ಬಸವ ಭೂಮಿಯಲ್ಲಿ ಬಸವರಥ ಯಾತ್ರೆಗೆ ಚಾಲನೆ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ದೇಶ ಮೊದಲು ಎನ್ನುವ ನಿಟ್ಟಿನಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಅಭಿಪ್ರಾಯಪಟ್ಟರು.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದ ಆವರಣದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಭಾರತ ವಿಕಾಸ
ಸಂಗಮದ ಸ್ವರ್ಣ ಜಯಂತಿ ಮತ್ತು ಭಾರತೀಯ ಸಂಸ್ಕೃತಿ ಉತ್ಸವ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಬಸವ ರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ ದೇಶಾಭಿಮಾನ ಮೂಡಿಸುವ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಜ.28 ರಿಂದ ಫೆ.6 ರವರೆಗೆ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವ-7ರ ನಿಮಿತ್ಯ ಬಸವ ತತ್ವ ಪ್ರಸಾರ ಅಂಗವಾಗಿ ಬಸವರಥ ಯಾತ್ರೆ ನಡೆಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ರಾಷ್ಟ್ರದ ಅಭಿವೃದ್ಧಿಗೆ ಬಸವತತ್ವ ಅತ್ಯವಶ್ಯಕ ಎನ್ನುವುದು ಎಲ್ಲರೂ ಒಪ್ಪಬೇಕಾದ ಸಂಗತಿಯಾಗಿದೆʼ ಎಂದರು.
ವಿಕಾಸ ಅಕಾಡೆಮಿಯ ಸಹ ಸಂಚಾಲಕ ರೇವಣಸಿದ್ದ ಜಾಡರ ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕತೆಯ ಜೊತೆಗೆ ಪ್ರಾಚೀನ
ಪರಂಪರೆಯ ಸಂಸ್ಕೃತಿಯನ್ನೂ ನಾವು ಗೌರವಿಸಬೇಕುʼ ಎಂದು ಹೇಳಿದರು.
ಶರಣಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿ, ʼಉತ್ತಮ ಗುರುಪರಂಪರೆ ಇದ್ದಾಗ ಮಾತ್ರ ಗುಣಮಟ್ಟದ ವಿದ್ಯಾರ್ಥಿಗಳು ತಯ್ಯಾರಾಗುತ್ತಾರೆʼ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿ, ಬಸವರಾಜ ಪಾಟೀಲ ಸೇಡಂ ಅವರ ದೇಶಭಕ್ತಿ ಕಾರ್ಯ ಮೆಚ್ಚುವಂತಹದ್ದುʼ ಎಂದರು.
ಈ ಸುದ್ದಿ ಓದಿದ್ದೀರಾ? ಔರಾದ್ | ಪ್ರತಿಭಾ ಕಾರಂಜಿ : ಅರೇಬಿಕ್ ಪಠಣ ಸ್ಪರ್ಧೆಯಲ್ಲಿ ಅಫ್‌ನಾನ್ ರಾಜ್ಯ ಮಟ್ಟಕ್ಕೆ ಆಯ್ಕೆ
ವಿಕಾಸ ಅಕಾಡೆಮಿಯ ತಾಲೂಕು ಸಂಚಾಲಕ ಅಕ್ಷಯಕುಮಾರ ಎಸ್ ಮುದ್ದಾ, ನ್ಯಾಯವಾದಿ ರಾಜಶೇಖರ ಅಷ್ಟೂರೆ, ವಚನ ಸಾಹಿತ್ಯ ಪರಿಷತ್‍ನ ಗುಂಡಪ್ಪ ಸಂಗಮಕರ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಸೋಮನಾಥಪ್ಪ ಅಷ್ಟೂರೆ, ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ಧಾಬಶಟ್ಟಿ, ಸಂತೋಷ ಹಡಪದ, ಸಂತೋಷ ಬಿಜಿ ಪಾಟೀಲ, ಬಾಬು ಬೆಲ್ದಾಳ, ಬಾಬು ಲಾಧಾ, ಶಾಂತಯ್ಯಾ ಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.