ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಮುಂಗಾರು ಹಂಗಾಮಿನ ಬೆಳೆಗಳು ಹಾನಿ ಸಂಭವಿಸಿದ್ದು, ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ತಾಲೂಕು ಯುವಕ್ರಾಂತಿ ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಭಾಲ್ಕಿ ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಾಲೂಕು ಯುವಕ್ರಾಂತಿ ಸಂಘಟನೆಯ ಅಧ್ಯಕ್ಷ ಸಂಗಮೇಶ ಭೂರೆ ನೇತೃತ್ವದಲ್ಲಿ ಗುರುವಾರ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ʼಎರಡು ವಾರದ ಹಿಂದೆ ನಿರಂತರವಾಗಿ ಸುರಿದ ಮಳೆಗೆ ಉದ್ದು, ಹೆಸರು, ತೊಗರಿ ಸೇರಿದಂತೆ ವಿವಿಧ ಬೆಳೆಗಳು ಹಾನಿಗೀಡಾಗಿವೆ.
ಇದರಿಂದ ಸಾಲಸೋಲ ಮಾಡಿ ಬಿತ್ತನೆ ಮಾಡಿದ ರೈತರು ಆತಂಕದಲ್ಲಿದ್ದಾರೆ. ಕೂಡಲೇ ಸಮರ್ಪಕವಾಗಿ ಬೆಳೆಹಾನಿ ಸಮೀಕ್ಷೆ
ಕೈಗೊಂಡು ರೈತರ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಕೊಡಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಎಚ್‌ಡಿಕೆ -ಯಡಿಯೂರಪ್ಪ ಜಂಟಿ ಹಗರಣ | ಕುಮಾರಸ್ವಾಮಿ ರಾಜೀನಾಮೆಗೆ ಸಚಿವರ ಒತ್ತಾಯ
ಈ ಸಂದರ್ಭದಲ್ಲಿ ಪ್ರಮುಖರಾದ ಜೈರಾಜ ಕೊಳ್ಳಾ, ಕೆ.ಡಿ ಗಣೇಶ, ಸಂಗಮೇಶ ಗುಮ್ಮೆ, ಸಂತೋಷ ಬಿಜಿ ಪಾಟೀಲ್, ಸಂಜೀವ ನಾವದಗಿ, ಚಂದು ಸಂಪಂಗೆ, ದಯಾನಂದ ಸಜ್ಜನಶೆಟ್ಟಿ, ಭದ್ರೇಶ ಸ್ವಾಮಿ, ಆದಿಲ ಸಯ್ಯದ್, ಸುರೇಶ ಕಳಸದಾಳ, ಮಹಾದೇವ ಸೂರ್ಯವಂಶಿ, ಸಂತೋಷ ನಾಟೇಕರ, ಗೋರಖ ಶ್ರೀಮಾಳೆ, ಸೇರಿದಂತೆ ಹಲವರು ಇದ್ದರು.