ಕೆಜಿಎಫ್ | ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಸಂಕಷ್ಟ: ರೈತರ ಸ್ಕೂಟರ್ ಜಾಥಾ ಯಶಸ್ವಿ

Date:

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (NE-7) ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ಕೃಷಿ ಭೂಮಿಗೆ ಸಂಪರ್ಕ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತರಲ್ಲಿ ಜಾಗೃತಿ ಮೂಡಿಸಲು, ಹೊಸ ಕೋಟೆಯಿಂದ ಆಂಧ್ರಪ್ರದೇಶ ಗಡಿಯವರೆಗಿನ ಬಾಧಿತ ವಲಯಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತರ ಸ್ಕೂಟರ್ ಜಾಥಾ ಅತ್ಯಂತ ಯಶಸ್ವಿಯಾಗಿ ಜರುಗಿತು.

- Advertisement -

ಇದೇ ವೇಳೆ ಹೆದ್ದಾರಿ ಪ್ರಾಧಿಕಾರ ಹಾಗೂ ಅಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅನ್ನದಾತರ ಹೊಟ್ಟೆಮೇಲೆ ಹೊಡೆಯುತ್ತಿರುವ ಇವರ ಅಧಿಕಾರಾವಧಿ ಹಾಳಾಗಲಿ ಎಂದು ತೀವ್ರವಾಗಿ ಶಾಪ ಹಾಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಮುಚ್ಚಿಹೋದ ಸಾಂಪ್ರದಾಯಿಕ ರಸ್ತೆಗಳು- ರೈತರ ಕಂಗಾಲು

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಯ ಇಕ್ಕೆಲಗಳಲ್ಲಿ ಬೃಹತ್ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸಿದೆ. ಇದರಿಂದಾಗಿ ಹೊಸಕೋಟೆಯಿಂದ ಆಂಧ್ರಪ್ರದೇಶ ಗಡಿಯವರೆಗಿನ ನೂರಾರು ಹಳ್ಳಿಗಳ ಸಾಂಪ್ರದಾಯಿಕ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಮುಚ್ಚಿಹೋಗಿವೆ.

ಪರಿಣಾಮವಾಗಿ, ರೈತರು ತಮಗೆ ಉಳಿದಿರುವ ಜಮೀನುಗಳಿಗೆ ಹಾಗೂ ಭೂಸ್ವಾಧೀನಗೊಳ್ಳದ ಇತರೆ ಕೃಷಿ ಭೂಮಿಗಳಿಗೆ ತೆರಳಲು ದಾರಿಯಿಲ್ಲದೆ ಕಂಗಾಲಾಗಿದ್ದಾರೆ. ಸೂಕ್ತ ದಾರಿಯಿಲ್ಲದೆ ಆಹಾರ ಧಾನ್ಯಗಳ ಉತ್ಪಾದನೆ ಸಂಪೂರ್ಣ ಕುಂಠಿತಗೊಂಡಿದ್ದು, ಭೂಮಿಗಳ ಮೌಲ್ಯವು ಅಪಮೌಲ್ಯವಾಗಿದೆ. ಅಷ್ಟೇ ಅಲ್ಲದೆ, ದಾರಿಯಿಲ್ಲದೆ ಕುರಿ-ಪಶುಸಂಗೋಪನೆ ಕೃಷಿ ಮಾಡಲಾಗದೆ ಇಡೀ ರೈತ ಕುಟುಂಬಗಳ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ ಎಂದು ರೈತನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃತಕ ಅಣೆಕಟ್ಟಾದ ಹೆದ್ದಾರಿ; ಜಲಾವೃತವಾಗುತ್ತಿರುವ ಕೃಷಿ ಭೂಮಿ
ಹೆದ್ದಾರಿಯಲ್ಲಿ ಬೀಳುವ ಮಳೆನೀರು ಸರಾಗವಾಗಿ ಹರಿದು ಹೋಗಲು ರಸ್ತೆಯ ಎರಡು ಕಡೆ ತನ್ನ ಕಾಂಪೌಂಡ್ ಒಳಗಡೆಯೇ ಕಾಲುವೆ ವ್ಯವಸ್ಥೆ ಮಾಡಿಕೊಂಡಿದೆ. ಆದರೆ, ಕೃಷಿ ಜಮೀನುಗಳಲ್ಲಿ ಬೀಳುವ ಮಳೆನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ಹೊಲಗಳಲ್ಲೇ ನಿಂತು ಕೆರೆಗಳಂತಾಗುತ್ತಿವೆ. ಹೆದ್ದಾರಿಯ ಎತ್ತರದ ರಸ್ತೆಗಳು ಅಣೆಕಟ್ಟುಗಳಂತೆ ಪರಿವರ್ತನೆಯಾಗಿದ್ದು, ಇಡೀ ಕೃಷಿ ಭೂಮಿಗಳು ಜಲಾವೃತವಾಗುತ್ತಿವೆ.

ಇದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ನಿಯಮಗಳಷ್ಟೇ ಅಲ್ಲದೆ, ಸಂವಿಧಾನದ ಆರ್ಟಿಕಲ್ 21 (ಜೀವಿಸುವ ಹಕ್ಕು) ಮತ್ತು ಆರ್ಟಿಕಲ್ 300A (ಆಸ್ತಿಯ ಹಕ್ಕು) ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ರೈತರು ರಾಷ್ಟ್ರೀಯ ಹೆದ್ದಾರಿ ವಿರುದ್ಧ ಹರಿಹಾಯ್ದಿದ್ದಾರೆ.

ಪೋಸ್ಟ್ ಮಾಸ್ಟರ್ ಗಳಂತೆ ವರ್ತಿಸುತ್ತಿರುವ ಅಧಿಕಾರಿಗಳು
ರೈತ ಮುಖಂಡರಾದ ನಾಗೇಂದ್ರ ಕುಮಾರ್ ಬುಜ್ಜಿ, ವೆಂಕಟಾಚಲಪತಿ ಹಾಗೂ ಚಂದ್ರಶೇಖರ್ ಬಾಬು ಅವರ ನೇತೃತ್ವದಲ್ಲಿ ಇಡೀ ಬಾಧಿತ ರೈತರ ಪರವಾಗಿ ತಹಶೀಲ್ದಾರ್, ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಪುನರಾವರ್ತಿತ ಮನವಿಗಳನ್ನು ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಅಧಿಕಾರಿಗಳು ಸಂವಿಧಾನ ತಮಗೆ ನೀಡಿರುವ ಅಧಿಕಾರದ ಹಕ್ಕನ್ನು ಚಲಾಯಿಸದೆ, ಕೇವಲ ಪೋಸ್ಟ್ ಮಾಸ್ಟರ್ ಗಳಂತೆ ರೈತರ ಮನವಿಗಳನ್ನು ಸ್ವೀಕರಿಸಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ರವಾನಿಸುತ್ತಿದ್ದಾರೆ. ಇತ್ತ ಹೆದ್ದಾರಿ ಪ್ರಾಧಿಕಾರವು ರೈತರ ಅಹವಾಲುಗಳಿಗೆ ಕಿಂಚಿತ್ತೂ ಬೆಲೆ ನೀಡದೆ ಕಸದ ಬುಟ್ಟಿಗೆ ಎಸೆದು ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದಕ್ಕೆ ರೈತರು ಹಿಡಿಶಾಪ ಹಾಕುತ್ತಿದ್ದಾರೆ.

