ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ಆದರ್ಶ ತಾಲೂಕು ಮಹಿಳಾ ಒಕ್ಕೂಟ ಹಾನಗಲ್ಲ ಹಾಗೂ ಜನವೇದಿ ಜನವೇದಿಕೆ ಸಹಯೋಗದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಅರಣ್ಯ ಇಲಾಖೆ ಆರ್.ಎಫ್.ಒ ಗಣೇಶ ಶೆಟ್ಟರ ಉದ್ಘಾಟಿಸಿ ಅವರು ಮಾತನಾಡಿದರು.
“ಪರಿಸರದ ಸಮತೋಲನಕ್ಕೆ ಸಮಾಜದ ಪ್ರತಿ ವ್ಯಕ್ತಿಯು ಶ್ರಮಿಸುವ ಅಗತ್ಯವಿದೆ. ಪ್ರಸ್ತುತ ವರ್ಷದ ಗರಿಷ್ಠ ತಾಪಮಾನವನ್ನು ಗಮನಿಸಿದರೆ ಗಿಡ ಮರಗಳ ಅವಶ್ಯಕತೆಯ ಅರಿವಾಗುತ್ತಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಶನಿ ಸಂಸ್ಥೆಯ ನಿರ್ದೇಶಕರು ಸಿಸ್ಟರ್ ಅನಿತಾ ಡಿಸೋಜಾ ಮಾತನಾಡಿ, “”ಪ್ರತಿ ಮನುಷ್ಯನು ಪ್ಲಾಸ್ಟೀಕ್ ಬಳಕೆಯಲ್ಲಿ ತೊಡಗಿ, ಸಮಾಜದ ಮಾಲಿನ್ಯಕ್ಕೆ ಪಾತ್ರದಾರಿಯಾಗಿದ್ದಾನೆ. ಪರಿಸರ ಉತ್ತಮವಾಗಿದ್ದರೆ, ನಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆ ಬದಲು ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಹಾನಗಲ್ಲ ತಾಲೂಕು ಕೆರೆಕಟ್ಟೆಗಳ ನಾಡಾಗಿದ್ದು, ಕಾಲುವೆಗಳ ದುರಸ್ಥಿ ಮಾಡಿ ಮಳೆಗಾಲದಲ್ಲಿ ನೀರು ಸಂಗ್ರಹಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದು ಅಗತ್ಯವಿದೆ. ಮಗುವಿಗೊಂದು ಮರ ನೆಡಲು ಸಂಪ್ರದಾಯ ಹಾಕಿಕೊಳ್ಳಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮಗಳ ನಿರ್ವಾಹಕ ಅಧಿಕಾರಿ ಕೆ.ಎಫ್ ನಾಯ್ಕರ್ ಅವರು ಪ್ರಾಸ್ತಾವಿಕ ಮಾತನಾಡಿ, “ಪರಿಸರ ದಿನಾಚರಣೆ ನಿಮಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ 60 ಜನರಿಗೆ ಸಸಿ ವಿತರಿಸಲಾಗುತ್ತದೆ. ಅವುಗಳನ್ನು ಸರಿಯಾಗಿ ಬೆಳೆಸಿ ಇತರರಿಗೆ ಮಾದರಿ ಆಗಬೇಕು. ಮುಂದಿನ ದಿನಗಳಲ್ಲಿ ಸಂಸ್ಥೆಯ ಮಾರ್ಗದರ್ಶನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನಾದ್ಯಂತ 500 ಸಸಿಗಳನ್ನು ನೆಡುವ ಗುರಿ ಹಾಕಿಕೊಳ್ಳಲಾಗಿದೆ. ಪ್ರತಿಯೊಬ್ಬರು ಸಹಕರಿಸಬೇಕು” ಎಂದು ಹೇಳಿದರು.
“ಜೂನ್ ತಿಂಗಳಲ್ಲಿ ಮಳೆಯ ಅಭಾವ ಎದುರಿಸುತ್ತಿದ್ದು, ಇದ್ದಕ್ಕೆ ಮುಖ್ಯ ಕಾರಣ ಮಾನವನ ಪರಿಸರದ ಮೇಲೆ ನಿಷ್ಕಾಳಜಿಯೇ ಕಾರಣವಾಗಿದೆ” ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಆದರ್ಶ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಂಗಾ ಗೋಣಿಬಸಣ್ಣನವರ, ಉಪಾಧ್ಯಕ್ಷೆ ಶೈಲಾ ಹಾವಣಗಿ, ಕಾರ್ಯದರ್ಶಿ ಕವಿತಾ ಗೌಡಗೇರಿ, ಖಜಾಂಚಿ ಚೈತ್ರಾ ಹನುಮಂತನವರ, ಜನವೇದಿಕೆ ಮುಖಂಡರು ಸೋಮಲಪ್ಪ ಕೋಪ್ಪದ, ಪಾಲಾಕ್ಷಯ್ಯ ಹಿರೇಮಠ, ಪಕ್ಕೀರಪ್ಪ ಬಾಳೂರ, ಮಂಜುನಾಥ ಕುದರಿ, ಕಲೀಮ್ ಮಾಸನಕಟ್ಟಿ, ಮಂಗಳಾ ಬೆಣ್ಣೆ, ಗೀತಾಂಜಲಿ ತಳವಾರ, ವೀರುಪಾಕ್ಷಪ್ಪ ಮೂಡುರ, ರಾಮಚಂದ್ರ ಶಿಡ್ಲಾಪುರ, ಮಲ್ಲಮ್ಮ ಕ್ಯಾಬಳ್ಳಿ ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದರು ಹಾಗೂ ಪರಿಸರ ಜಾಗೃತಿ ಗೀತೆಗಳನ್ನು ರೋಶನಿ ಸಿಬ್ಬಂದಿಗಳು ನೆರವೇರಿಸಿಕೊಟ್ಟರು. ಡಿಗ್ಗಪ್ಪ ಲಮಾಣಿ ನಿರೂಪಿಸಿದರು. ಮೇಘನಾ ನಂದಿಕೋಪ್ಪ ಸ್ವಾಗತಿಸಿದರು, ರಾಜೇಶ್ವರಿ ಹನಕನಹಳ್ಳಿ ವಂದಿಸಿದರು.





