ಹುಲಸೂರ ತಾಲೂಕಿನ 18 ಗ್ರಾಮಗಳ ಸರ್ಕಾರಿ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿಗೆ ಗ್ರಾಮ ಕ್ರಾಂತಿ ಸೇನೆ ವತಿಯಿಂದ ಕಲಿಕಾ ಸಾಮಾಗ್ರಿ ವಿತರಿಸಲಾಯಿತು.
ಹುಲಸೂರ ತಹಸೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ʼಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಪ್ರತಿಭಾವಂತ ಮಕ್ಕಳಿದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸಿ ಪ್ರತಿಭೆ ಹೊರತರುವ ಕೆಲಸ ಆಗಬೇಕಿದೆ. ಗ್ರಾಮ ಕ್ರಾಂತಿ ಸೇನೆಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್, ಪೆನ್ ವಿತರಿಸುವ ಕಾರ್ಯ ಶ್ಲಾಘನೀಯʼ ಎಂದರು.

ಸೇನೆಯ ರಾಜ್ಯಾಧ್ಯಕ್ಷ ಸಂದೀಪ ಮುಕಿಂದೆ ಮಾತನಾಡಿ, ʼಗಡಿ ಭಾಗದಲ್ಲಿ ಕನ್ನಡ ಶಾಲೆ ಉಳಿಯಬೇಕಿದೆ. ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘಟನೆ ವತಿಯಿಂದ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಿಸಿ ಪ್ರೋತ್ಸಾಹ ನೀಡಲಾಗುತ್ತಿದೆʼ ಎಂದರು.
ತಾಲೂಕಿನ ಮುಚಳಂಬ, ರಾಯಪಳ್ಳಿ, ಕಾದೆಪುರ, ಲಿಂಬಾಪುರ, ಗೋರ್ಟಾ(ಬಿ), ತೊಗಲೂರು, ಹುಲಸೂರ ಸೇರಿದಂತೆ ವಿವಿಧೆಡೆ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸೇನೆಯ ರಾಜಾಧ್ಯಕ್ಷ ಸಂದೀಪ ಮುಕಿಂದೆ ಅವರ ಜನ್ಮದಿನ ಆಚರಿಸಲಾಯಿತು.
ಸೇನೆಯ ಜೈವಂತ ಸಿಂಗಾರೆ,ಪ್ರಕಾಶ ಕಾಂಬಳೆ, ಅನಿಲ ಭುಲೇ, ವಿಷ್ಣು ಸಿಂಗಾರೆ, ಬಬನ ಗೋರೆ, ಧರ್ಮಾ, ಅತೀಶ, ದಿನೇಶ, ಆಕಾಶ ಕಿಣ್ಣಿಕರ್, ಸುಮಿದ, ಅರುಣ ಖೂನೆ, ಅಶೋಕ ಕಾಂಬಳೆ, ಅಶೋಕ ಶಿಂಧೆ, ಶಿವಾನಂದ ಪಾಂಚಾಳ ಮತ್ತಿತರರು ಉಪಸ್ಥಿತಿ ಇದ್ದರು.
ಇದನ್ನೂ ಓದಿ : ಬೀದರ್ | ಡಿಜಿಟಲ್ ಗ್ರಂಥಾಲಯದಲ್ಲಿ ಓದಿ ವಿದೇಶದಲ್ಲಿ ನೌಕರಿ : ಹಳ್ಳಿ ಹುಡುಗನ ಸಾಧನೆಗೆ ಎಲ್ಲರೂ ದಿಲ್ ಖುಷ್!