ಬೀದರ್‌ ಲೋಕಸಭಾ | ಪ್ರಜಾಪ್ರಭುತ್ವ ಹಬ್ಬದಲ್ಲಿ ಗಣ್ಯರು, ವೃದ್ಧರು, ಮಹಿಳೆಯರು ಮತದಾನ

Date:

Advertisements

ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಇಂದು (ಮೇ 7) ನಡೆಯುತ್ತಿದೆ. ಮೊದಲನೆಯ ಹಂತದ ಚುನಾವಣೆ ಏಪ್ರಿಲ್ 19ರಂದು ನಡೆದಿದ್ದು ಎರಡನೇ ಹಂತದ ಚುನಾವಣೆ ಏಪ್ರಿಲ್ 26ರಂದು ನಡೆದಿದೆ. ಕರ್ನಾಟದಲ್ಲಿ ಏಪ್ರಿಲ್ 26ರಂದು ಮೊದಲ ಹಂತದಲ್ಲಿ ಚುನಾವಣೆ ನಡೆದಿದ್ದು, ಇಂದು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಯಾಗಿದೆ.

ಲೋಕಸಭಾ ಚುನಾವಣೆಗೆ ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಬೀದರ ಲೋಕಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಸಚಿವರು, ಶಾಸಕರು, ಮಾಜಿ ಸಚಿವರು, ಶಾಸಕರು, ಗಣ್ಯರು ಉತ್ಸುಕತೆಯಿಂದ ಮತದಾನ ಮಾಡಿದರು.

