ಬೀದರ್‌ | ಇಡೀ ಜೀವಸಂಕುಲವನ್ನು ʼನಮ್ಮವʼ ಎಂದು ಕರೆದವರು ಬಸವಣ್ಣ : ಸಭಾಪತಿ ಬಸವರಾಜ ಹೊರಟ್ಟಿ

Date:

Advertisements

ಜಗತ್ತಿನ ಇಡೀ ಜೀವಸಂಕುಲವನ್ನು ʼಇವನಮ್ಮವʼ ಎಂದು ಕರೆಯುವ ಮೂಲಕ ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದವರು ಬಸವಣ್ಣನವರು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಬಸವಕಲ್ಯಾಣದಲ್ಲಿ ವಿಶ್ವ ಬಸವಧರ್ಮ ಟ್ರಸ್ಟ್‌ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿದ್ದ 44ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, “ನಾವು ರಾಜಕೀಯವನ್ನು ಸ್ವಲ್ಪ ದೂರವಿಟ್ಟು ಅನುಭವ ಮಂಟಪ ಹಾಗೂ ಕನ್ನಡ ನಾಡಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೆ ದೇಶ-ವಿದೇಶದಲ್ಲಿ ಅನುಭವ ಮಂಟಪ ಕೀರ್ತಿ ಬೆಳಗುತ್ತದೆ. ಇಂಗ್ಲೆಂಡ್‌ ದೇಶದವರು ಪ್ರಜಾಪ್ರಭುತ್ವ ಮೊದಲು ತಂದವರು ನಾವು ಎಂದು ಹೇಳುತ್ತಿದ್ದರು. ಆದರೆ ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಪ್ರಥಮವಾಗಿ ಕೊಟ್ಟವರು ಅನುಭವ ಮಂಟಪದ ಅಲ್ಲಮಪ್ರಭು ಹಾಗೂ ಬಸವಣ್ಣನವರು ಎಂಬುದು ಅವರಿಗೆ ನಾವು ತಿಳಿಸಿದ್ದೇವೆ” ಎಂದರು.

ಬಸವಣ್ಣನವರ ಅಭಿಮಾನಿ ಸಿಎಂ ಸಿದ್ಧರಾಮಯ್ಯ:

Advertisements

ರಾಜ್ಯದಲ್ಲಿ ಈ ಹಿಂದೆ 6-7 ಜನ ಲಿಂಗಾಯತರು ಮುಖ್ಯಮಂತ್ರಿಗಳಾಗಿದ್ದರು. ವಿಧಾನ ಸಭೆಯಲ್ಲಿ ಅರ್ಧದಷ್ಟು ಲಿಂಗಾಯತ ಶಾಸಕರೂ ಇದ್ದರು, ಆದರೂ ಸಹ ಲಿಂಗಾಯತ ಧರ್ಮದ ಪ್ರಗತಿ ಸಾಧ್ಯವಾಗಿಲ್ಲ. ಬೇರೆ ಬೇರೆ ಕಾರಣದಿಂದ ಎಲ್ಲರೂ ಹಂಚಿ ಹೋಗಿದ ಪರಿಣಾಮ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿತ್ತು. ಬರೀ ಭಾಷಣಕ್ಕೆ ಸಿಮೀತರಾಗದೆ ನಾವೆಲ್ಲರೂ ಒಗ್ಗೂಡಿ ಬಸವತತ್ವ ಉಳಿವಿಗಾಗಿ ಶ್ರಮಿಸಿದರೆ ಶರಣರ ಕಾರ್ಯಕ್ಷೇತ್ರ ಬಸವಕಲ್ಯಾಣ ಅಂತರಾಷ್ಟ್ರೀಯ ತಾಣವಾಗಿ ಮಾಡಬಹುದು” ಎಂದು ಹೇಳಿದರು.

“ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಸವಣ್ಣ ಹಾಗೂ ಲಿಂಗಾಯತ ಧರ್ಮದ ಮೇಲೆ ಅತೀವ ಅಭಿಮಾನವಿದೆ. ಈ ಕಾರಣಕ್ಕಾಗಿಯೇ ಅವರು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯವಾಗಿ ಅಳವಡಿಸಲು ಆದೇಶ ಹೊರಡಿಸಿದ್ದಾರೆ” ಎಂದು ಬಣ್ಣಿಸಿದರು.

ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸವಣ್ಣನವರ ಹೆಸರಿಡಿ:

ಕರ್ನಾಟಕದ ಯಾವುದಾದರೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವಣ್ಣನವರ ಹೆಸರು ನಾಮಕರಣ ಮಾಡಬೇಕು. ಈ ಕುರಿತು ಪಕ್ಷಾತೀತವಾಗಿ ಎಲ್ಲರೂ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ವೇದಿಕೆಯಲಿದ್ದ ಜಿಲ್ಲಾ ಸಚಿವ ಈಶ್ವರ ಖಂಡ್ರೆ ಹಾಗೂ ರಹೀಮ್ ಖಾನ್ ಅವರಿಗೆ ಸಭಾಪತಿಗಳು ಸಲಹೆ ನೀಡಿದರು.

ಪ್ರಶಸ್ತಿ ಪ್ರದಾನ :

ಸುಪ್ರೀಕೊರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್‌ ಅವರಿಗೆ ಡಾ. ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ ಹಾಗೂ ಸಾಹಿತಿ ಬಿ.ವಿ.ಶಿರೂರ ಅವರಿಗೆ ಡಾ. ಎಂ.ಎಂ. ಕಲಬುರ್ಗಿ ಸಾಹಿತ್ಯ ಸಂಶೋಧನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎರಡು ಪ್ರಶಸ್ತಿಗಳು ಕ್ರಮವಾಗಿ 1 ಲಕ್ಷ ರೂ. ಹಾಗೂ 50 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ.

anubhav mantap prize nov 25
ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್‌ ಹಾಗೂ ಸಾಹಿತಿ ಬಿ.ವಿ.ಶಿರೂರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹುಲಸೂರು ಡಾ. ಶಿವಾನಂದ ಸ್ವಾಮೀಜಿ, ಹಾರಕೂಡದ ಚನ್ನವೀರ ಶಿವಾಚಾರ್ಯರರು, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ, ವಿ.ಸಿದ್ದರಾಮಣ್ಣ, ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಖಾತೆ ಸಚಿವ ರಹೀಮ್ ಖಾನ್, ಶಾಸಕ ಶರಣು ಸಲಗರ್, ವಿಧಾನ ಪರಿಷತ್ ಸದಸ್ಯರಾದ ಡಾ: ಚಂದ್ರಶೇಖರ್ ಪಾಟೀಲ, ಭೀಮರಾವ ಪಾಟೀಲ ಸೇರಿದಂತೆ ಮುಖಂಡರಾದ ಬಸವರಾಜ ಪಾಟೀಲ ಸೇಡಂ, ಗುರುನಾಥ ಕೊಳ್ಳೂರು, ಬಸವರಾಜ ಬುಳ್ಳಾ, ಬಾಬು ವಾಲಿ ಮತ್ತು ಜಿ.ಪಂ. ಸಿಇಒ ಶಿಲ್ಪಾ ಬಿ.ಎಂ. ಉಪಸ್ಥಿತರಿದ್ದರು.

