣ ಪೂಜಾರ ಅವರ ವ್ಯವಸಾಯ ಪದ್ದತಿ, ಶಿವಪುರದ ಗ್ರಾಮದ ಮೇಹಬೂಬ ಅಲಿ ಕೊಪ್ಪರಸಿಕೊಪ್ಪ ಇವರ ಐಸ್ ಕ್ರೀಮ್ ತಯಾರಿಕ ಘಟಕ ಹಾಗೂ ಹಿರೂರು ಗ್ರಾಮದ ಹತ್ತಿರ ಇರುವ ಮಹೇಶ ಕಲಾಲ ಅವರ ಶುದ್ಧ ನೀರಿನ ಘಟಕ ವಿಕ್ಷಣೆ ಮಾಡಿಸಿರುವುದರಿಂದ ಶಿಭಿರಾರ್ಥಿಗಳಲ್ಲಿ ಉದ್ಯಮ ಮಾಡಬೇಕೆಂಬ ಮನೊಥೈರ್ಯ ಬಂದಿರುತ್ತದೆ ಎಂದು ಶಿಡಾಕ್ ಸಂಸ್ಥೆ ತರಬೇತುದಾರ ವಿನಯ ಜಿ ಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ತರಬೇತಿ ಪೂರ್ಣಗೊಳಿಸಿದ 61 ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಜನವೇದಿಕೆ ಮುಖಂಡ ಮಂಜುನಾಥ ಕುದುರಿ, ಆದರ್ಶ ತಾಲೂಕು ಮಹಿಳಾ ಒಕ್ಕೂಟದ ಸದಸ್ಯೆ ಲಕ್ಷ್ಮವ್ವ ಸುಣಗಾರ ಹಾಗೂ ಶಿಭಿರಾರ್ಥಿಗಳು ಉಪಸ್ಥಿತರಿದ್ದರು.





