ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ಕೊಲೆಯನ್ನು ಯಾವ ಸಭ್ಯ ಸಮಾಜವೂ ಇಂತಹ ಕೃತ್ಯ ಸಹಿಸಲು ಸಾಧ್ಯವಿಲ್ಲ ಎಂದು ಬೀದರ್ ಜಿಲ್ಲಾ ಸದ್ಭಾವನಾ ಮುಂಚ್ ತೀವ್ರವಾಗಿ ಖಂಡಿಸಿದೆ.
ಬೀದರ್ ಜಿಲ್ಲಾ ಸದ್ಭಾವನಾ ಮುಂಚ್ ಸಂಚಾಲಕರಾದ ಗುರುನಾಥ್ ಗಡ್ಡೆಯವರ ಅಧ್ಯಕ್ಷತೆಯಲ್ಲಿ ಬುಧವಾರ ನಗರದಲ್ಲಿ ನಡೆದ ಸರ್ವ ಸದಸ್ಯರ ಸಭೆ ನಡೆಯಿತು.
“ಇಂತಹ ಸಮಾಜಘಾತುಕ ಕೃತ್ಯಗಳಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ನೇಹಾ ಕೊಲೆ ಪ್ರಕರಣದ ವೇಳೆ ಕೆಲವು ಶಕ್ತಿಗಳು ಅಪರಾಧವನ್ನು ಧರ್ಮ ಹಾಗೂ ಸಮುದಾಯಕ್ಕೆ ಹೋಲಿಸಿ ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಹೀನ ಕೃತ್ಯದಲ್ಲಿ ತೊಡಗಿರುವುದು ಆತಂಕದ ವಿಷಯ” ಎಂದು ಕಳವಳ ವ್ಯಕ್ತಪಡಿಸಿದರು
ದೈವ ಭಯದ ಕೊರತೆ, ಮರಣ ನಂತರ ಜೀವನದ ಭಯ ಇಲ್ಲದಿರುವುದು ಅಪರಾಧ ಹೆಚ್ಚುತ್ತಿರುವುದಕ್ಕೆ ಕಾರಣವಾಗಿದೆ. ಎಲ್ಲರನ್ನೂ ಒಗ್ಗೂಡಿಸಿ ಸಮಾಜದಲ್ಲಿ ಸದ್ಭಾವನೆ, ಕೋಮು ಸೌಹಾರ್ದತೆಗೆ ಶ್ರಮಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಮೋದಿಯವರ ಸಬ್ ಕಾ ಸಾಥ್ – ಸಬ್ ಕಾ ವಿಕಾಸ್ ಎನ್ನುವ ಘೋಷಣೆಯೇ ಬೋಗಸ್ : ಸಿಎಂ ಸಿದ್ದರಾಮಯ್ಯ
ಸಭೆಯಲ್ಲಿ ಪ್ರಮುಖರಾದ ಅಬ್ದುಲ್ ಖದೀರ್, ಮುಹಮ್ಮದ್ ನಿಜಾಮುದ್ದಿನ, ಓಂಪ್ರಕಾಶ್ ರೊಟ್ಟೆ, ರಫೀಕ್ ಅಹ್ಮದ್, ಮುಹಮ್ಮದ್ ಮುಜಾಜ್, ಬಾಬುರಾವ್ ಹೊನ್ನಾ, ಮುಹಮ್ಮದ್ ಮುಜ್ತಬಾ, ಸಂತೋಷ್ ಜೋಳದಾಬಕೆ, ಸೈಯದ್ ಇಬ್ರಾಹಿಂ, ಮುಹಮ್ಮದ್ ಏಹತೆಶಾಂ ಸೈಯ್ಯದಾ ಉಮ್ಮೆ ಹಬೀಬಾ, ತೌಹೀದ್ ಶಿಂಧೆ , ಹರಮೈನ್ ಷರೀಫ್ ಹಾಜರಿದ್ದರು.