ಗೌರಿ ಲಂಕೇಶರಂತೆ ಮತ್ತೊಂದು ಹತ್ಯೆಯಾಗಲು ನಾವು ಬಿಡಿವುದಿಲ್ಲ. ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ಗೊತ್ತಿದೆ. ಸಂವಿಧಾನಕ್ಕೆ ವಿರುದ್ಧವಾಗಿ ನಮ್ಮನ್ನು ಎತ್ತ ಸಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂಬುದು ಚೆನ್ನಾಗಿ ತಿಳಿದಿದೆ. ನಮ್ಮನ್ನು ಮನುಷ್ಯರಿಂದ ಮೃಗಗಳನ್ನಾಗಿ ಮಾಡುವ ಪ್ರಯತ್ನಗಳು ನಡೆಯುತ್ತಿದೆ ಎಂದು ಪತ್ರಕರ್ತ ನವೀನ್ ಕುಮಾರ್ ಹೇಳಿದರು.
ದಿಟ್ಟ ಪತ್ರಕರ್ತೆ ಗೌರಿ ಲಂಕೇಶರ ನೆನಪಿನಲ್ಲಿ ಬೆಂಗಳೂರಿನಲ್ಲಿ ಗೌರಿ ಮೆಮೊರಿಯಲ್ ಟ್ರಸ್ಟ್ ಆಯೋಜಿಸಿದ್ದ ‘ನಾಲ್ಕನೇ ಅಂಗದ ಮರುನಿರ್ಮಾಣ’ ಚಿಂತನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಇಂದು ನಾನು ಗೌರಿಯವರನ್ನು ಕೇವಲ ಮಹಿಳೆ ಎಂಬ ರೀತಿಯಲ್ಲಿ ನೋಡಲು ನಾನು ಬಯಸುವುದಿಲ್ಲ. ಅವರನ್ನು ನಾನು ಧೈರ್ಯಶಾಲಿ, ದಿಟ್ಟ ಪತ್ರಕರ್ತೆ ಎಂದು ಕರೆಯುತ್ತೇನೆ. ಅಂಬೇಡ್ಕರ್ ರನ್ನು ದಲಿತ ಎಂದು ನೋಡಿದಂತೆ ಗೌರಿಯನ್ನು ಕೇವಲ ಮಹಿಳೆ ಎಂಬಂತೆ ನೋಡುವುದನ್ನು ನಿಲ್ಲಿಸಬೇಕಿದೆ. ಇಂದು ಮಹಿಳೆ ಹಾಗೂ ಪುರುಷರ ನಡುವೆ ದ್ವೇಷ ಬಿತ್ತಲಾಗುತ್ತಿದೆ, ಮಹಿಳೆ ಹಾಗೂ ಮಹಿಳೆಯರ ನಡುವೆ ಕಚ್ಚಡಿಸಲಾಗುತ್ತಿದೆ, ಹಿಂದೂ- ಮುಸ್ಲಿಮರ ನಡುವೆ, ಮುಸ್ಲಿಮ್- ಕ್ರಿಶ್ಚಿಯನ್‌ರ ನಡುವೆ ದ್ವೇಷವನ್ನು ಬಿತ್ತಲು ಪ್ರಯತ್ನಿಸಲಾಗುತ್ತಿದೆ” ಎಂದರು.
“ಮುಂಬರುವ ಮೂರು ತಿಂಗಳಲ್ಲಿ ಯಾವ ರೀತಿಯ ವಾತಾವರಣವನ್ನು ಈ ದೇಶದಲ್ಲಿ ನಿರ್ಮಿಸಲಾಗುತ್ತದೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಯಾವ ರೀತಿ ಸತ್ಯವನ್ನು ತಿರುಚಲಾಗುತ್ತದೆ, ಯಾವ ರೀತಿ ಪ್ರಶ್ನೆಗಳನ್ನು ಹತ್ತಿಕ್ಕಲಾಗುತ್ತಿದೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಆದರೆ, ಸತ್ಯವನ್ನು ಅವರು ಎಷ್ಟೇ ಮರೆಮಾಚಲು ಪ್ರಯತ್ನಿಸಲಿ ನಾವಿಂದನ್ನು ಹೊರ ತಂದೇತರುತ್ತೇವೆ ಎಂದು ಪಣತೊಡುತ್ತೇವೆ” ಎಂದು ಹೇಳಿದರು.
