ಕರಾವಳಿ ಫ್ರೆಂಡ್ಸ್ ಮಲ್ಲೇಶ್ವರ ಹಾಗೂ ಸಂಪಿಗೆ ಗೆಳೆಯರ ಬಳಗದ ವತಿಯಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನಡೆಸಲಾಯಿತು.
ಸಂಪಿಗೆ ರಸ್ತೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯದ ಸಮೀಪ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆ (ಸಹ್ಯಾದ್ರಿ) ಮಾಜಿ ನಿರ್ದೇಶಕರಾದ ರಾಮಪ್ರಸಾದ್ ಅವರು ಧ್ವಜಾರೋಹಣಗೈದರು.

ಅತಿಥಿಗಳಾಗಿ ಹೋಟೆಲ್ ಶುಚಿರುಚಿಯ ಮಾಲೀಕರಾದ ಇಸ್ಮಾಯೀಲ್, ವಿಜಯ ಫೂಟ್‌ವೇರ್‌ನ ಶೇಖರ್, ಮೂರ್ತಿ ಮಲ್ಲೇಶ್ವರಂ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕರಾವಳಿ ಫ್ರೆಂಡ್ಸ್ ಮಲ್ಲೇಶ್ವರ ಹಾಗೂ ಸಂಪಿಗೆ ಗೆಳೆಯರ ಬಳಗದ ಅಶ್ರಫ್ ಬೋಳಂತೂರು, ನಿಸಾರ್, ಮಾರುತಿ, ಉಮೇಶ್, ಜಗದೀಶ್, ಶಫೀಕ್ ಬೋಳಂತೂರು, ನವೀದ್, ಅಬ್ದುಲ್ ಖಾದರ್ ಆಸಿಫ್ ಕಡಂಬು, ಅಬ್ದುಲ್ ಅಝೀಝ್ ಕೊಡಗು ಹಾಗೂ ಗಗನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

