ತೀರ್ಥಹಳ್ಳಿ ಹೆದ್ದಾರಿಯಲ್ಲಿ ಸಂಭವಿಸಿದ ಬಸ್ ಅಪಘಾತದ ಘಟನೆ ಬೆನ್ನಲ್ಲೆ ಮತ್ತೊಂದು ಖಾಸಗಿ ಬಸ್ ಅಪಘಾತವಾಗಿದೆ. ಈ ಘಟನೆ ಹೊಸನಗರ ತಾಲ್ಲೂಕಿನಲ್ಲಿ ಸಂಭವಿಸಿದೆ.
ಹೊಸನಗರ ತಾಲ್ಲೂಕಿನ ನಿಟ್ಟೂರು-ನಾಗೋಡಿ ಮಾರ್ಗದಲ್ಲಿ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಖಾಸಗಿ ಬಸ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿರುವ ಘಟನೆ ಇಲ್ಲಿನ ಶಾಲೆಯೊಂದರ ಬಳಿ ನಡೆದಿದೆ. ಸಾಗರದಿಂದ ಕುಂದಾಪುರದ ಕಡೆಗೆ ಹೊರಟಿದ್ದ ಬಸ್ ಮತ್ತು ನಿಟ್ಟೂರಿನ ಕಡೆಗೆ ಬರುತ್ತಿದ್ದ ರಸ್ತೆ ರೋಲರ್ ತುಂಬಿದ ಟಿಪ್ಪರ್ ಮಧ್ಯೆ ಈ ಅಪಘಾತ ಸಂಭವಿಸಿದೆ.
ಬಸ್ಸಿನಲ್ಲಿದ್ದ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ. ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.