ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದೆ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಇದರಿಂದ ಪ್ರಯಾಣಿಕರು ಪರದಾಟ ಹೇಳತೀರದಾಗಿದೆ. ಹಲವಾರು ವರ್ಷಗಳಿಂದ ಶೌಚಾಲಯ ಸ್ವಚ್ಚತೆ ಮರಿಚೀಕೆಯಾಗಿದ್ದು, ಪ್ರಯಾಣಿಕರು ಮೂತ್ರ ವಿಸರ್ಜನೆಗೆ ಪರದಾಡುವದನ್ನು ಕಂಡು ಇತರ ಪ್ರಯಾಣಿಕರು, ಸಾರ್ವಜನಿಕರು ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಬಸ್ ನಿಲ್ದಾನದಲ್ಲಿರುವ ಶೌಚಾಲಯ ಇದ್ದು ಇಲ್ಲದಂತಾಗಿದೆ. ಸರಿಯಾದ ನಿರ್ವಹಣೆ ಇಲ್ಲದೇ ಶೌಚಾಲಯ ಗಬ್ಬುನಾತ ಬಿರುತ್ತಿದೆ. ಇದರಿಂದ ನಿತ್ಯ ಪ್ರಯಾಣಿಸುವ ಮಹಿಳೆಯರಿಗೆ ವಿದ್ಯಾರ್ಥಿನಿಯರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ.

ಸ್ವಚ್ಚತೆ ಇಲ್ಲದ ಶೌಚಾಲಯ ಗಬ್ಬೆದ್ದು ನಾರುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿದಿಗಳು ಸರಿಮಾಡಿಸುತ್ತಿಲ್ಲ. ಊರಿಂದ ಬರುವ ಮಹಿಳೆಯರು, ವಿದ್ಯಾರ್ಥಿಗಳು, ವೃದ್ದರು ಮಲ, ಮೂತ್ರಕ್ಕೆ ಹೋಗದ ಸ್ಥಿತಿಯಲ್ಲಿ ಶೌಚಾಲಯ ಇದೆ. ಕೂಡಲೇ ಅಧಿಕಾರಿಗಳು ಲ, ಜನಪ್ರತಿನಿದಿಗಳು ಬಸ್ ನಿಲ್ದಾಣದ ಶೌಚಾಲಯವನ್ನು ಸ್ವಚ್ಚತೆಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.
ವರದಿ: ರಾಹುಲ್ ಮಡಿವಾಳರ ಈದಿನ.ಕಾಮ್ ಮೀಡಿಯಾ ವಾಲಂಟಿಯರ್