“ನಮ್ಮ ಉಸಿರಿರುವವರೆಗೆ ಸಂವಿಧಾನ ಹಾಗೂ ಪ್ರಜಾತಂತ್ರವನ್ನು ನಾವು ಉಳಿಸಲು ಪ್ರಯತ್ನಿಸುತ್ತೇವೆ. ಯಾಕೆಂದರೆ, ಮುಂಬರುವ ಪೀಳಿಗೆಗೆಳು ಮಂದಿರ ಹಾಗೂ ಮಸೀದಿಗಳ ನಡುವೆ ದ್ವೇಷ ಬಿತ್ತಲಾದಾಗ ನೀವೇನೂ ಮಾಡುತ್ತಿದ್ದೀರಿ? ಈ ದೇಶದ ಸರ್ಕಾರಿ ಸೊತ್ತುಗಳನ್ನು ಮಾರುವಾಗ, ಆಸ್ಪತ್ರೆಗಳನ್ನು ಖಾಸಗೀಕರಣ ಮಾಡುವಾಗ ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸುವಾಗ ಉತ್ತರಿಸಲು ನಾವು ಸಜ್ಜಾಗುತ್ತಿದ್ದೇವೆ” ಎಂದರು.
“ಪ್ರಾಮಾಣಿಕತೆ ಕೇವಲ ಮಾಧ್ಯಮದ ಧ್ವನಿಯಲ್ಲ. ಆಲೋಚಿಸುವ ಪ್ರತಿಯೊಬ್ಬರ ಧ್ವನಿಯಾಗಿದೆ, ಅದು ಪ್ರಜಾಪ್ರಭುತ್ವದ ಧ್ವನಿಯಾಗಿದೆ. 1990ರ ದಶಕಗಳಲ್ಲಿ ಕೇವಲ ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾಲಯ ಮಾತ್ರ ಖಾಸಗೀಕರಣಕ್ಕೆ ಒಳಗಾಗಿತ್ತು. ಆದರೆ, ಇವತ್ತು ದೇಶದಲ್ಲಿ 400ಕ್ಕಿಂತಲೂ ಹೆಚ್ಚು ಖಾಸಗಿ ವಿಶ್ವವಿದ್ಯಾಲಯಗಳಿವೆ. ಇದು ಸಮಾನತೆಯನ್ನು ಬಯಸುವ ಬಡ ಮಧ್ಯಮ ವರ್ಗದ ಜನರ ಶಿಕ್ಷಣದ ಹಕ್ಕುಗಳನ್ನು ಕಸಿಯುವ ಹುನ್ನಾರವಾಗಿದೆ” ಎಂದು ತಿಳಿಸಿದರು.
“ಆಲೋಚನೆಗಳನ್ನು ಬದಲಾಯಿಸಬೇಕಾದ ಅಗತ್ಯತೆ ಇದೆ. ಯಾವಾಗ ಕೈಯಿಂದ ಪೆನ್ನನ್ನು ಕಸಿಯಲಾಗುತ್ತದೋ ಆಗ ಖಡ್ಗವನ್ನು ನೀಡಲು ಸಮಯಬೇಕಾಗುವುದಿಲ್ಲ. ಈ ದೇಶದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್, ಜಯರಾಮ್ ಸೇರಿದಂತೆ ಹೆಚ್ಚಿನ ರಾಜಕಾರಣಿಗಳ ಮಕ್ಕಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ನಮ್ಮ ದೇಶದ ಮಕ್ಕಳು ಗೋಕುಲದಲ್ಲಿ ಕಲಿಯಬೇಕೆಂದು ಇವರು ಬಯಸುತ್ತಿರುವುದು ಯಾಕೆ ಎಂಬುದನ್ನು ಅರಿಯಬೇಕಿದೆ. ನಮ್ಮ ದೇಶದಲ್ಲಿ ಯಾವಾಗ ಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೂ ಇಲ್ಲಿನ ಜನರನ್ನು ತಮಗೆ ಬೇಕಾದಂತೆ ಒಡೆದು ಆಡಳಿತ ನಡೆಸಲು ಜನರನ್ನು ಆಳಲು ಇವರಿಗೆ ಸಮಯಬೇಕಾಗಿಲ್ಲ” ಎಂದರು.