ವಚನಗಳಂತೆ ಬದುಕಿದರೆ ಲಿಂಗಾಯತ ಸ್ವತಂತ್ರ ಧರ್ಮ ತಾನಾಗಿಯೇ ಆಗುತ್ತದೆ: 

ಬಸವಾದಿ ಶರಣರ ವಚನಗಳಂತೆ ಎಲ್ಲರೂ ಬದುಕಿದರೆ, ಲಿಂಗಾಯತ ಧರ್ಮ ಸ್ವತಂತ್ರ ತಾನಾಗಿಯೇ ಆಗುತ್ತದೆ.
ಲಿಂಗಾಯತ ಧರ್ಮದ ಧರ್ಮಗುರು ಬಸವಣ್ಣನವರು ಎಂದು ಒಪ್ಪಿದ ಎಲ್ಲರೂ ಒಗ್ಗಟ್ಟಾದರೆ ಯಾವ ಶಕ್ತಿಯೂ
ತಡೆಯಲಾರದು. ಈ ಧರ್ಮ ಆಶಾವಾದಿ ಧರ್ಮವಾಗಿದೆ. ನಿರಾಶವಾದಿ ಧರ್ಮವಲ್ಲ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ  ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ವಿಶ್ವ ಬಸವಧರ್ಮ ಟ್ರಸ್ಟ್‌ ವತಿಯಿಂದ ಬಸವಕಲ್ಯಾಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ 44ನೇ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ ಪ್ರಥಮ ದಿನದ “ಲಿಂಗಾಯತ ಸ್ವತಂತ್ರ ಧರ್ಮ: ಸಮಸ್ಯೆ-ಸವಾಲು ಹಾಗೂ ಪರಿಹಾರಗಳು” ಗೋಷ್ಠಿಯ ದಿವ್ಯಸನ್ನಿಧಾನ ವಹಿಸಿ ಶ್ರೀಗಳು ಆಶೀರ್ವಚನ ನುಡಿದರು.

ಚಿಂತಕ ಡಾ.ಜೆ.ಎಸ್.ಪಾಟೀಲ ವಿಜಯಪುರ ಮಾತನಾಡಿ, “ಇಂದು ಬಹುತೇಕ ಲಿಂಗಾಯತ ಧರ್ಮದಲ್ಲಿರುವ ಶ್ರೀಮಂತ ವರ್ಗವರು ಈ ಧರ್ಮಕ್ಕೆ ಸಮಸ್ಯೆಯಾಗಿದ್ದಾರೆ. ಇವರೆಲ್ಲ ತಮ್ಮ ಜೀವನಶೈಲಿ ಬದಲಾವಣೆ ಮಾಡಿಕೊಂಡ ಏಕಲಿಂಗನಿಷ್ಠೆ ಅಳವಡಿಸಿಕೊಂಡು ಬದುಕಿದರೆ ಎಲ್ಲ ಸವಾಲುಗಳಿಗೆ ಪರಿಹಾರ ದೊರೆತಂತಾಗುತ್ತದೆ” ಎಂದರು.

ವಿಶ್ವಬಸವಧರ್ಮ ಟ್ರಸ್ಟ್ ಸದಸ್ಯ ಕುಪೇಂದ್ರ ಪಾಟೀಲ ಅವರಿಂದ ಬಸವಗುರು ಪೂಜೆ ನೆರವೇರಿಸಿದರು. ರಾಜಕುಮಾರ ಹೂಗಾರ, ರಾಮಚಂದ್ರ ಕಲ್ಲಹಿಪ್ಪರ್ಗಿ ಮುಂತಾದವರಿಂದ ವಚನ ಸಂಗೀತ ನಡೆಯಿತು. ಶಿವಪ್ರಿಯ ಲಂಬೆ ಕೋಲ್ಹಾಪೂರ ಇವರಿಂದ ವಚನ ನೃತ್ಯ ಪ್ರದರ್ಶನಗೊಂಡಿತು. ರಾಜ್ಯಮಟ್ಟದ ಬಸವಣ್ಣನವರ
ವಚನಕಂಠಪಾಠ ಸ್ಪರ್ಧೆಯಲ್ಲಿ 750 ವಚನಗಳು ಹೇಳಿ ಪ್ರಥಮ ಸ್ಥಾನ ಪಡೆದ ಲಾವಣ್ಯ ಮಂಜುನಾಥ ಅಂಗಡಿ, ಬೆಳಗಾವಿ ಹಾಗೂ 698 ವಚನಗಳು ಹೇಳಿ ದ್ವಿತೀಯ ಸ್ಥಾನ ಪಡೆದ ಜಗದೀಶ ವಿ.ಮರವಳ್ಳಿ ಹಾಗೂ 695 ವಚನಗಳು ಹೇಳಿ ತೃತೀಯ ಸ್ಥಾನ ಪಡೆದ ಮಂಜಪ್ಪ ಚಿದಾನಂದ, ಇಳಕಲ್ಲ ಅವರಿಗೆ ಸನ್ಮಾನಿಸಲಾಯಿತು.

