- ಎಕ್ಸ್‌ಕ್ಲೂಸಿವ್ ಸೇರಿದಂತೆ ಅತ್ಯುತ್ತಮ ವರದಿಗಳನ್ನು ಪ್ರಶಸ್ತಿಗೆ ಸಲ್ಲಿಸಬಹುದು
- 2022 ಜುಲೈ 1ರಿಂದ 2023 ಜೂನ್ 30ರವರೆಗೆ ಪ್ರಕಟವಾದ ವರದಿ ಅರ್ಹ
ನಿರತ ಸಾಹಿತ್ಯ ಸಂಪದ ಮತ್ತು ಗಲ್ಫ್ ಕನ್ನಡಿಗ ಇದರ ಜಂಟಿ ಆಶ್ರಯದಲ್ಲಿ ಮೂರನೇ ವರ್ಷದ ಅತ್ಯುತ್ತಮ ವೆಬ್‍ಸೈಟ್ (ಅಂತರ್ಜಾಲ) ವರದಿಗೆ ನೀಡುವ ರಾಜ್ಯಮಟ್ಟದ ಬಿ.ಜಿ.ಮೋಹನ್‍ದಾಸ್ ಪ್ರಶಸ್ತಿ-2023ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2022 ಜುಲೈ 1ರಿಂದ 2023 ಜೂನ್ 30ರವರೆಗೆ ಪ್ರಕಟವಾದ ಮಾನವೀಯ ಮೌಲ್ಯ, ಗ್ರಾಮೀಣ ಸಮಸ್ಯೆ, ತನಿಖಾ ಆಧಾರಿತ ವರದಿ, ಎಕ್ಸ್‌ಕ್ಲೂಸಿವ್ ಸೇರಿದಂತೆ ಅತ್ಯುತ್ತಮ ವರದಿಗಳನ್ನು ಪ್ರಶಸ್ತಿಗೆ ಸಲ್ಲಿಸಬಹುದು.
ಪ್ರಶಸ್ತಿಗೆ ಕನ್ನಡ ವೆಬ್‍ಸೈಟ್‍ನಲ್ಲಿ ಪ್ರಕಟಗೊಂಡ ವರದಿಗಳನ್ನು ಮಾತ್ರ ಪರಿಗಣಿಸಲಾಗುವುದು. ಒಬ್ಬ ಪತ್ರಕರ್ತರಿಗೆ ಒಂದು ವರದಿ ಮಾತ್ರ ಕಳುಹಿಸಲು ಅವಕಾಶವಿದೆ. ಪ್ರಶಸ್ತಿಯು 5,000 ರೂ. ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವಾಗ ವರದಿಯ ಮೂರು ಪ್ರತಿಗಳನ್ನು ಆಗಸ್ಟ್ 10ರೊಳಗೆ ಕಳುಹಿಸಿಕೊಡಬೇಕು. ಜೊತೆಗೆ ವರದಿಯ ವೆಬ್‍ಸೈಟ್ ಲಿಂಕ್ (URL Address Link) ಅನ್ನು ಕಡ್ಡಾಯವಾಗಿ 9844619763 ಈ ನಂಬರಿಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಬೇಕು ಎಂದು ಪ್ರಕಟನೆ ತಿಳಿಸಿದೆ.
ವರದಿಯನ್ನು ದಿನೇಶ್ ಎನ್. ತುಂಬೆ, ಕಾರ್ಯದರ್ಶಿ, ನಿರತ ಸಾಹಿತ್ಯ ಸಂಪದ, ಪ್ರಗತಿ ಪ್ರಿಂಟರ್ಸ್, ತುಂಬೆ – 574 143, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಈ ವಿಳಾಸಕ್ಕೆ ಕಳುಹಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.