ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮದ ಜರವತ್ತು ಸೇತುವೆ ಬಳಿ ಸುಮಾರು 40 ರಿಂದ 45 ವರ್ಷ ವಯಸ್ಸಿನ ಪುರುಷನ ಸಂಪೂರ್ಣ ಕೊಳೆತುಹೊದ ಸ್ಥಿತಿಯಲ್ಲಿ ಮೃತದೇಹ ಸಿಕ್ಕ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಹರೀಶ ಎಂಬುವವರು ಕಾಣೆಯಾದ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈ ಬಗ್ಗೆ ಕಾಣೆಯಾದ ಹರೀಶ ರವರನ್ನು ಹುಡುಕಾಡುತ್ತಿರುವಾಗ ಮುದ್ರಾಡಿ ಗ್ರಾಮದ ಜರವತ್ತು ಸೇತುವೆ ಬಳಿ ಮೃತದೇಹ ಇರುವುದಾಗಿ ತಿಳಿದು ಬಂದಿದೆ, ಮೃತದೇಹವು ಹರೀಶ ರವರದ್ದು ಅಲ್ಲದೇ ಬೇರೆ ಯಾರೋ ಅಪರಿಚಿತರ ಮೃತದೇಹವಾಗಿದ್ದು ಮೃತರು ಆತ್ಮಹತ್ಯೆ ಮಾಡಿಕೊಂಡು ಅಥವಾ ಇನ್ನಾವೂದೋ ಕಾರಣದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ನಂ-07/2025 ಕಲಂ-194 ಬಿಎನ್‌ಎಸ್ಎಸ್ ರಂತೆ ಪ್ರಕರಣ ದಾಖಲಾಗಿ ತನಿಖೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯ ವಾರಿಸುದಾರರು ಪತ್ತೆಯಾದಲ್ಲಿ, ಮಾಹಿತಿಯನ್ನು ಪಿಎಸ್‌ಐ ಹೆಬ್ರಿ ಪೊಲೀಸ್ ಠಾಣಾ ಅಥವಾ ಸಿಪಿಐ ಕಾರ್ಕಳ ವೃತ್ತ ಇವರಿಗೆ ಮಾಹಿತಿ ನೀಡುವರೇ ವಿನಂತಿಸಿಕೊಳ್ಳಲಾಗಿದೆ, ಹೆಬ್ರಿ ಪೊಲೀಸ್ ಠಾಣಾ ದೂರವಾಣಿ ನಂಬ್ರ 082543 -25116, ಪಿಎಸ್‌ಐ ಹೆಬ್ರಿ ಪೊಲೀಸ್ ಠಾಣಾ ನಂಬ್ರ: 9480805463 ಗೆ ಮಾಹಿತಿ ನೀಡಬಹುದಾಗಿದೆ.
