ಹುಬ್ಬಳ್ಳಿ | ಕಾವ್ಯಾತ್ಮ ಉಳ್ಳವರಿಂದ ಮಾತ್ರ ಕಾವ್ಯ ರಚನೆ ಸಾಧ್ಯ: ಶಾಮಸುಂದರ ಬಿದರಕುಂದಿ

Date:

ಕಾವ್ಯ ಕವಿಯ ಕಾವ್ಯಾತ್ಮದ ಉಗಮವಾಗಿದ್ದು, ಕಾವ್ಯಾತ್ಮ ಉಳ್ಳವರಿಂದ ಮಾತ್ರ ಕಾವ್ಯ ರಚನೆ ಸಾಧ್ಯ ಎಂದು ಹಿರಿಯ ಸಾಹಿತಿ ಶಾಮಸುಂದರ ಬಿದರಕುಂದಿ ಅವರು ಹುಬ್ಬಳ್ಳಿಯ ಆಯ್‌ಬಿಎಮ್‌ಆರ್ ಕಾಲೇಜಿನ ಸಭಾಂಗಣದಲ್ಲಿ ಸೌಹಾರ್ದ ಸಾಹಿತ್ಯ ವೇದಿಕೆ ಏರ್ಪಡಿಸಿದ್ದ ಎಸ್.ಎ.ಚಿನ್ನಾಪೂರ ರಚಿತ ‘ಭಾವಭೃಂಗ’ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

- Advertisement -

ಕೇವಲ ಅಭಿನಂದನೆಗಳನ್ನು ಸಲ್ಲಿಸುವುದಷ್ಟೇ ನಮ್ಮ ಕೆಲಸವಾಗದೆ, ಕವಿಯತ್ರಿಯರ ಕಾವ್ಯಗಳನ್ನು ಓದಬೇಕು ಮತ್ತು ಚಿನ್ನಾಪೂರ ಅವರ ಕಾವ್ಯಗಳನ್ನು ವಿಮರ್ಶಿಸಿದಾಗ ಅವರ ಕವನ ಸಂಕಲನಕ್ಕೆ ನಿಜವಾದ ನ್ಯಾಯ ಸಿಗುತ್ತದೆ. ಜಗತ್ತಿಗೆ ಒಳಿತು ಮಾಡುವ ಶಕ್ತಿ ಕಾವ್ಯಕ್ಕಿದೆ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಕೃತಿಯನ್ನು ಬಿಡುಗಡೆ ಮಾಡಿದ ಗದಗಿನ ಹಿರಿಯ ಸಾಹಿತಿ ಎ.ಎಸ್.ಮಕಾನದಾರ ಮಾತನಾಡಿ, ‘ಭಾವಭೃಂಗ’ದಲ್ಲಿ ಅಂತಃಕರಣ ಗುಣವಿದೆ. ಅವರು ಕಂಡುಂಡ ಅನುಭವಗಳ ಸಾರವನ್ನೇ ಕವನಗಳನ್ನಾಗಿಸಿ ಕಾವ್ಯಾಸಕ್ತರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಲೀಮಾ ಚಿನ್ನಾಪೂರ’ರ ಮೊದಲ ಅಕ್ಷರ ಕೃಷಿ ಯಶಸ್ವಿಯಾಗಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಥಾಗುಚ್ಚದ ಸಂಘಟಕ ಗಿರೀಶ ಕುಲಕರ್ಣಿ ಅವರು ಮಾತನಾಡಿ, ಸಲೀಮಾ ಚಿನ್ನಾಪೂರ ಅವರು ಸಂವೇದನಾಶೀಲ ವ್ಯಕ್ತಿತ್ವದವರು. ಆ ಗುಣವೇ ಅವರ ಬಹುತೇಕ ಕವನಗಳ ಪ್ರತಿರೂಪವಾಗಿದೆ‌. ಅವರಿಂದ ಮತ್ತಷ್ಟು ಕೃತಿಗಳು ರಚನೆಯಾಗಿ ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯಾಗಲಿ ಎಂದು ಶುಭ ಕೋರಿದರು.

ಕಾಲೇಜಿನ ಪ್ರಾಚಾರ್ಯ ಅರುಣಶೆಟ್ಟಿ ಮಾತನಾಡಿ, ಇಂದು ನಮ್ಮ ಕಾಲೇಜಿನ ಸಭಾಂಗಣ ಸಾಹಿತ್ಯದ ಕಲರವದಿಂದ ತುಂಬಿ ತುಳುಕಾಡುತ್ತಿದೆ. ಸಾಹಿತ್ಯದ ಕೃತಿಯೊಂದರ ಬಿಡುಗಡೆಗೆ ನಮ್ಮ ವಿದ್ಯಾಲಯ ಸಾಕ್ಷಿಯಾಗಿದ್ದು ನಮಗೂ ಸಂತಸ. ಇನ್ನು ಮುಂದೆಯೂ ತಮ್ಮೆಲ್ಲ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ನಮ್ಮ ಸಹಾಯ ಇರುತ್ತದೆ ಎಂದರು.

