ಕಮಲೇಶ್ ಚಂದ್ರ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಚೆ ನೌಕರರು ಭಾಲ್ಕಿ ಪಟ್ಟಣದ ಅಂಚೆ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.
ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟ (ಎಐಜಿಡಿಎಸ್‌ಯು), ಗ್ರಾಮೀಣ ಅಂಚೆ ಸೇವಕರ ಒಕ್ಕೂಟ (ಎನ್‌ಯುಜಿಡಿಎಸ್‌ಯು) ನೇತೃತ್ವದಲ್ಲಿ ಅಂಚೆ ನೌಕರರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಕಮಲೇಶ್ ಚಂದ್ರ 7ನೇ ವೇತನ ಆಯೋಗದ ವರದಿಯನ್ನು ಸಂಪೂರ್ಣ ಜಾರಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ಅಂಚೆ ಸೇವಕರಿಗೆ ನಾಗರಿಕ ನೌಕರರ, ಪೌರಕಾರ್ಮಿಕರ ಸ್ಥಾನಮಾನ ನೀಡುವುದು, ಕಮಲೇಶ್ ಚಂದ್ರ ಸಮಿತಿ ಶಿಫಾರಸ್ಸಿನಂತೆ ಹಿರಿತನ ಪರಿಗಣಿಸಿ ಸೇವೆ ಪೂರ್ಣಗೊಳಿಸಿದ ಬಳಿಕ ಮುಂಬಡ್ತಿ ನೀಡುವುದು, ಕೇಂದ್ರ ಸರಕಾರದ ಆರೋಗ್ಯ ಯೋಜನೆಯಡಿ ವೈದ್ಯಕೀಯ ಸೌಲಭ್ಯ ಕಲ್ಪಿಸುವುದು, ಗ್ರ್ಯಾಚುಟಿ ಸೇರಿ ವಿವಿಧ ಸೌಲಭ್ಯ ನೀಡಬೇಕೆಂದು ಅಂಚೆ ಸೇವಕರು ಅನಿರ್ದಿಷ್ಟ ಮುಷ್ಕರದ ಮೂಲಕ ಒತ್ತಾಯಿಸಿದರು.