ಚಾಮರಾಜ ನಗರ ಜಿಲ್ಲೆ ಹನೂರು ತಾಲೂಕು ಕರ್ನಾಟಕ ತಮಿಳುನಾಡು ಗಡಿ ಭಾಗವಾದ ಮಾರಿಕೊಟ್ಟೈ ತೆಪ್ಪಗಾರರು ತಮಿಳುನಾಡು ಗಡಿ ಪೊಲೀಸರಿಂದ ಕಿರುಕುಳ, ದೌರ್ಜನ್ಯ,ಅವಾಚ್ಯ ನಿಂದನೆಗೆ ಬೇಸತ್ತು ಸೋಮವಾರದಿಂದ ಹೊಗೇನಕಲ್ ಫಾಲ್ಸ್ ತೆರಳುವ ತೆಪ್ಪ ಸಂಚಾರ ಸ್ಥಗಿತಗೊಳಿಸಿದ್ದರು.
ಇದರಿಂದಾಗಿ ಹೊಗೇನಕಲ್ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ತೊಂದರೆ ಆಗುತ್ತಿರುವುದನ್ನು ಮನಗಂಡ ಎರಡು ರಾಜ್ಯಗಳ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಸಮಸ್ಯೆ ಆಲಿಸಿದರು.
ತಮಿಳುನಾಡು ಪೆರುಣಾಗಂ ಪೊಲೀಸ್ ಠಾಣೆ ಡಿವೈಎಸ್ಪಿ ರಾಜಸುಂದರಂ,ಇನ್ಸ್ಪೆಕ್ಟರ್ ಮುರುಳಿ, ಗೋಪಿನಾಥಮ್ ಅರಣ್ಯ ವಲಯ ಡಿಆರ್‌ಫ್ಓ ದಿನೇಶ್, ಉಪ ಠಾಣಾಧಿಕಾರಿ ಮಹೇಶ್ ಹಾಗೂ ಸಿಬ್ಬಂದಿಗಳು ತೆಪ್ಪಗಾರರ ಜೊತೆ ಮಾತುಕತೆ ನಡೆಸಿದರು.

ನದಿಯಲ್ಲಿ ಒಂದು ಕರ್ನಾಟಕದ ಕಡೆಯಿಂದ ತಮಿಳುನಾಡು ಗಡಿ ಕಡೆಗೆ ಕರೆದುಕೊಂಡು ಹೋಗಲು, ಪ್ರವಾಸಿಗರನ್ನು ಮತ್ತೆ ಕರೆತರಲು ಯಾವುದೇ ಅಡ್ಡಿ ಇಲ್ಲ. ಆಯಕಟ್ಟಿನ ಪ್ರದೇಶವಾಗಿದ್ದು, ಇಲ್ಲಿ ಈಜುವುದು, ಸೆಲ್ಫಿ ಇದ್ಯಾವುದಕ್ಕೂ ಆಸ್ಪದ ಇಲ್ಲ. ಪ್ರವಾಸಿಗರ ಕ್ಷೇಮ ಮುಖ್ಯವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದ ಹಾಗೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ವಕ್ಫ್ ಆಸ್ತಿ ವಿವಾದ | ಫಲಿಸಿತು ಬಿಜೆಪಿ (ಕು)ತಂತ್ರ; ಕಡಕೋಳದಲ್ಲಿ ಭುಗಿಲೆದ್ದ ಕೋಮು ಗಲಭೆ
ಇದರಿಂದ ಸಮಾಧಾನಗೊಂಡ ತೆಪ್ಪಗಾರರು ಹೊಗೇನಕಲ್ ಫಾಲ್ಸ್ ವೀಕ್ಷಣೆಗೆ ಸಂಚಾರ ಆರಂಭ ಮಾಡಿದ್ದಾರೆ. ಮೂಲಕ ಜಂಟಿ ಪೊಲೀಸ್ ಸಭೆ ಯಶಸ್ವಿಯಾಗಿದೆ.