ಸೌಹಾರ್ದ ಸಾಹಿತ್ಯ ವೇದಿಕೆಯ ಅಧ್ಯಕ್ಷ ಆರ್.ಎಮ್.ಗೋಗೇರಿ ಮಾತನಾಡಿ, ನಾಡಿನ ಹಿರಿಯ ಕವಿ ಎಮ್.ಡಿ.ಗೋಗೇರಿ ಅವರ ಸೊಸೆ ಸಲೀಮಾ ಚಿನ್ನಾಪೂರ ತಮ್ಮ ಮಾವನವರ ಸಾಹಿತ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ನಮಗೆಲ್ಲ ಹೆಮ್ಮೆ. ನಮ್ಮ ವೇದಿಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ರಾಯಭಾರಿಯಾಗಿ ಇನ್ನೂ ಇಂತಹ ಹತ್ತು ಹಲವು ಕಾರ್ಯಕ್ರಮಗಳಿಗೆ ದಿಕ್ಸೂಚಿಯಾಗಿ ನಿಲ್ಲಲಿದೆ ಎಂದರು.

ಕವಯಿತ್ರಿ ಸಲಿಮಾ ಚಿನ್ನಾಪೂರ ಮಾತನಾಡುತ್ತಾ, ಪ್ರಕೃತಿ, ಗುಡ್ಡ ಬೆಟ್ಟ, ಶ್ರಮಿಕ ವರ್ಗ ಹಾಗೂ ಶ್ರೀಮಂತರ ಬದುಕಿನ ಅಸಮಾನತೆಯನ್ನು ನೋಡುತ್ತ ಪ್ರಕೃತಿಯ ಮಧ್ಯೆ ಬೆಳೆದವಳು. ಪ್ರಾಥಮಿಕ ಹಂತದಲ್ಲಿಯೇ ನನ್ನ ಮೇಲುಂಟಾದ ನನ್ನ ಗುರುಮಾತೆಯವರ ಸಾಹಿತ್ಯದ ಪ್ರಭಾವ ನನ್ನನ್ನು ಇಲ್ಲಿಯವರೆಗೂ ಕರೆತಂದಿದೆ ಎಂದು ಅವರ ಅಕ್ಷರ ಬದುಕಿನ ನಡೆದುಬಂದ ಹಾದಿ ಕುರಿತು ಹಂಚಿಕೊಂಡರು.

ವಿಜಯಲಕ್ಷ್ಮಿ ಮಳಯೆ ಪ್ರಾರ್ಥಿನೆ ಹಾಡಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಲೀಮಾ ಚಿನ್ನಾಪೂರ ಅವರು ಕಥಾಗುಚ್ಛದ ಮೂಲಕ ನಮಗೆ ಸಿಕ್ಕ ಅಪರೂಪದ ಸ್ನೇಹಿತೆ. ಅವರ ಪ್ರತಿಯೊಂದು ಬರಹವೂ ಸಮರ್ಥ ಅಷ್ಟೇ ಪ್ರಭಾವಶಾಲಿ. ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುವ ಅವರ ಕಲ್ಪನಾಶಕ್ತಿ ಅನನ್ಯ. ಆ ಕಲ್ಪನೆಗಳೇ ಇಂದು ಅಕ್ಷರ ರೂಪದಲ್ಲಿ ಹೊರಹೊಮ್ಮಿ ಭಾವಭೃಂಗದ ನಾದದ ಹೊನಲು ಹೊಮ್ಮಲು ಸಾಧ್ಯವಾಗಿದೆ ಎಂದರು.

ಇದನ್ನು ಓದಿದ್ದೀರಾ? ಬೆಳಗಾವಿ | ಸಾವಯವ ಕೃಷಿಯಿಂದಲೇ ಸ್ವಾವಲಂಬಿಯಾದ ರೈತ ಕಲ್ಲಪ್ಪ

ನಂತರ ನಡೆದ ಕವಿಗೋಷ್ಠಿಯಲ್ಲಿ ಪ್ರಕಾಶ ಕಡಮೆ, ಲೈಲಾ ಜಿ, ಕುಮುದಾ ದೇಶಪಾಂಡೆ, ಸಂದ್ಯಾ ಫಡ್ನೀಸ್, ಎಂ.ಬಿ.ಪವಾಡಶೆಟ್ಟರ, ಅಶ್ವಿನಿ ನಾಯಕ, ಎ.ಆರ್.ಧನಲಕ್ಷ್ಮಿ ಕವನ ವಾಚಿಸಿದರು. ಕೌಸರಾಭಾನು ಅತಿಥಿಗಳನ್ನು ಪರಿಚಯಿಸಿದರು. ಎಸ್.ಆರ್ ಗೋಗೇರಿ ವಂದಿಸಿದರು. ಎಂ.ಬಿ.ಪವಾಡಶೆಟ್ಟರ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...