ಪ್ರಧಾನಿ ಕಚೇರಿ ಮಧ್ಯಪ್ರವೇಶ:
ನೆಪ ಹೇಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ಥಳೀಯ ಅಧಿಕಾರಿಗಳಿಂದ ನ್ಯಾಯ ಸಿಗದಿದ್ದಾಗ ಕೊನೆಯ ಅಸ್ತ್ರವಾಗಿ ರೈತ ಮುಖಂಡರುಗಳು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ತಮಗಾಗುತ್ತಿರುವ ಅನ್ಯಾಯವನ್ನು ವಿವರಿಸಿದ್ದರು. ಪ್ರಧಾನಿ ಕಚೇರಿಯ ಮಧ್ಯಪ್ರವೇಶದ ಬೆನ್ನಲ್ಲೇ ಗಾಢ ನಿದ್ರೆಯಿಂದ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರವು, ಸೇವಾ ರಸ್ತೆ (ಸರ್ವಿಸ್ ರೋಡ್) ನಿರ್ಮಿಸಲು 5 ಮೀಟರ್ ಭೂಸ್ವಾಧೀನ ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ, ಆದರೆ ರಾಜ್ಯ ಸರ್ಕಾರದಿಂದ ನಮಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರ ಹೂಡಿದೆ.

ಒಂದೆಡೆ ರಾಜ್ಯ ಸರ್ಕಾರ ಸೇವಾ ರಸ್ತೆಗಾಗಿ ಭೂಮಿ ನೀಡುತ್ತಿಲ್ಲ, ಹಾಗೂ ಇನ್ನೊಂದೆಡೆ ಇಂಡಿಯನ್ ರೋಡ್ಸ್ ಕಾಂಗ್ರೆಸ್ ಮ್ಯಾನುಯಲ್ ನಿಯಮಗಳನ್ನು ತೋರಿಸಿ ಸೇವಾ ರಸ್ತೆ ನೀಡಲು ಬರುವುದಿಲ್ಲ ಎಂಬ ದೊಂಡಿ ನಿಲುವಿಗೆ ತೀವ್ರವಾಗಿ ರೈತರು ಕಿಡಿಕಾರಿದರು.

ದೇಶದ ಪವಿತ್ರ ಸಂವಿಧಾನವನ್ನೇ ಪ್ರಜೆಗಳ ಅಗತ್ಯಕ್ಕೆ ತಕ್ಕಂತೆ ನೂರಕ್ಕೂ ಹೆಚ್ಚು ಬಾರಿ ತಿದ್ದುಪಡಿ ಮಾಡಿಕೊಂಡಿರುವಾಗ, ಅನ್ನದಾತರ ಬದುಕು ರಕ್ಷಿಸಲು ಈ IRC ನಿಯಮಗಳನ್ನು ಬದಲಾಯಿಸಲು ಏಕೆ ಸಾಧ್ಯವಿಲ್ಲ? ಎಂದು ಪತ್ರಕರ್ತರ ಮುಂದೆ ರೈತ ಮಹಿಳೆಯರು ಗರ್ಜಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ಅಸಮರ್ಪಕ ಹಾಗೂ ಹಾರಿಕೆ ಉತ್ತರವನ್ನು ತೀವ್ರವಾಗಿ ಖಂಡಿಸಿರುವ ಬಾಧಿತ ರೈತರು, ಬರುವ ಜೂನ್ 13 ರ ಶನಿವಾರ ಬೆಳಗ್ಗೆ 8:00 ಗಂಟೆಯಿಂದ ಎಕ್ಸ್‌ಪ್ರೆಸ್‌ ರಸ್ತೆಯ ಸುಂದರಪಾಳ್ಯ ಟೋಲ್ ಪ್ಲಾಜಾ ಬಳಿ ಸಂಪೂರ್ಣವಾಗಿ ರಸ್ತೆ ತಡೆದು (ರಸ್ತಾ ರೋಕೋ) ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ. ಈ ಜನಾಂದೋಲನದ ಕುರಿತು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಈಗಾಗಲೇ ಲಿಖಿತ ಮುನ್ಸೂಚನೆ ನೀಡಲಾಗಿದೆ.

