ಸಾಮಾನ್ಯವಾಗಿ ವಿಧಾನಸಭೆ ಕಲಾಪದಲ್ಲಿ ಮಾರ್ಷಲ್‌ಗಳು ಕಾರ್ಯನಿರ್ವಹಿಸುತ್ತಾರೆ. ಆ ಮಾದರಿಯಲ್ಲಿ ಇದೀಗ ಪ್ರಥಮ ಪ್ರಯೋಗವಾಗಿ ರಾಜ್ಯದ 2ನೇ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಖ್ಯಾತಿಗೆ ಪಾತ್ರವಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
8 ಮಹಿಳೆಯರು ಹಾಗೂ 10 ಪುರುಷ ಸೇರಿ ಒಟ್ಟು 18 ಮಾರ್ಷಲ್‌ಗಳನ್ನು ಪಾಲಿಕೆ ಕಲಾಪ ನಿರ್ವಹಣೆಗೆ ನೇಮಿಸಲಾಗಿದ್ದು, ಸುಗಮ ಕಲಾಪ ನಡೆಸಲು ಮಾರ್ಷಲ್‌ಗಳ ಅಗತ್ಯವಾಗಿದೆ. ಪಾಲಿಕೆ ಸದಸ್ಯರಿಗೆ ಕಲಾಪದ ವೇಳೆ ಅಗತ್ಯ ದಾಖಲೆಗಳನ್ನು ಪೂರೈಸುವುದು, ಗಲಾಟೆಗಳು ಸಂಭವಿಸಿದಾಗ ನಿಯಂತ್ರಿಸುವುದು, ಗಲಾಟೆ ಮಾಡುವ ಸದಸ್ಯರನ್ನು ಹೊರಗೆ ಹಾಕುವುದು ಸೇರಿದಂತೆ ಮೇಯರ್ ಮತ್ತು ಉಪ ಮೇಯರ್ ನೀಡುವ ಆದೇಶಗಳನ್ನು ಪಾಲನೆ ಮಾಡುವ ಕಾರ್ಯದಲ್ಲಿರುತ್ತಾರೆ.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಮೈಸೂರ ದಸರಾ ಕ್ರೀಡಾಕೂಟ; ಜಿಲ್ಲೆಗೆ 111 ಪದಕಗಳು; ವಿಜೇತರಿಗೆ ಅಭಿನಂದನೆ
ಪಾಲಿಕೆ ಅಧಿಕಾರಿ ಶಂಕರಾನಂದ ಬನಶಂಕರಿ ಸೇರಿದಂತೆ ಹಿರಿಯ ಅಧಿಕಾರಿಗಳು ಮಾರ್ಷಲ್‌ಗಳಿಗೆ ವಿಶೇಷ ತರಬೇತಿ ನೀಡಿ ಸಜ್ಜುಗೊಳಿಸಿದ್ದಾರೆ ಎನ್ನಲಾಗಿದ್ದು, ಸಾಮಾನ್ಯ ಸಭೆಯು ಕಾರ್ಯ ಕಲಾಪಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಅನುಕೂಲವಾಗುವ ನಿಟ್ಟಿನಲ್ಲಿ ಮಾರ್ಷಲ್ ನೇಮಕ ಮಾಡಲಾಗಿದೆ. ಒತ್ತುವರಿ, ರಸ್ತೆ ತೆರವು ಸೇರಿದಂತೆ ಹಲವು ಕಾರ್ಯಕ್ಕೆ ಮಾರ್ಷಲ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಪಾಲಿಕೆಯ ಇತರ ಕೆಲಸ ಕಾರ್ಯಗಳಿಗೂ ಬಳಕೆ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ತಿಳಿಸಿದ್ದಾರೆ.