ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಲಿಂಗಾಯತರ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕರ್ನಾಟಕದ ಲಿಂಗಾಯತರು ಅವನನ್ನು ಇಲ್ಲಿಂದ ಓಡಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕಾಗುತ್ತದೆ ಎಂದು ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದ ಡಾ.ಶಿವಾನಂದ ಮಹಾಸ್ವಾಮಿಜಿ ಎಚ್ಚರಿಕೆ ನೀಡಿದ್ದಾರೆ.
ಹುಲಸೂರ ಪಟ್ಟಣದಲ್ಲಿ ಜರುಗಿದ ಶರಣ ಸಂಸ್ಕ್ರತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʼಯತ್ನಾಳ್‌ಗೆ ಮಾನ ಮರ್ಯಾದೆ ಇದ್ರೆ ಲಿಂಗಾಯತರಲ್ಲಿ ಕ್ಷಮೆ ಕೇಳಬೇಕು. ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ವಾಪಸ್ ಪಡೆಯದೇ ಇದ್ರೆ ಮುಂದಿನ ಸಲ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಸೋಲು ಖಚಿತ, ಒಂದು ವೇಳೆ ಅವರು ಸೋಲದಿದ್ರೆ ನಾನು ನನ್ನ ಮಠ ತ್ಯಾಗ ಮಾಡುತ್ತೇನೆʼ ಎಂದು ಶಿವಾನಂದ ಸ್ವಾಮೀಜಿ ಬಹಿರಂಗ ಸವಾಲ್ ಹಾಕಿದ್ದಾರೆ.
ಬೀದರ್ | ಬಸವಣ್ಣ ಕುರಿತು ಅವಹೇಳನಕಾರಿ ಹೇಳಿಕೆಗೆ ಆಕ್ರೋಶ
— eedina.com ಈ ದಿನ.ಕಾಮ್ (@eedinanews) December 2, 2024
ಮುಂದಿನ ಚುನಾವಣೆಯಲ್ಲಿ ಯತ್ನಾಳ ಸೋಲದೆ ಹೋದಲ್ಲಿ ಪೀಠ ತ್ಯಾಗಕ್ಕೆ ಸಿದ್ಧ
ಶಾಸಕ ಬಸನಗೌಡ ವಿರುದ್ಧ ಹುಲಸೂರ ಮಠದ ಶಿವಾನಂದ ಸ್ವಾಮೀಜಿ ವಾಗ್ದಾಳಿ #BasanagoudaPatilYatnal #eedina #lingayat #basavanna #vijayapur #bidar pic.twitter.com/xgx4UI4pi0
ʼಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡೋರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಹೆಸರು ಮಾತ್ರ ಬಸವರಾಜ, ಆದ್ರೆ ನೀನು ಬೆಂಕಿ ಹಚ್ಚುವ ಬಸವರಾಜ. ಬಸವಣ್ಣನವರ ಬಗ್ಗೆ, ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮತಾನಾಡುತ್ತಿದ್ದು, ಯತ್ನಾಳ್ ತಾನೊಬ್ಬನೇ ತೀಸ್ಮಾರ್ಕ್ ಎಂದು ತಿಳಿದುಕೊಂಡಿದ್ದಾನೆʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಆಟೊ ಚಾಲಕನ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ನಾನು ಶ್ರೀಮಂತ, ನಾನು ಎಂಎಲ್‌ಎ ದೊಡ್ಡವ ಎಂದು ತಿಳಿದುಕೊಂಡಿದ್ದು, ಜನಗಳಿಗೆ ಗೌರವ ಕೊಡಲಿಲ್ಲಾ ಅಂದ್ರೆ ನೀನ್ಯಾವ ಸೀಮೆಯ ಶಾಸಕ? ಎಂದು ಹೇಳುವುದಕ್ಕೆ ದಿಕ್ಕಾರವಿದೆ. ನಾನೇ ಬಸವಣ್ಣ ಅಂತ ಹೇಳಿ ನಾಲಾಯಕತನ ಪ್ರದರ್ಶನ ಮಾಡ್ಯಾನ್, ಯಾರೊಬ್ಬರೂ ಬಸವಣ್ಣ ಆಗಾಕ ಸಾಧ್ಯ ಇಲ್ಲ. ಬಸವಣ್ಣನ ಸರಿಸಮ ನಿಲ್ಲುವಂತಹ ವ್ಯಕ್ತಿ ಯಾರೂ ಇಲ್ಲ. ಜಗತ್ತಿನಲ್ಲಿ 12ನೇ ಶತಮಾನದ ಬಸವಣ್ಣ ಅವರನ್ನು ಬಿಟ್ರೆ ಉಳಿದವರು ಯಾರೂ ಬಸವಣ್ಣ ಆಗಲು ಸಾಧ್ಯವಿಲ್ಲ ಶಿವಾನಂದ ಸ್ವಾಮೀಜಿ ಹೇಳಿದರು.