ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಸೇತುವೆ ನೀರಿನಲ್ಲಿ ಕೊಚ್ಚಿ ಹೋದ ರೈತ ಶವವಾಗಿ ಪತ್ತೆಯಾದ ಘಟನೆ ಹುನಗುಂದ ತಾಲ್ಲೂಕಿನ ಮೂಗನೂರಿನಲ್ಲಿ ನಡೆದಿದೆ.
ಮಲ್ಲಪ್ಪ ಶಿವಪ್ಪ ಬಸವನಳ (38) ಮೃತ ರೈತ. ಮೂಗನೂರು ಗ್ರಾಮದಿಂದ ಸ್ವಗ್ರಾಮಕ್ಕೆ ಅಂಬಲಿಕೊಪ್ಪಕ್ಕೆ ಬೈಕ್‌ನಲ್ಲಿ ತೆರೆಳುತ್ತಿದ್ದರು. ಸೇತುವೆ ದಾಟುವಾಗ ಬೈಕ್ ನೀರಿನಲ್ಲಿ ಸಿಲುಕಿಕೊಂಡು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಆರ್ಥಿಕ ಪ್ರಜ್ಞೆ ಬದುಕಿನ ಭದ್ರತೆಗೆ ದಾರಿ: ಬಿ.ವಿ. ಶ್ರೀನಿವಾಸ
ಬೈಕ್ ಸೇತುವೆ ಪಕ್ಕದಲ್ಲಿ ಪತ್ತೆಯಾದರೆ ಹಳ್ಳದ ಪಕ್ಕದ ಮುಳ್ಳು ಕಂಟಿಯಲ್ಲಿ ರೈತನ ಶವ ಪತ್ತೆಯಾಗಿದೆ. ಈ ಕುರಿತು ಅಮಿನ್‌ಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.