ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಭೂಹಗರಣ ಹೆಚ್ಚಾಗಿದ್ದು, ಸಾವಿರಾರು ಎಕರೆ ಜಮೀನು ಭೂಗಳ್ಳರ ಪಾಲಾಗುತ್ತಿದೆ. ಇದೀಗ ಎಚ್ಚೆತ್ತಿರುವ ಅಧಿಕಾರಿಗಳು ಭೂ ಒತ್ತುವರಿಯ ಜಾಲಾಟಕ್ಕೆ ಇಳಿದ್ದಿದ್ದು, ಸಕ್ರಮವನ್ನು ಅಕ್ರಮ ಮಾಡಿ ಮೋಸ ಮಾಡಿ ಭೂಹಗರಣ ನಡೆಸಿರುವ ಘಟನೆಗಳು ಬಯಲಾಗುತ್ತಿವೆ.
ಅತಿ ದೊಡ್ಡ ಭೂ ಅಕ್ರಮದ ತನಿಖೆಗಿಳಿದ ಅಧಿಕಾರಿಗಳು ಅಕ್ರಮವಾಗಿ ಮಂಜೂರು ಮಾಡಿದ್ದ 750 ಎಕರೆ ಜಮೀನನಿನ ಮಂಜೂರಾತಿಯನ್ನು ರದ್ದು ಮಾಡಿದ್ದಾರೆ. ಕೇವಲ 245 ಪ್ರಕರಣಗಳ ವಿಚಾರಣೆ ನಡೆಸಿದಾಗ 750 ಎಕರೆ ಅಕ್ರಮ ಜಮೀನು ದೊರೆತಿದ್ದು, 2019ರಿಂದ 2021ರವರೆಗೆ ನಡೆದಿರುವ ಕಡತಗಳ ವಿಚಾರಣೆ ನಡೆಸಿದ ಅಧಿಕಾರಿಗಳು ಒತ್ತುವರಿ ಕಂಡು ನಿಬ್ಬೆರಗಾಗಿದ್ದಾರೆ. ಇನ್ನೂ 227 ಕಡತಗಳ ವಿಚಾರಣೆ ಬಾಕಿ ಇದ್ದು, ಇನ್ನೆಷ್ಟು ಅಕ್ರಮ ಭೂಹಗರಣ ಬಯಲಾಗುತ್ತೋ ಎಂದು ರೈತ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ಕಳೆದ ಮೂರ್ನಾಲ್ಕು ನಾಲ್ಕು ತಿಂಗಳಿಂದ 15 ಮಂದಿ ತಹಶೀಲ್ದಾರ್ ತಂಡದಿಂದ ಸುದೀರ್ಘ ತನಿಖೆ ನಡೆಯುತ್ತಿದ್ದು, ರಾಜ್ಯ ಸರ್ಕಾರದ ಮುಂದೆ ಹಿರಿಯ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಬಳಿ ಸಾವಿರಾರು ಪುಟಗಳ ಮಾಹಿತಿಯನ್ನು ತನಿಖಾ ಅಧಿಕಾರಿಗಳು ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಉಪನ್ಯಾಸಕರ ನೇಮಕಕ್ಕೆ ವಿದ್ಯಾರ್ಥಿಗಳ ಆಗ್ರಹ
ಇದೇ ವೇಳೆ ಈ ಪ್ರಮಾಣದ ಭೂ ಕಬಳಿಕೆ ಪ್ರಕರಣವನ್ನು ವಿಶೇಷ ನ್ಯಾಯಾಲಯವೂ ಸ್ವಯಂ ಪ್ರೇರಿತವಾಗಿ ವಿಚಾರಣೆಯನ್ನು ಕೈಗೊಂಡಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ “ನಮೂನೆ 50, 53, 57ರ ಅಡಿ ಅರ್ಜಿ ಸಲ್ಲಿಸದೇ ಇದ್ದರೂ, ಸರ್ಕಾರಿ ಜಾಗ ಹೇಗೆ ಮಂಜೂರಾಯಿತು?” ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.