ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಸೆ.12ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಬಿ.ಎನ್.ಗಂಗಾಧರ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೆ ಆಗಸ್ಟ್ 1ನೇ ತಾರೀಖು ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಕುರಿತು ಐತಿಹಾಸಿಕ ತೀರ್ಪು ನೀಡಿದೆ. ಎಲ್ಲಾ ರಾಜ್ಯ ಸರಕಾರಗಳಿಗೂ ಪ.ಜಾತಿಯ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಅಧಿಕಾರ ಇದೆ ಎಂದು ಕೋರ್ಟ್ ಹೇಳಿದೆ. ಅದರಂತೆ ಸಿದ್ದರಾಮಯ್ಯ ಸರಕಾರ ತಕ್ಷಣವೇ ಒಳಮೀಸಲಾತಿ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಹಿಂದೆಯೂ ಒಳಮೀಸಲಾತಿ ಜಾರಿಗೊಳಿಸುವ ಕುರಿತು ಮಾತುಕೊಟ್ಟಿದ್ದ ಸಿದ್ದರಾಮಯ್ಯ, ಒಳಮೀಸಲಾತಿ ಜಾರಿ ಮಾಡದ ಹಿನ್ನೆಲೆ ಸೋಲುಂಡಿದ್ದರು. ಆದರೆ, ಇದೀಗ ನ್ಯಾಯಾಲಯವೇ ಆದೇಶ ಹೊರಡಿಸಿದೆ. ಈಗಲಾದರೂ ಎಚ್ಚೆತ್ತು ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಖಚಿತ ಎಂದು ಎಚ್ಚರಿಕೆ ನೀಡಿದರು.

ಇದಷ್ಟೇ ಅಲ್ಲದೇ ಬಾಕಿ ಉಳಿದಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಒಳಮೀಸಲಾತಿ ಜಾರಿಯಾಗುವವರೆಗೂ ಎಲ್ಲಾ ಹೊಸ ನೇಮಕಾತಿಗಳನ್ನು ತದೆ ಹಿಡಿಯಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೇವಲ 8 ಟಿಎಂಸಿ ನೀರಿಗಾಗಿ 18 ಸಾವಿರ ಕೋಟಿ ಖರ್ಚು ಮಾಡಿದೆಯೇ ಸರ್ಕಾರ!
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಗಂಗಪ್ಪ ನಲ್ಲಿಕದುರನಹಳ್ಳಿ, ಜಿಲ್ಲಾ ಸಂಘಟನಾ ಸಂಚಾಲಕ ಎಚ್.ಎಂ.ವೆಂಕಟೇಶ್ ಗೌರಿಬಿದನೂರು, ನಾಗರಾಜು ಗುಡಿಬಂಡೆ, ಕೃಷ್ಣಮೂರ್ತಿ ಬಾಗೇಪಲ್ಲಿ, ಶ್ರೀನಿವಾಸ್ ಮಂಚೇನಹಳ್ಳಿ, ದಲಿತ ಮಹಿಳಾ ಒಕ್ಕೂಟದ ಮಂಜು ತುಳಸಿ, ಗಾಯಿತ್ರಿ, ತಾಲೂಕು ಸಂಚಾಲಕರಾದ ಮುನಿರಾಜು, ತಾಲೂಕು ಸಂಘಟನಾ ಸಂಚಾಲಕರಾದ ನಾಗೇಶ್, ಮುನಿರಾಜು ಡಿ.ಸಿ, ಅಂಬರೀಶ್, ನಾಗರಾಜ್, ಜೆ.ಡಿ.ಲಕ್ಷ್ಮಿ ನರಸಿಂಹಪ್ಪ, ನರಸಿಂಹಪ್ಪ ಮಂಚೇನಹಳ್ಳಿ ಇತರರಿದ್ದರು.