ಹುಮನಾಬಾದ್ ತಾಲ್ಲೂಕಿನ ಮೋಳಕೇರಾ ಗ್ರಾಮದ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಕೂಡಲೇ ಮದ್ಯ ಮಾರಾಟ ನಿಷೇಧಿಸಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಈ ಸಂಬಂಧ ಹುಮನಾಬಾದ್ ಅಬಕಾರಿ ಉಪ ನಿರೀಕ್ಷಕರ ಹೆಸರಿಗೆ ಬರೆದ ಮನವಿ ಪತ್ರವನ್ನು ಬುಧವಾರ ಇಲಾಖೆ ಅಧಿಕಾರಿ ಉಮೇಶ ನಾಗೂರೆ ಅವರಿಗೆ ಸಲ್ಲಿಸಿದರು.
ʼಮೋಳಕೇರಾ ಗ್ರಾಮದ ಬಹುತೇಕ ಕಿರಾಣಿ ಅಂಗಡಿ, ಹೋಟೆಲ್‌ಗಳಲ್ಲಿ ರಾಜಾರೋಷವಾಗಿ ಮದ್ಯ (ಸರಾಯಿ) ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಅಪ್ರಾಪ್ತ ವಯಸ್ಸಿನವರು ಮದ್ಯ ವ್ಯಸನಿಗಳಾಗಿ ಅಮೂಲ್ಯ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಧಾರ್ಮಿಕ ಮಂದಿರಗಳ ಆವರಣದಲ್ಲಿ ಮದ್ಯ ಸೇವಿಸುತ್ತಿದ್ದಾರೆʼ ಎಂದು ದೂರಿದರು.
ಮೋಳಕೇರಾ ಗ್ರಾಮದ ಕಿರಾಣಿ ಅಂಗಡಿ, ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ಕೂಡಲೇ ನಿಷೇಧಿಸಬೇಕೆಂದು ಗ್ರಾಮಸ್ಥರ ಪರವಾಗಿ ಮನವಿ ಮಾಡುತ್ತೇವೆ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವೃದ್ದಾಪ್ಯ ವೇತನ ಬಾರದೆ ವೃದ್ಧ ದಂಪತಿ ಪರದಾಟ; ಕಣ್ಣು ಹಾಯಿಸುವರೇ ಅಧಿಕಾರಿಗಳು?
ಕಲ್ಯಾಣ ಕರ್ನಾಟಕ ವಿದ್ಯಾರ್ಥಿ ವೇದಿಕೆ ರಾಜ್ಯಾಧ್ಯಕ್ಷ ಮನೋಜ ಸಿತಾಳೆ, ವಿದ್ಯಾರ್ಥಿ ಘಟಕದ ತಾಲ್ಲೂಕಾಧ್ಯಕ್ಷ ಅರವಿಂದ ಜೋಗಿರೆ, ಭೀಮ್ ಆರ್ಮಿ ಸಂಘಟನೆಯ ಅನೀಲ್ ದೊಡ್ಡಿ, ಸಾಮಾಜಿಕ ಕಾಯಕರ್ತರಾದ ಭೀಮರೆಡ್ಡಿಸಿಂಧನಕೇರಾ, ಯುವರಾಜ ಐಹೊಳ್ಳಿ ಇದ್ದರು.