“ದೆಹಲಿಯ 5° ಚಳಿಯಲ್ಲಿ ರಸ್ತೆಯಲ್ಲಿ ಹೊದ್ದು ಮಲಗುವ ಜನರು ಜನವರಿ 22ರಂದು ದೀಪ ಹಚ್ಚಿಟ್ಟು ಸಂಭ್ರಮಿಸಿದರೇ ಸಾಕೇ? ಕೊರೆಯುವ ಚಳಿಯಲ್ಲಿ ಬೀದಿಯಲ್ಲಿ ಮಲಗಿದವರಿಗೆ ಲಭಿಸಬೇಕಾದ ಮೂಲಭೂತ ಸೌಲಭ್ಯಗಳು ಬೇಡವೇ ಎಂಬುದನ್ನು ನಮ್ಮ ನಾಯಕರು ಉತ್ತರಿಸಬೇಕಿದೆ” ಎಂದು ಹೇಳೀದರು.
“ಒಂದು ಭಾಷೆ, ಒಂದು ಚುನಾವಣೆ, ಒಂದು ಉಡುಗೆ, ಒಬ್ಬನೇ ನಾಯಕ ಎಂಬ ರೀತಿಯಲ್ಲಿ ಒಂದು ಎಂಬಂತೇ ಬಿತ್ತಲಾಗುತ್ತಿರುವ ಈ ಆಲೋಚನೆಗಳನ್ನು ಒಪ್ಪಲು ತಯಾರಗದವರ ಮೇಲೆ ಬಲ ಪ್ರಯೋಗ ನಡೆಯುತ್ತಿದೆ” ಎಂದರು.
ಪತ್ರಕರ್ತೆ ಮೀನಾ ಕೋತ್ವಾಲ್ ಮಾತನಾಡಿ, “ಯಾವುದೇ ಧರ್ಮವಾಗಿರಲಿ ಜಾತಿಯಾಗಿರಲಿ ಅದಕ್ಕೆ ಮೊದಲು ಬಲಿಪಶುಗಳಾಗುವುದು ಮಹಿಳೆಯರು. ಆದರೆ, ಮಹಿಳೆಯೊಬ್ಬಳು ಈ ವ್ಯವಸ್ಥೆಯ ವಿರುದ್ಧ ಜಾಗೃತಳಾಗಿ ಧ್ವನಿಯೆತ್ತುವುದು, ಮಾತನಾಡುವುದು ಬರೆಯುವುದು ಸಣ್ಣ ವಿಷಯವೇನಲ್ಲ. ಇದೇ ಕಾರಣಕ್ಕಾಗಿ ಕೆಲವರಿಗೆ ಅವರ ವಿಚಾರಧಾರೆಗಳನ್ನು ಅರಗಿಸಿಕೊಳ್ಳಲಿಲ್ಲ. ಅವರ ಬರಹ, ಅವರ ಮಾತು ಹಲವರ ಧ್ವನಿಯಾಗಿತ್ತು. ಆದರೆ ಆ ಧ್ವನಿಯನ್ನು ಹುಟ್ಟಡಗಿಸಲಾಯ್ತು” ಎಂದು ಆಕ್ರೊಶ ವ್ಯಕ್ತಪಡಿಸಿರು.
“ಮಹಿಳೆಯರು ಬರೆಯುವುದು ಮಾತನಾಡುವುದು ಎಷ್ಟು ಅವಶ್ಯಕತೆ ಇದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಯಾಕೆಂದರೆ, ಇದು ಹಲವು ಪೀಳಿಗೆಗಳನ್ನು ಜಾಗೃತಗೊಳಿಸುತ್ತದೆ. ಜಾಗೃತ ಪೀಳಿಗೆಯನ್ನು ರೂಪಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು. ಹಲವು ವರ್ಷಗಳ ಬಳಿಕವೂ ನಾವಿಂದ ಗೌರಿಯವರನ್ನು ನೆನೆಯುತ್ತಿದ್ದೇವೇ ಎಂದಾದರೆ, ಅವರ ಮಾಡಿದ ಕೆಲಸಗಳು ಇಂದಿಗೂ ಮಾತನಾಡುತ್ತಿವೆ ಎಂಬುದರ ಗುರುತಾಗಿವೆ” ಎಂದರು.
Neen yaav nayino hogo