“ರಟ್ಟಿಹಳ್ಳಿ ತಾಲ್ಲೂಕಿನ ತುಂಗಭದ್ರಾ ನದಿ ಮೂಲದಲ್ಲಿ ಅಕ್ರಮ ಮರಳು ಸಾಗಾಣಿಕೆ ಜೋರಾಗಿದ್ದು, ಎಗ್ಗಿಲ್ಲದೇ ರಾಜಾ ರೋಷವಾಗಿ ನಡೆಯುತ್ತಿದೆ. ನದಿಯ ಮೂಲದಿಂದ ಅಕ್ರಮ ಮರಳು ಅವೈಜ್ಞಾನಿಕವಾಗಿ ತೆಗೆಯುತ್ತಿದ್ದಾರೆ. ಇದರಿಂದ ಅಂತರ್ಜಲ ಮಟ್ಟ ಕುಸಿಯುವ ಸಂಭವ ಹಾಕಬೇಕು” ಎಂದು ಕರವೇ ಸ್ವಾಭಿಮಾನಿ ಬಳಗ ಮುಖಂಡರು ಒತ್ತಾಯಿಸಿದರು.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ವತಿಯಿಂದ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಬೇಕೇಂದು ತಾಲೂಕಾ ದಂಡಾಧಿಕಾರಿ ಹಾಗೂ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.
ಕರವೇ ಸ್ವಾಭಿಮಾನಿ ಬಳಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಮಾತನಾಡಿ, “ಅಕ್ರಮ ಮರಳು ಸಾಗಾಣಿಕೆಯಿಂದ ಜಲಚರ ಪ್ರಾಣಿಗಳಿಗೆ ಜೀವ ಹಾನಿಯಾಗುವ ಸಂಭವ ಇರುತ್ತದೆ. ಅಕ್ರಮ ಮರಳು ಸಾಗಾಣಿಕೆಗೆ ಬಳಸುವ ವಾಹನಗಳು ಭಾರಿ ಪ್ರಮಾಣದಲ್ಲಿ ಹೇರಿಕೊಂಡು ಸಾಗಾಣಿಕೆ ಮಾಡುತ್ತಿರುವುದರಿಂದ ರಟ್ಟೆಹಳ್ಳಿ ತಾಲ್ಲೂಕಿನ ಮುಖ್ಯ ರಸ್ತೆಯು ಹಾಳಾಗಿರುತ್ತವೆ. ಮರಳು ಸಾಗಾಣಿಕೆ ಮಾರಾಟ ಮಾಡುವವವರು, ಸರ್ಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ತಮ್ಮ ಲಾಭಕ್ಕೋಸ್ಕರ ಹಗಲು ರಾತ್ರಿಯನ್ನದೇ ಅತಿಯಾಗಿ ಮರಳು ಸಾಗಾಣಿಕೆ ಮಾಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಈ ಹಿಂದೆ ನಾವು ನಮ್ಮ ಸಂಘಟನೆ ವತಿಯಿಂದ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಗಟ್ಟಲು ಟಾಸ್ಕ್ ಫೋರ್ಸ್ ನಿರ್ಮಿಸುವಂತೆ ಹಾಗೂ ಸೂಕ್ತ ತನಿಖೆ ನಡೆಸುವಂತೆ ಮೌಖಿಕವಾಗಿ ಹಾಗೂ ಲಿಖಿತವಾಗಿ ಮನವಿ ಮಾಡಿಕೊಂಡರೂ ಸಹ ಈವರೆಗೂ ಯಾವುದೇ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ. ಈಗಲೂ ಸಹ ಅಕ್ರಮ ಮರಳು ದಂದೆ ನಡೆಯುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಮ್ಮ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಈಗಾಗಲೇ ರಟ್ಟಿಹಳ್ಳಿ ತಾಲ್ಲೂಕಿನ ಭಾಗದಲ್ಲಿ ಅಕ್ರಮವಾಗಿ ಸಾಗಿಸುವುತ್ತಿರುವ ಮರಳು ದಂದೆಗೆ ಕಡಿವಾಣ ಹಾಕಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ನಮ್ಮ ಸಂಘಟನೆ ವತಿಯಿಂದ ತಮ್ಮ ಕಾರ್ಯಾಲಯದ ಮುಂದೆ ಅಹೋರಾತ್ರಿ ಧರಣಿ ನಡೆಸಲು ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಳಗ ರಾಜ್ಯ ಕಾರ್ಯಧ್ಯಕ್ಷರು ಯೊಸುಫ್ ಸೈಕಲಗಾರ, ರಟ್ಟೀಹಳ್ಳಿ ತಾಲೂಕ ಅಧ್ಯಕ್ಷರು ರಾಮಚಂದ್ರಪ್ಪ ಹಿಂಡಸಗಟ್ಟಿ, ಹಿರೇಕೆರೂರು ತಾಲ್ಲೂಕ್ ಅಧ್ಯಕ್ಷರು ದೇವರಾಜ ಈಳಗೇರ, ಜಿಲ್ಲಾ ಗೌರವ ಅಧ್ಯಕ್ಷರು ಪ್ರಕಾಶ್ ಡೂಂಬರ, ಸುರೇಶ್ ಸುಂಕದ, ನಾಗರಾಜ್ ಈಳಗೇರ, ಖಲಂದರ್ ಹಿತ್ತಲಮನಿ,ಕಾಂತೇಶ ಈಳಗೇರ ಉಪಸ್ಥಿತರಿದ್ದರು.





