ಭಾರೀ ಮಳೆ: ಸೋಷಿಯಲ್‌ ಮೀಡಿಯಾದಲ್ಲಿ ತೇಲಿದ ಬೆಂಗಳೂರು

Date:

Advertisements

ಬೆಂಗಳೂರು ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದಲ್ಲದೆ, ತಗ್ಗು ಪ್ರದೇಶದ ಹಲವು ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ರಾಜಕಾಲುವೆಗಳು ತುಂಬಿದವು, ನೂರಾರು ವಾಹನಗಳು ಕೊಚ್ಚಿ ಹೋದ ಮತ್ತು ಮುಳುಗಡೆಯಾದ ವರದಿಗಳಾದವು. ದೈನಂದಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು ಅವಾಂತರಗಳು ಸೃಷ್ಟಿಯಾದವು. ನಗರದ ಬಹುತೇಕ ಕೆರೆಗಳು ತುಂಬಿದವು, ಸಾಧಾರಣ ದಿನಗಳಲ್ಲೇ ಅಸ್ತವ್ಯಸ್ತತೆಗೆ ಹೆಸರಾದ ಬೆಂಗಳೂರು ವಾಹನ ಸಂಚಾರ ಕುಸಿದೇ ಹೋಗಿತ್ತು. ಪರಿಹಾರ ತಂಡಗಳು ಹಲವೆಡೆಗಳಲ್ಲಿ ದೋಣಿಗಳನ್ನು ಬಳಸಿ ಸ್ಥಳೀಯ ನಿವಾಸಿಗಳಿಗೆ ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದವು.

ಒಂದೇ ಮಳೆಗೆ ಬೆಂಗಳೂರು ನಗರದ ಜನಜೀವನ ಅಸ್ತವ್ಯಸ್ತವಾದ ಕಾರಣ ಸಾಮಾಜಿಕ ಜಾಲತಾಣ ಬಳಕೆದಾರರು ಬೆಂಗಳೂರಿನ ಸ್ಥಿತಿಯನ್ನು ವಿವಿಧ ರೀತಿಯಲ್ಲಿ ಟ್ರೋಲ್‌ ಮಾಡಿದ್ದಾರೆ.

ʼಈಗ ಬೆಂಗಳೂರಿನಲ್ಲಿ — ಏರ್‌ಬಿಎನ್‌ಬಿ ಚಿಹ್ನೆಗಳಲ್ಲಿ:‌ ಭಾರತದ ವೆನಿಸ್‌ಗೆ ಸುಸ್ವಾಗತʼ ಎಂದು ಟ್ರೋಲ್‌ ಆಗಿದೆ.

Advertisements

ಉತ್ತರ ಇಟಲಿಯ ವೆನೆಟೊ ಪ್ರದೇಶದ ರಾಜಧಾನಿಯಾದ ವೆನಿಸ್, ಆಡ್ರಿಯಾಟಿಕ್ ಸಮುದ್ರದಲ್ಲಿನ ಒಂದು ಲಗೂನ್‌ನಲ್ಲಿರುವ 100 ಕ್ಕೂ ಹೆಚ್ಚು ಸಣ್ಣ ದ್ವೀಪಗಳಲ್ಲಿ ನಿರ್ಮಿಸಲ್ಪಟ್ಟಿದೆ. ಇದೀಗ ಬೆಂಗಳೂರು ಮಳೆ ನೀರಿನಿಂದ ತುಂಬಿದ ಕಾರಣ ನಗರವನ್ನು ವೆನಿಸ್‌ ಪಟ್ಟಣಕ್ಕೆ ಹೋಲಿಸಿ ಸಾಮಾಜಿಕ ಜಲಾತಾಣದಲ್ಲಿ ಟ್ರೋಲ್‌ ಮಾಡಿದ್ದಾರೆ.

ಒಂದು ಮಳೆ ಬಂದರೆ ಕೋರಮಂಗಲ ವೆನಿಸ್ ಆಗಿ ಬದಲಾಗುತ್ತದೆ.