ಕೂಡಲ ಸಂಗಮ ಬಸವಧರ್ಮ ಪೀಠದ ಡಾ.ಮಾತೆ ಗಂಗಾದೇವಿ, ಕೋರಣೇಶ್ವರ
ಸ್ವಾಮಿಗಳು, ಶರಣಬಸವ ಸ್ವಾಮಿಗಳು, ವಿಜಯಪುರದ ಬಸವಲಿಂಗ ಸ್ವಾಮಿಗಳು, ಬಸವಕಲ್ಯಾಣ ಬಸವಮಹಾಮನೆಯ ಸಿದ್ಧರಾಮ ಮಹಾಸ್ವಾಮಿಗಳು, ಪೂಜ್ಯ ಅಕ್ಕ ಅನ್ನಪೂರ್ಣತಾಯಿ, ಪ್ರಭುದೇವರು, ಸೋನಾಲಿಗಿರಿ ಬೆಡಸೂರು ಪರ್ವತಲಿಂಗ ಪರಮೇಶ್ವರ, ಕಲ್ಲಖೋರಾ ಅನೀಲ ಮಹಾರಾಜ ದಿವ್ಯ ಸನ್ನಿಧಾನ ವಹಿಸಿದ್ದರು.

ರಾಷ್ಟ್ರೀಯ ಬಸವದಳ ರಾಷ್ಟ್ರಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಗೋಷ್ಠಿಯ ಅಧ್ಯಕ್ಷತೆ ವಹಿಸಿದರು. ಮುಖ್ಯ
ಅತಿಥಿಗಳಾಗಿ, ಆರ್.ಕೆ.ಪಾಟೀಲ, ಕಲಬುರಗಿ, ಬಿ.ಎಂ.ಪಾಟೀಲ ಕೋಲ್ಹಾಪೂರ, ಮಾಧವರಾವ ಪಾಟೀಲ ಟಾಕಳಿಕರ್, ಸೋಮಶೇಖರ ಪಾಟೀಲ, ಡಾ.ಅರವಿಂದ ಭಾತಂಬ್ರೆ, ಸುನೀಲ ಮಿಠಕರಿ, ಬಾಬು ಪಾಂಡ್ರೆ ಉದಗೀರ, ಮಾಲತಿ ಇವಳೆ ಕಲಬುರಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಡಿವ ಜನರ ಮಹಾಧರಣಿ: ಶುರುವಾಗಲಿ ಜನಪರ್ಯಾಯ

ಡಾ.ಸಂಜುಕುಮಾರ ಜುಮ್ಮಾ ನಿರೂಪಿಸಿದರು. ಅಮರೇಶ ಸ್ವಾಮಿ ವಂದಿಸಿದರು. ಕೊನೆಯಲ್ಲಿ ಗುರುಚನ್ನಬಸವ ಸಾಂಸ್ಕೃತಿಕ ಕಲಾ ಮತ್ತು ಕ್ರೀಡಾ ವೇದಿಕೆ ಭಾಲ್ಕಿ ಕಲಾವಿದರಿಂದ `ಮಹಾಕ್ರಾಂತಿ’ ನಾಟಕ ಪ್ರದರ್ಶನಗೊಂಡಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

Download Eedina App Android / iOS

X