ಕೃಷಿ ಭೂಮಿಗಳಿಗೆ ಸಂಪರ್ಕ ಕಲ್ಪಿಸುವ ಸೇವಾ ರಸ್ತೆಯನ್ನು (ಸರ್ವಿಸ್ ರೋಡ್) ತಕ್ಷಣವೇ ನಿರ್ಮಿಸಿಕೊಡಬೇಕು.
ಇಲ್ಲವೇ, ದಾರಿಯಿಲ್ಲದೆ ಮೂಲೆಗುಂಪಾಗಿರುವ ರೈತರ ನೂರಾರು ಎಕರೆ ಜಮೀನನ್ನು ಹೆದ್ದಾರಿ ಪ್ರಾಧಿಕಾರವೇ ಸಂಪೂರ್ಣವಾಗಿ ಖರೀದಿಸಬೇಕು. ಇದು ಇಡೀ ರೈತ ಸಮುದಾಯದ ಒಕ್ಕೊರಲ ಆಗ್ರಹವಾಗಿದೆ.

ಇದನ್ನು ಓದಿದ್ದೀರಾ..? ಕೋಲಾರ | ಯುವ ಕಾಂಗ್ರೆಸ್ ತಾಲೂಕು ಕಾರ್ಯಕಾರಣಿ ಸಭೆ

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೋಪೇನಹಳ್ಳಿ ಮುರಳಿ, ಶಂಕರಪ್ಪ, ಹಾಗೂ ವಿವಿಧ ಗ್ರಾಮಗಳ ರೈತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು .

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬಡವರ ಅನ್ನಕ್ಕೂ ಕನ್ನ! ಅಹಮದಾಬಾದ್‌ಗೆ ಅನ್ನಭಾಗ್ಯದ ಅಕ್ಕಿ ಸಾಗಾಟ; 34 ಟನ್ ಅಕ್ಕಿ ತುಂಬಿದ ಲಾರಿ ಜಪ್ತಿ

ಬಡವರು ಹಸಿವಿನಿಂದ ಬಳಲಬಾರದು, ಪ್ರತಿಯೊಂದು ಕುಟುಂಬಕ್ಕೂ ಆಹಾರ ಭದ್ರತೆ ದೊರೆಯಬೇಕು ಎಂಬ...

ಬಳ್ಳಾರಿ | ಆಂಧ್ರದ ಮಲ್ಲಯ್ಯನ ಜಾತ್ರೆಯಲ್ಲಿ ಬಡಿಗೆ ಕಾಳಗ: ಓರ್ವ ಸಾವು, 80 ಮಂದಿಗೆ ಗಾಯ

ಆಂಧ್ರದ ಆಲೂರು ಮಂಡಲದ ನೇರಣಿಕೆ ಗುಡ್ಡದ ಮಲ್ಲಯ್ಯನ ಜಾತ್ರೆಯಲ್ಲಿ ನಡೆಯುವ ಬಡಿಗೆ...

ಅಧಿಕಾರದ ಅಂಕಗಣಿತ vs ಸಂಘಟನೆಯ ರಸಾಯನ: ಪದವೀಧರರ ಮತ ಯಾರ ಕಡೆ?

ಆಗ್ನೇಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ನಾಳೆ (ಶುಕ್ರವಾರ) ನಡೆಯಲಿದೆ. ಆಡಳಿತಾರೂಢ...

ಮಂಡ್ಯ | ಟನ್ ಕಬ್ಬಿಗೆ ₹5,500 ಎಫ್‌ಆರ್‌ಪಿ ಘೋಷಿಸಲು ಆಗ್ರಹ

2025-26ನೇ ಸಾಲಿನ ಕಬ್ಬಿಗೆ ಟನ್‌ಗೆ ₹5,500ರ ನ್ಯಾಯಯುತ ಮತ್ತು ಲಾಭದಾಯಕ ಬೆಲೆ...