ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರನ್ನಾಗಿ ಪ್ರಭುಗೌಡ ಶಂಕರಗೌಡ ಬಿಷ್ಟನಗೌಡ್ರು ಅವರನ್ನು ನೇಮಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಪ್ರಭುಗೌಡ ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಕಾಂಗ್ರೆಸ್ ನಗರ ಬ್ಲಾಕ್ನ ಅಧ್ಯಕ್ಷರಾಗಿ 11 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಕವೇ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಎರಡೂವರೆ ವರ್ಷಕ್ಕೊಬ್ಬರಂತೆ ಅಧ್ಯಕ್ಷರನ್ನು ನೇಮಿಸಲು ತೀರ್ಮಾನಿಸಲಾಗಿತ್ತು ಎಂಬ ಮಾತುಗಳಿದ್ದವು.
ಆರಂಭದಲ್ಲಿ, ಕಾಂಗ್ರೆಸ್ ಮುಖಂಡ ಎಸ್.ಎಫ್.ಎನ್. ಗಾಜೀಗೌಡ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಎರಡುವರೆ ವರ್ಷ ಮುಗಿದ ನಂತರುವೂ ಅವರೇ ಅಧ್ಯಕ್ಷರಾಗಿದ್ದರು.
ಎರಡು ವರ್ಷ ಎಂಟು ತಿಂಗಳು ಅಧಿಕಾರದಲ್ಲಿದ್ದ ಗಾಜೀಗೌಡ್ರ ಅವರ ಸ್ಥಾನಕ್ಕೆ ಇದೀಗ, ರಾಜ್ಯ ಸರ್ಕಾರ ಪ್ರಭುಗೌಡ ಅವರನ್ನು ನೇಮಕ ಮಾಡಲಾಗಿದೆ.





