ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಸ್ನಾನಗೃಹದಲ್ಲಿ ವೈಫೈ ಕ್ಯಾಮೆರಾ ಇಟ್ಟ ಘಟನೆ ಜೇವರ್ಗಿಯಲ್ಲಿ ಬೆಳಕಿಗೆ ಬಂದಿದೆ. ಕ್ಯಾಮೆರಾ ಇಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಶಾಂತನಗರ ಬಡಾವಣೆಯ ಬಾಲಕಿಯರ ವಸತಿ ನಿಲಯ ಪಕ್ಕದ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದ ಸಲೀಂ ಬಾಷಾ ಎಂಬಾತ ಬಂಧಿತ ಆರೋಪಿ.
ಹಾಸ್ಟೆಲ್ ಕಿಟಕಿಗೆ ವೈಫೈ ಕ್ಯಾಮರಾ ಇರಿಸಿ ಸ್ನಾನಗೃಹದೊಳಗಿನ ದೃಶ್ಯಗಳನ್ನು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಮುಂದಾಗಿದ್ದ, ಸ್ನಾನಕ್ಕೆ ಹೋದ ವಿದ್ಯಾರ್ಥಿನಿಯರು ಕ್ಯಾಮೆರಾ ಇಟ್ಟಿರುವುದನ್ನು ಶಂಕೆ ಬಂದು, ಹಾಸ್ಟೆಲ್ ಮೇಲ್ವಿಚಾರಕರ ಗಮನಕ್ಕೆ ತಂದಿದ್ದಾರೆ. ಮೇಲ್ವಿಚಾರಕರು ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಲಾರಿ-ಜೀಪ್ ಮುಖಾಮುಖಿ ಢಿಕ್ಕಿ: ಮಗು ಸೇರಿ ನಾಲ್ವರು ಸಾವು
ತಹಶೀಲ್ದಾರ್ ಹಾಗೂ ಜೇವರ್ಗಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ, ನಂತರ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.