ಹೆಜ್ಜೇನು ದಾಳಿಗೆ ರೈತರೊಬ್ಬರು ಮೃತಪಟ್ಟಿರುವ ಘಟನೆ ಹುಲಸೂರ ತಾಲ್ಲೂಕಿನ ಗಡಿ ಗೌಡಗಾಂವ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗಡಿಗೌಡಗಾಂವ್ ಗ್ರಾಮದ ಯುವರಾಜ ಬಿರಾದರ್ (42) ಮೃತ ರೈತ. ಯುವರಾಜ್ ತಮ್ಮ ಜಮೀನಿಗೆ ನುಗ್ಗಿದ ಮಂಗಗಳು ಓಡಿಸಲು ಹೋದ ವೇಳೆ ಮಾವಿನ ಮರದಲ್ಲಿದ್ದ ಹೆಜ್ಜೇನು ಕಂಡು ಅದನ್ನು ಓಡಿಸಲು ಮರದ ಕೆಳಗೆ ಬೆಂಕಿ ಹಾಕಿದ್ದರು. ಬಳಿಕ ಮಂಗಗಳು ಓಡಿಸಲು ಮರ ಹತ್ತಿದ್ದರು. ಈ ವೇಳೆ ಹೆಜ್ಜೇನು ನೋಣಗಳು ಏಕಾಏಕಿ ದಾಳಿ ನಡೆಸಿದಾಗ ತಪ್ಪಿಸಿಕೊಳ್ಳಲು ಹೋಗಿ ಮರದ ಕೆಳಗಿದ್ದ ಬೆಂಕಿಯಲ್ಲಿ ಬಿದ್ದು ಗಾಯಗೊಂಡಿದ್ದರು.
ಕೂಡಲೇ ಅವರನ್ನು ಕೂಡಲೇ ಬಸವಕಲ್ಯಾಣ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಹುಲಸೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.