WhatsApp Image 2024 05 07 at 11.20.12 AM
ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಸ್ವಗ್ರಾಮ ಭಾಲ್ಕಿಯ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ (ಹೊಸ ಕಟ್ಟಡ) ಮತ ಚಲಾಯಿಸಿದರು.
WhatsApp Image 2024 05 07 at 12.15.32 PM
ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಔರಾದ್ ಪಟ್ಟಣದ ನಾಲಂದಾ ಹೈಸ್ಕೂಲ್ ಮತಗಟ್ಟೆಯಲ್ಲಿ
ಕುಟುಂಬ ಸಮೇತ ತೆರಳಿ ಮತ ಹಕ್ಕು ಚಲಾಯಿಸಿದರು.
WhatsApp Image 2024 05 07 at 11.20.13 AM
ಕಾಂಗ್ರೆಸ್‌ ಅಭ್ಯರ್ಥಿ ಸಾಗರ್ ಈಶ್ವರ ಖಂಡ್ರೆ ಅವರು ಸ್ವಗ್ರಾಮ ಭಾಲ್ಕಿಯ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ (ಹೊಸ ಕಟ್ಟಡ) ತಂದೆ ಈಶ್ವರ ಖಂಡ್ರೆ, ತಾಯಿ ಗೀತಾ ಖಂಡ್ರೆ ಅವರೊಂದಿಗೆ ತೆರಳಿ ಮತ ಚಲಾಯಿಸಿದರು.
WhatsApp Image 2024 05 07 at 10.41.02 AM
ಮಾಜಿ ಸಚಿವ ಹಾಗೂ ಔರಾದ ಶಾಸಕ ಪ್ರಭು.ಬಿ ಚವ್ಹಾಣ ಅವರು ಔರಾದ(ಬಿ) ತಾಲೂಕಿನ ಬೋಂತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆ ಕೇಂದ್ರ 31 ರಲ್ಲಿ ಪತ್ನಿ ಸಕ್ಕುಬಾಯಿ, ಪುತ್ರ ಪ್ರತೀಕ್ ಚವ್ಹಾಣ ಸಮೇತ ಮತ ಚಲಾಯಿಸಿದರು.
WhatsApp Image 2024 05 07 at 11.20.28 AM
ಹುಮನಾಬಾದ್‌ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌ ಅವರು ಪಟ್ಟಣದ ಮೌನೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿದ ಮತಗಟ್ಟೆಯಲ್ಲಿ ಮತ ಹಕ್ಕು ಚಲಾಯಿಸಿದರು.
WhatsApp Image 2024 05 07 at 11.20.13 AM 1
ಬಸವಕಲ್ಯಾಣ ಶಾಸಕ ಶರಣು ಸಲಗರ ನಗರದ ಬೂತ್ ಸಂಖ್ಯೆ 103 ರೈತ ಭವನದಲ್ಲಿ ಮತದಾನ ಮಾಡಿದರು.
ಅರಳಿ ಶಾಸಕರು
ವಿಧಾನ ಪರಿಷತ್‌ ಸದಸ್ಯ ಅರವಿಂದ ಕುಮಾರ್‌ ಅರಳಿ ಅವರು ಬೀದರ ನಗರದ ಸಹಾಯಕ ಕಾರ್ಯನಿರ್ವಾಹಕ ಜಲ ಸಂಪನ್ಮೂಲ ಇಲಾಖೆ ಕಛೇರಿಯ ಬೂತ್ ಸಂಖ್ಯೆ 132, ಕೆ ಹೆಚ್ ಬಿ ಕಾಲೋನಿಯಲ್ಲಿ ಕುಟುಂಬದೊಂದಿಗೆ ತೆರಳಿ ಮತದಾನ ಮಾಡಿದರು.
ಬೆಲ್ದಾಳೆ ಶಾಸಕರು
ಬೀದರ್ ದಕ್ಷಿಣ ಕ್ಷೇತ್ರದ ಚಿಟ್ಟಾ ವಾಡಿ ಗ್ರಾಮದ ಬೂತ್ ಸಂಖ್ಯೆ 61ರಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಮತ ಚಲಾಯಿಸಿದರು.
WhatsApp Image 2024 05 07 at 11.20.14 AM
ಮಾಜಿ ಸಚಿವ, ಜೆಡಿಎಸ್ ನಾಯಕ ಬಂಡೆಪ್ಪ ಖಾಶೆಂಪುರ್ ಅವರು ಬೀದರ್ ನಗರದ ಒಲ್ಡ್ ಸಿಟಿಯ (ಜಿಲ್ಲಾ ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆ ಕಟ್ಟಡ) ಯಲ್ಲಿ ಮತಗಟ್ಟೆ ಬೂತ್ -106 ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
humanabad MLA
ಮಾಜಿ ಸಚಿವ ರಾಜಶೇಖರ ಪಾಟಿಲ್‌ ಹುಮನಾಬಾದ್‌ ಹಾಗೂ ವಿಧಾನ ಪರಿಷತ್‌ ಸದಸ್ಯರಾದ ಭೀಮರಾವ್‌ ಪಾಟೀಲ್‌, ಡಾ.ಚಂದ್ರಶೇಖರ್‌ ಪಾಟೀಲ್‌ ಕುಟುಂಬ ಸಮೇತ ಮತದಾನ ಮಾಡಿದರು.
WhatsApp Image 2024 05 07 at 10.41.52 AM
ಮಾಜಿ ಸಚಿವ, ಶತಾಯುಷಿ ಶ್ರೀ ಡಾ.ಭೀಮಣ್ಣ ಖಂಡ್ರೆ ಅವರು ಸ್ವಗ್ರಾಮ ಭಾಲ್ಕಿಯ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ (ಹೊಸ ಕಟ್ಟಡ) ತಮ್ಮ ಮತ ಚಲಾಯಿಸಿದರು.
WhatsApp Image 2024 05 07 at 12.19.54 PM
ಭಾಲ್ಕಿ ತಾಲೂಕಿನ ಕಪಲಾಪುರ ಗ್ರಾಮದ ಮತಗಟ್ಟೆಯಲ್ಲಿ 110 ವರ್ಷ ವಯಸ್ಸಿನ ಲಕ್ಷ್ಮೀಬಾಯಿ ನಾಗಪ್ಪ ಮಹಾಪೂರೆ ಮತದಾನ ಮಾಡಿದರು.
WhatsApp Image 2024 05 07 at 12.32.33 PM 1
ಹುಮ್ನಾಬಾದ್ ತಾಲೂಕಿನ ಸಿಂಧನಕೇರಾ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಲಭಾಗದ ಬೂತ್‌ ಸಂಖ್ಯೆ 197ರಲ್ಲಿ ಮತ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರು.
WhatsApp Image 2024 05 07 at 12.38.49 PM
ಬೀದರ ನಗರದ ಗಣೇಶ ನಗರದ ಬೂತ್ ಸಂಖ್ಯೆ 212ರಲ್ಲಿ ಬೀದರ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಶೋಕ ಖೇಣಿ ಅವರು ಮತ ಚಲಾಯಿಸಿದರು.
WhatsApp Image 2024 05 07 at 12.50.48 PM
ಭಾಲ್ಕಿಯ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ (ಹೊಸ ಕಟ್ಟಡ) ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಪತ್ನಿ ಗೀತಾ ಖಂಡ್ರೆ ಹಾಗೂ ಕುಟುಂಬಸ್ಥರು ಮತ ಚಲಾಯಿಸಿದರು.

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್ ಈಶ್ವರ ಖಂಡ್ರೆ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕ್ಷೇತ್ರದಲ್ಲಿ ಒಟ್ಟು 18,92,962 ಮತದಾರರಿದ್ದಾರೆ. ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 11.30 ಗಂಟೆವರೆಗೆ ಶೇ.21.92ರಷ್ಟು ಮತದಾನ ಆಗಿದೆ.

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X