ವೇದಗಳ ಕಾಲದಿಂದಲೂ ಭಾರತೀಯ ಚಿಂತನೆಯಲ್ಲಿ ಗಂಡು-ಹೆಣ್ಣು ಎಂಬ ಭೇದ ಭಾವ ಇರಲಿಲ್ಲ. ವಿದೇಶಿಯರ ಆಕ್ರಮಣ ಮತ್ತು ಶೋಷಣೆಯ ಭಯದಿಂದ ಮಹಿಳೆ ಹಿಂದಕ್ಕೆ ಸರಿದಿದ್ದಾಳೆ ಎಂದು ನಟಿ, ಬಿಜೆಪಿ ಮುಖಂಡೆ ಮಾಳವಿಕಾ ಅವಿನಾಶ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿ ಆಯೋಜಿಸಿದ್ದ ‘ನಾರಿ ಶಕ್ತಿ ಸಂಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ವಿದೇಶಿಯರ ಆಕ್ರಮಣ ಮತ್ತು ಶೋಷಣೆಯಿಂದ ತಪ್ಪಿಸಿಕೊಳ್ಳಲು ಆತ್ಮಾಹುತಿಯಂತಹ ಭಯಾನಕ ಕೃತ್ಯಕ್ಕೆ ಮಹಿಳೆ ತುತ್ತಾಗಿದ್ದರು. ಹಿಂದು ಧರ್ಮದಲ್ಲಿ ಮಹಿಳೆಯರು ಪುರುಷರಂತೆ ಇರುವ ಅಗತ್ಯವಿಲ್ಲ” ಎಂದರು.
“ಹಿಂದು ಧರ್ಮವನ್ನು ಬೇರೆಯವರು ಸುಧಾರಣೆ ಮಾಡಿಲ್ಲ. ಧರ್ಮದ ಒಳಗಿನ ಹಲವರು ಸಮಾಜದಲ್ಲಿ ಸುಧಾರಣೆಗಳನ್ನು ಮಾಡಿದ್ದಾರೆ. ಲಿಂಗ ತಾರತಮ್ಯವೇ ಇಲ್ಲದ ಸಮಾನತೆಯಿಂದ ಬದುಕುವುದು ಹಿಂದು ಧರ್ಮದ ತಿರುಳಾಗಿದೆ” ಎಂದು ಅವರು ಹೇಳಿದ್ದಾರೆ.