ಬಾಗೇಪಲ್ಲಿ | ದಲಿತರ ಅಭಿವೃದ್ದಿಗಾಗಿ ಶ್ರಮಿಸಿದ ಧೀಮಂತ ಹೊಸಹುಡ್ಯ ಗೋಪಿ ; ಬಿ.ವೆಂಕಟರಮಣಪ್ಪ

Date:

Advertisements

ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ನಿರಂತರವಾಗಿ ದಲಿತರ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ದಿ.ಹೊಸಹುಡ್ಯ ಗೋಪಿಯವರು ಎಂದು ದಸಂಸ ಹಿರಿಯ ಮುಖಂಡ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ಬಿ.ವೆಂಕಟರಮಣ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಖಾಸಗಿ ಮಂಟಪದಲ್ಲಿ ಶುಕ್ರವಾರ ದಸಂಸ ವತಿಯಿಂದ ಆಯೋಜಿಸಿದ್ದ ದಿ.ಹೊಸಹುಡ್ಯ ಗೋಪಿಯವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗೋಪಿಯವರು ತಮ್ಮ ಜೀವನ ಪೂರ್ತಿ ದಲಿತ ಸಮುದಾಯಗಳ ಜನತೆಗೆ ನ್ಯಾಯ ಒದಗಿಸಲು ತುಡಿತವನ್ನು ಹೊಂದಿದ್ದರು. ದಲಿತರಿಗೆ ಭೂಮಿ, ನಿವೇಶನಗಳನ್ನು ಒದಗಿಸಲು ಸರಕಾರಗಳ ವಿರುದ್ಧ ರಾಜಿರಹಿತ ಹೋರಾಟಗಳನ್ನು ನಡೆಸುವಲ್ಲಿ ಮುಂದಿದ್ದರು. ಇಂತಹ ಧೀಮಂತ ನಾಯಕ ಸೆ.25 ರಂದು ನಮ್ಮೆಲ್ಲರನ್ನು ಅಗಲಿದರು. ಅಂತಹ ಪ್ರಾಮಾಣಿಕ ನಾಯಕನ ಆದರ್ಶಗಳನ್ನು ಯುವ ಪೀಳಿಗೆ ಪಾಲಿಸಬೇಕು. ಎಷ್ಟೇ ಆಸೆ, ಆಮೀಷಗಳನ್ನು ಒಡ್ಡಿದರೂ ಗೋಪಿಯ ರೀತಿ ತಿರಸ್ಕರಿಸಿ, ಧ್ವನಿ ಇಲ್ಲದವರ ಏಳಿಗೆಗೆ ನಾವೆಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.

Advertisements

ಸಂಘಟನೆಗೆ ಸಮರ್ಪಣಾ ಭಾವ ಮುಖ್ಯ :

ದಸಂಸ ಜಿಲ್ಲಾ ಸಂಚಾಲಕ ಕೆ‌.ಸಿ ರಾಜೀಕಾಂತ್ ಮಾತನಾಡಿ, ಗೋಪಿಯವರು ಯಾವುದೇ ಸಂದರ್ಭದಲ್ಲಾಗಲಿ, ರಾಜ್ಯ ಅಥವಾ ನೆರೆಯ ಆಂಧ್ರಪ್ರದೇಶದಲ್ಲಾಗಲಿ ಸಂಘಟನೆಯ ವಿಚಾರದಲ್ಲಿ ಹಾಗೂ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದರಲ್ಲಿ ಸದಾ ಸಿದ್ದರಿರುತ್ತಿದ್ದರು. ಹಾಗಾಗಿ ಸಂಘಟನೆಗೆ ಸಮರ್ಪಣಾ ಮನೋಭಾವ ಮತ್ತು ಸಂಘರ್ಷ ಅತಿ ಮುಖ್ಯವಾಗಿರುತ್ತದೆ. ಅವೆಲ್ಲವನ್ನು ಗೋಪಿ ಹೊಂದಿದ್ದರು. ತಾಲೂಕಿನ ಕಾನಗಮಾಕಲಪಲ್ಲಿ, ಮಿಟ್ಟೇಮರಿ, ಗೌನಿಪಲ್ಲಿ ಮತ್ತಿತರ ಪ್ರದೇಶಗಳಲ್ಲಿ ನಿವೇಶನ, ವಸತಿ ರಹಿತರಿಗಾಗಿ ಹೋರಾಟಗಳನ್ನು ನಡೆಸಿ, ನ್ಯಾಯ ಒದಗಿಸಿದವರಲ್ಲಿ ಗೋಪಿಯೂ ಒಬ್ಬರಾಗಿದ್ದರು. ಅಂತಹ ನಾಯಕ ನಮ್ಮಿಂದ ದೂರವಾಗಿರುವುದು ನೋವಿನ ವಿಚಾರ ಎಂದರು.

ಈ ಸಭೆಯಲ್ಲಿ ಗಾಯಕ ಗೋಪಿನಾಥ್ ಹಾಗೂ ತಂಡದ ಕಲಾವಿದರಿಂದ ಗೋಪಿಯವರ ಆತ್ಮಕ್ಕೆ ಶಾಂತಿ ಕೋರಿ ಹಲವಾರು ಗೀತೆಗಳನ್ನು ಹಾಡಿ ನುಡಿ ನಮನ ಸಲ್ಲಿಸಿದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಒಳಮೀಸಲಾತಿಗೆ ಆಗ್ರಹಿಸಿ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ

ಇದೇ ವೇಳೆ ದಸಂಸ ಮುಖಂಡರಾದ ಸಿ.ಜಿ ಗಂಗಪ್ಪ, ಬಿ.ವಿ ಆನಂದ್, ಎನ್ ಎ ವೆಂಕಟೇಶ್, ಕಡ್ಡೀಲು ವೆಂಕಟರಮಣ, ವಿ.ಗಂಗಪ್ಪ, ನರಸಿಂಹಮೂರ್ತಿ, ರಂಗಪ್ಪ, ಪರಮೇಶ್, ರವಣ, ಚಲಪತಿ, ನರಸಿಂಹಪ್ಪ ಮತ್ತಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X