ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ದೇರಳಕಟ್ಟೆಯಲ್ಲಿರುವ ಕಣಚೂರು ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್ ಕಾಲೇಜಿನಲ್ಲಿ ‘ಶೋಧ: ಹಂಟಿಂಗ್ ಫಾರ್ ಟ್ಯಾಲೆಂಟ್ಸ್ 2024’ ಅಂತರ ಕಾಲೇಜು ಮಟ್ಟದ ಸ್ಪರ್ಧೆಯನ್ನು ಗುರುವಾರ ಆಯೋಜಿಸಲಾಗಿತ್ತು.
ಅಂತರ ಕಾಲೇಜು ಮಟ್ಟದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿರುವ ಅನುಗ್ರಹ ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ತಮ್ಮ ಅನನ್ಯ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಕ್ವಿಝ್ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಖದೀಜಾ ಮಾಹಿರ ಮತ್ತು ರಿಹಾ ಹವ್ವಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಅದೇ ರೀತಿ , ಮ್ಯಾಡ್ ಆಡ್ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯರಾದ ಫಾತಿಮತ್ ಸಾರ ಶೈಭಾ ಮತ್ತು ಆಯಿಷತುಲ್ ಅಸೀಬಾ ಹಾಗೂ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ನೆಬಿಸತ್ ಫಾತಿಮಾ, ಶಮಾ, ಮತ್ತು ಶೌರತ್ ಭಾನು ತಮ್ಮ ಸೃಜನಾತ್ಮಕತೆ ಮತ್ತು ಹಾಸ್ಯಾತ್ಮಕ ಪ್ರಸ್ತುತಿಯಿಂದ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಕಾಲೇಜಿಗೆ ಕೀರ್ತಿ ತಂದುಕೊಟ್ಟದ್ದಕ್ಕಾಗಿ ಅನುಗ್ರಹ ಮಹಿಳಾ ಕಾಲೇಜಿನ ಉಪನ್ಯಾಸ ವೃಂದ, ಅನುಗ್ರಹ ಕಾಲೇಜು ಟ್ರಸ್ಟ್ ಅಭಿನಂದನೆ ಸಲ್ಲಿಸಿದೆ.