“ಬೆಂಗಳೂರಿಗೆ ಸ್ವಾಗತ.
ಕ್ಲೌಡ್ ತಂತ್ರಜ್ಞಾನ ಎಲ್ಲಿ ಕೆಲಸ ಮಾಡುತ್ತದೆ, ಆದರೆ ಒಂದು ಮೋಡ ಸಿಡಿದರೆ ಇಡೀ ನಗರ ಬೆಳ್ಳಂದೂರು ಕೆರೆಯಂತಾಗುತ್ತದೆ. ಒಂದು ಮಳೆ ಬಂದರೆ ಕೋರಮಂಗಲ ವೆನಿಸ್ ಆಗಿ ಬದಲಾಗುತ್ತದೆ. ವೈಟ್‌ಫೀಲ್ಡ್ ನಿವಾಸಿಗಳು ಕೆಲಸಕ್ಕೆ ತೆರಳಲು ಈಜುವುದಕ್ಕೆ ಪ್ರಾರಂಭಿಸುತ್ತಾರೆ. ಆಟೋಗಳು ಕಾಗದದ ದೋಣಿಗಳಂತೆ ತೇಲಲು ಪ್ರಾರಂಭಿಸುತ್ತವೆ” ಎಂದು ಟ್ರೋಲ್‌ ಮಾಡಿದ್ದಾರೆ. ಇವರೂ ಕೂಡ ಬೆಂಗಳೂರು ನಗರವನ್ನು ವೆನಿಸ್‌ ಪಟ್ಟಣಕ್ಕೆ ಹೋಲಿಕೆ ಮಾಡಿದ್ದಾರೆ.

ಏನ್‌ ಗುರು ಮುಂಗಾರು ಹೊಸದಾ

ಮಳೆನೀರಿನ ಚರಂಡಿಗಳು ಮುಚ್ಚಿಹೋಗಿವೆ.
ಕೆರೆಗಳು ಬಡಾವಣೆಗಳಾಗಿ ಮಾರ್ಪಟ್ಟಿವೆ.
ರಸ್ತೆಗಳು ಮತ್ತೆ ಅಗೆಯುವ ಮೊದಲು 3 ದಿನಗಳು ಅಸ್ತಿತ್ವದಲ್ಲಿರುತ್ತವೆ.
ಸಂಚಾರ, ಪಾರ್ಕಿಂಗ್ ಸ್ಥಳ, ಪಾದಚಾರಿ ಮಾರ್ಗಗಳು ಅಸ್ತವ್ಯಸ್ತವಾಗುತ್ತವೆ. ಒಬ್ಬರ ಮೇಲೊಬ್ಬರು ಹೇಳಿಕೊಂಡು, ಅನಿರೀಕ್ಷಿತ ಮಳೆ ಎಂದು ದೂರುತ್ತಾರೆ. ಏನ್‌ ಗುರು ಮುಂಗಾರು ಹೊಸದಾ ನಿಮಗೆ, ಪ್ರತಿ ವರ್ಷ ಇರುತ್ತಲ್ಲವೇ ಎನ್ನುವ ಮೂಲಕ ಉಬರ್‌ ಹಡಗಿನ ಚಿತ್ರವನ್ನು ಪೋಸ್ಟ್‌ ಮಾಡುವ ಮೂಲಕ ಟ್ರೋಲ್‌ ಮಾಡಿದ್ದಾರೆ.

ವರುಣ ದೇವ please chill ಎನ್ನುವ ಮೂಲಕ ಬೆಂಗಳೂರು ನಗರದ ಏರಿಯಾಗಳನ್ನು ಅಣಕಿಸುವ ಮೂಲಕ ಟ್ರೋಲ್‌ ಮಾಡಿದ್ದಾರೆ.

ಉಬರ್ 2

ಈ ಪರಿಸ್ಥಿತಿಯನ್ನು ಲೇವಡಿ ಮಾಡುವ ರೀತಿಯಲ್ಲಿ, ಊಬರ್ ಕಂಪನಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ “ಟೈಟಾನಿಕ್ ಬೋಟ್” ಸೇವೆಯ ಫೋಟೋವನ್ನು ಹಂಚಿಕೊಂಡಿದೆ. ಈ ಪೋಸ್ಟ್‌ನಲ್ಲಿ, “ಒಂದು ನಿಮಿಷದಲ್ಲಿ ಟೈಟಾನಿಕ್ ಬೋಟ್ ಸೇವೆ ಲಭ್ಯವಿದೆ – ಕೇವಲ ₹149ಕ್ಕೆ!” ಎಂಬ ವ್ಯಂಗ್ಯಾತ್ಮಕ ಸಂದೇಶವಿದೆ. ಈ ಮೂಲಕ, ಉಬರ್ ಬೆಂಗಳೂರಿನ ರಸ್ತೆಗಳಲ್ಲಿನ ಜಲಾವೃತ ಸ್ಥಿತಿಯನ್ನು ಹಾಸ್ಯಾತ್ಮಕವಾಗಿ ಚಿತ್ರಿಸಿದೆ.

