ಅ. 2ರಂದು ಮಹಾತ್ಮ ಗಾಂಧೀಜಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಇನ್‌ಸ್ಟಗ್ರಾಂನಲ್ಲಿ ವಿಡಿಯೋ ಹಂಚಿಕೊಂಡ ಹಳೇಹುಬ್ಬಳ್ಳಿಯ ಆಯೋಧ್ಯ ನಗರ ನಿವಾಸಿ ಸಂದೇಶ ಹುಟುಗಿ ಎಂಬುವನನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಅವಹೇಳನಕಾರಿ ವಿಡಿಯೋದ ಲಿಂಕ್: https://www.instagram.com/reel/DPTAG5elbE3/?igsh=MWEwdnIzZTdrODds
ಈ ಸುದ್ಧಿ ಓದಿದ್ದೀರಾ? ಧಾರವಾಡ | ಆರೋಗ್ಯವೇ ಅಮೂಲ್ಯ ರತ್ನ; ಸ್ವಚ್ಛತೆಯೇ ಅದರ ಕವಚ: ಡಾ.ಜಮೀರಾ.
ಅವಹೇಳನಕಾರಿ ವಿಡಿಯೋ ಹಂಚಿಕೊಂಡ ಸಂದೇಶ ತನ್ನ ವಿಡಿಯೋದಲ್ಲಿ ಗಾಂ* ಗಾಂಧಿಯ ಪೊಟೋವನ್ನು ತೆಗೆದು ಬಿಸಾಕಿ, ಅವನನ್ನು ಏಕೆ ಪೂಜಿಸುತ್ತೀರಿ? ಎಂದು ಏಕವಚನದಲ್ಲಿ ಮತ್ತು ಅಹಿಂಸೆಯನ್ನು ಹೇಳಿದವನನ್ನು ಪೂಜಿಸಿದವರೂ ಗಾಂ* ಎಂದು ಹೇಳಿದ್ದಾರೆ. ಅದರ ಬದಲು ಆತನನ್ನು ಕೊಂದ ನಾಥೂರಾಮ್ ಘೋಡ್ಸೆ ಎಂಬ ದೇಶಭಕ್ತರನ್ನು ಪೂಜಿಸಿರಿ ಎಂದು ಆಕ್ರೋಶಭರಿತವಾಗಿ ಮಾತನಾಡಿದ್ದಾರೆ. ಮೇಲಾಗಿ ಪೋಸ್ಟ್ ಮಾಡಿದ ವಿಡಿಯೋದ ತಲೆಬರಹದಲ್ಲಿ ಹ್ಯಾಪಿ ಗಾಂ* ಜಯಂತಿ ಎಂದು ಹೇಳಿದ್ದಾರೆ.