ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ವರುಣನ ಆರ್ಭಟ ಜೋರಾಗೇ ಇದೆ. ಸುಮಾರು ಅರ್ಧ ತಾಸು ಗಾಳಿ ಸಹಿತ ನಿರಂತರವಾಗಿ ಸುರಿದ ಮಳೆ ಮರಗಳು ಧರೆಗುರುಳಿವೆ. ಹೊಸನಗರ ಪಟ್ಟಣದ ಕಟ್ಟಡಗಳ ಮೇಲೆ ಮರಗಳು ಉರುಳಿ ಬಿದ್ದ ದೃಶ್ಯಗಳು ಲಭ್ಯವಾಗಿದೆ.
ಹೊಸನಗರ ಪಟ್ಟಣದ ಸರ್ಕಾರಿ ಕಾಲೇಜು, ಅಂಚೆ ಇಲಾಖೆ ಕಟ್ಟಡದ ಮೇಲೆ ಮರ ಬಿದ್ದಿದೆ. ಪಟ್ಟಣ ಮಧ್ಯಭಾಗದ ನೆಹರು ಮೈದಾನದ ಬಳಿಯಿದ್ದ ಮರವೊಂದು ಕಟ್ಟಡದ ಮೇಲೆ ಉರುಳಿ ಬಿದ್ದಿದೆ. ಮರ ಉರುಳಿ ಬಿದ್ದ ಕಾರಣ ಆ ಭಾಗದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ವರುಣನ ಆಗಮನದಿಂದ ಬೇಸಿಗೆಯ ಬೇಗೆಗೆ ತಂಪೆರೆದಂತಾಗಿದೆಯಾದರೂ ಅಲ್ಲಲ್ಲಿ ಜನ ಜೀವನ ಕೊಂಚ ಅಸ್ತವ್ಯಸ್ತವಾಗಿದೆ.
ಇದನ್ನೂ ಓದಿ: ಹೊಸನಗರ | ಮದ್ಯದ ಅಂಗಡಿ ತೆರವಿಗೆ ಮಹಿಳೆಯರ ಆಗ್ರಹ