ನಮ್ಮ ರಾಜ್ಯದವರನ್ನು ಬಿಟ್ಟು ಪಕ್ಕದ ಕೇರಳ ರಾಜ್ಯದವರಿಗೆ ಸಿಎಂ ಸಿದ್ದರಾಮಯ್ಯ ಸಹಾಯ ಮಾಡುತ್ತಿರುವುದು ರಾಜಕೀಯ ಗುಲಾಮಗಿರಿ ಸಂಕೇತ ಎಂದು ಚಿಕ್ಕಮಗಳೂರು ಮಾಜಿ ಶಾಸಕ ಸಿ ಟಿ ರವಿ ಟೀಕಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಕರ್ನಾಟಕ ಸರ್ಕಾರದಿಂದ 100 ಮನೆಗಳನ್ನು ಕಟ್ಟಲು ಜಾಗ ಗುರುತಿಸುವಂತೆ ಕೇರಳ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ರಾಜ್ಯದ ರೈತರಿಗೆ ಪರಿಹಾರ ನೀಡಿಲ್ಲ, ಇಲ್ಲಿನ ಸಂತ್ರಸ್ತರು ಬೀದಿಯಲ್ಲಿದ್ದಾರೆ. ಹೀಗಿರುವಾಗ ನಮ್ಮವರನ್ನು ಬಿಟ್ಟು ನೆರೆಯ ರಾಜ್ಯಕ್ಕೆ ಸಹಕಾರ ಕೊಡುತ್ತಿರುವುದು ರಾಜಕೀಯ ಗುಲಾಮಗಿರಿಯ ಸಂಕೇತ ಎಂದು ವಿರೋಧ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು | ಕಾಣೆಯಾಗಿದ್ದ ಇಬ್ಬರು ಮಕ್ಕಳು; ರಿಂಗ್ ಬಾವಿಯಲ್ಲಿ ಶವವಾಗಿ ಪತ್ತೆ
ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಕೇವಲ ಒಂದು ಕ್ಷೇತ್ರಕ್ಕೇ ಸಹಾಯ ಮಾಡೋದು, ರಾಜ್ಯದ ತೆರಿಗೆ ಹಣವನ್ನು ವಿನಿಯೋಗಿಸುವುದು ರಾಜಕೀಯ ಗುಲಾಮಗಿರಿಯ ಪ್ರತೀಕ. ರಾಜ್ಯದ ಜನರ ಸಂಕಷ್ಟವನ್ನ ಕಡೆಗಣಿಸಿ ಖರ್ಚು ಮಾಡೋದು ಸೂಕ್ತವಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದು ಗುಡುಗಿದರು.