ಗ್ರೇಟರ್‌ ಬೆಂಗಳೂರು

ಅಲ್ಲದೆ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಸಂದೇಶ ಪ್ರಕಟಿಸಿರುವ ಜೆಡಿಎಸ್, “ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಬೆಂಗಳೂರಿನ ನಾಗರಿಕರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಬೆಂಗಳೂರಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜಲಾವೃತವಾಗಿದೆ. ಇದನ್ನು ಪ್ರಶ್ನೆ ಮಾಡಿದರೆ ಅವರು, ಮನೆ ಸರಿಯಾಗಿ ಕಟ್ಟಿಲ್ಲ ಎಂದು ಉಡಾಫೆ‌ ಮಾತು ಆಡುತ್ತಾರೆ. ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರಾಗಲು ನಾಲಾಯಕ್” ಎಂದು ಜೆಡಿಎಸ್ ಟೀಕಿಸಿದೆ.

ಪ್ರತಿ ಮಳೆಗಾಲದಂತೆ ಈ ಮಳೆಗಾಲದಲ್ಲೂ ಬಿಬಿಎಂಪಿಯ ಕಾರ್ಯ ಕ್ಷಮತೆಯಲ್ಲಿ ಸ್ವಲ್ಪವೂ ಸುಧಾರಣೆ ಕಂಡುಬಂದಿಲ್ಲ. ಸರ್ಕಾರಗಳು ಬದಲಾದರೂ ಮಳೆಗಾಲದಲ್ಲಿ ಬೆಂಗಳೂರಿಗರ ಪಡಿಪಾಟಲು ಬಗೆಹರಿದಿಲ್ಲ.

ಘಟನೆ ಹಿನ್ನೆಲೆ

ಬೆಂಗಳೂರಿನ ಕಾವೇರಿ ನಗರ, ಸಂಪಂಗಿ ರಾಮನಗರ, ಮೆಜೆಸ್ಟಿಕ್, ಶಾಂತಿನಗರ, ರಿಚಂಡ್ ಸರ್ಕಲ್, ಕಾರ್ಪೊರೇಷನ್‌ ವೃತ್ತ, ಜಯನಗರ, ಕೆ ಆರ್ ಮಾರ್ಕೆಟ್, ಚಾಮರಾಜಪೇಟೆ, ವಿಜಯನಗರ, ಚಂದ್ರಾಲೇಔಟ್ ರಾಜಾಜಿನಗರ, ಕಾಮಾಕ್ಷಿಪಾಳ್ಯ ಸುಂಕದಕಟ್ಟೆ, ನಾಗರಬಾವಿ, ಆರ್ ಆರ್ ನಗರ, ನಾಯಂಡಹಳ್ಳಿ, ಯಶವಂತಪುರ, ಪೀಣ್ಯ ಬಿಟಿಎಂ ಲೇಔಟ್, ಮೈಕೋ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರು ಹಾಗೂ ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿತ್ತು.

ಮಾರತ್ತಹಳ್ಳಿಯ ದೀಪ ನರ್ಸಿಂಗ್ ಹೋಮ್, ಚಿನ್ನಪ್ಪನಹಳ್ಳಿ 5ನೇ ಕ್ರಾಸ್, ಪಣತ್ತೂರ್ ರೈಲ್ವೆ ಕೆಳಸೇತುವೆ, ಗ್ರೀನ್ ಹುಡ್, ಇಬ್ಬಲೂರು ಜಂಕ್ಷನ್, ಬಾಲಾಜಿ ಲೇಔಟ್-ಕೊತ್ತನೂರು, ಎ ನಾರಾಯಣಪುರದ ಕೃಷ್ಣ ನಗರ, ಸುನೀಲ್ ಲೇಔಟ್, ಹರಳೂರು, ಬಿಎಸ್‌ಪಿ ಲೇಔಟ್‌ನ ಕಸವನಹಳ್ಳಿ ಕಡೆಗಳಲ್ಲಿ ರಸ್ತೆಗಳ ಮಲೆ ನೀರು ತುಂಬಿದ್ದು, ಮನೆಗಳಿಗೂ ನೀರು ನುಗ್ಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯಲ್ಲಿ ಟ್ರೋಲ್‌ ಆಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X