ಶಾಸಕ ಭರತ್ ಶೆಟ್ಟಿಯವರು ಶಂಕರಾಚಾರ್ಯ ಪೀಠಾಧಿಪತಿಗಳ ಹೇಳಿಕೆ ಟೀಕೆ ಮಾಡುತ್ತಿದ್ದಾರೆಯೇ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪ್ರಶ್ನಿಶಿದ್ದಾರೆ.
“ಶಂಕರಾಚಾರ್ಯ ಮಠದ ಪೀಠಾಧಿಪತಿಗಳು ರಾಹುಲ್ ಗಾಂಧಿಯ ಭಾಷಣದಲ್ಲಿ ಯಾವುದೇ ಹಿಂಸಾಚಾರದ ವಿಚಾರಗಳು ಇಲ್ಲವೆಂದು ಹೇಳಿಕೆ ನೀಡಿದ ಮೇಲೂ ಭರತ್ ಶೆಟ್ಟಿಯವರು ಅದರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆಂದರೆ ಇವರು ಪೀಠಾಧಿಪತಿಗಳ ವಿರೋಧಿಗಳಲ್ಲವೇ?
ಇವರು ಹಿಂದೂ ಪೀಠಾಧಿಪತಿಗಳ ವಿರೋಧಿಯೇ?” ಎಂದಿದ್ದಾರೆ.
“ರಾಹುಲ್ ಗಾಂಧಿಯವರು ದೇಶದಾದ್ಯಂತ ಸಂಘಪರಿವಾರ, ಬಿಜೆಪಿ ಹಿಂದುತ್ವದ ಸಿದ್ಧಾಂತದ ಹೆಸರಿನಲ್ಲಿ ಹಿಂಸಾಚಾರ ನಡೆಸುವುದನ್ನು ಕಟುವಾಗಿ ಟೀಕಿಸಿದ್ದಾರೆಯೇ ಹೊರತು ಹಿಂದೂ ಧರ್ಮ, ಹಿಂದೂಗಳನ್ನು ಟೀಕೆ ಮಾಡಿಲ್ಲ” ಎಂದು ಹೇಳಿದರು.
“ಓರ್ವ ಶಾಸಕನಾಗಿ ಲೋಕಸಭಾ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿಯವರಿಗೆ ಲೋಕಸಭೆಗೆ ನುಗ್ಗಿ ಕಪಾಲಕ್ಕೆ ಭಾರಿಸಬೇಕು ಎಂದು ಏಕವಚನದಲ್ಲಿ ಬಹಿರಂಗವಾಗಿ ಬೆದರಿಕೆ ಹಾಕಿರುವುದು ಬಿಜೆಪಿಯ ಹಿಂಸಾಚಾರಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ ಸಂಘಪರಿವಾರ, ಬಿಜೆಪಿಯ ಹಿಂಸಾಚಾರ ರಾಜಕೀಯವನ್ನು ಬಹಿರಂಗವಾಗಿ ಟೀಕಿಸಿದ್ದ ಭರತ್ ಶೆಟ್ಟಿ ಬಿಜೆಪಿ ಪಕ್ಷ ಸೇರಿ ಶಾಸಕರಾದ ಬಳಿಕ ಭಯಂಕರ ಹಿಂದುತ್ವವಾದಿಯಾಗಿದ್ದರೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೇಂದ್ರ ಸರ್ಕಾರದ ವಿರುದ್ದ ಸಮರಶೀಲ ಹೋರಾಟಕ್ಕೆ ಕಾರ್ಮಿಕ ವರ್ಗ ಸಜ್ಜಾಗಬೇಕು: ಜೆ ಬಾಲಕೃಷ್ಣ ಶೆಟ್ಟಿ
“ಜೆಡಿಎಸ್ ಪಕ್ಷದಲ್ಲಿದ್ದಾಗ ತನ್ನ ಹಿಂದಿನ ಮಾತನ್ನು ಭರತ್ ಶೆಟ್ಟಿಯವರು ಒಮ್ಮೆ ಯೋಚಿಸುವ ಅಗತ್ಯವಿದೆ. ಭರತ್ ಶೆಟ್ಟಿ ಎರಡೂ ನಾಲಿಗೆಯ ಹಾವಿನಂತೆ ವರ್ತಿಸುವ ಬದಲಾಗಿ ಸಂಘಪರಿವಾರ, ಬಿಜೆಪಿಯ ಹಿಂಸಾಚಾರದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಘಪರಿವಾರ, ಬಿಜೆಪಿ ಕಾರ್ಯಕರ್ತರ ಮನೆಗೆ ತೆರಳಿ ಅವರ ಮನೆಯ ಪರಿಸ್ಥಿತಿಯನ್ನು ಒಮ್ಮೆ ಅವಲೋಕನ ಮಾಡಿದರೆ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಮಾಡಿದ ಭಾಷಣದ ನಿಜವಾದ ಸ್ವರೂಪ ಅರ್ಥವಾಗುತ್ತದೆ” ಎಂದು ತಿರುಗೇಟು ನೀಡಿದರು.